ಇತ್ತೀಚಿನ ಸುದ್ದಿ
ಶಿವಮೊಗ್ಗದಲ್ಲಿ ಯೋಗ ಪ್ರದರ್ಶಿಸಿ ನಾಡಿನ ಗಮನ ಸೆಳೆದ ಸ್ಪೀಕರ್ ಖಾದರ್!: 6ನೇ ತರಗತಿಯಲ್ಲೇ ಕರಗತ!!
22/10/2023, 22:47
ಪಲ್ಲವಿ ರಾಮಯ್ಯ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಗಣೇಶೋತ್ಸವ ವೇಳೆ ತಾಲೀಮು ಪ್ರದರ್ಶಿಸಿ ಸುದ್ದಿ ಮಾಡಿದ್ದ ಸ್ಪೀಕರ್ ಅವರು ಇದೀಗ ಯೋಗ ಪ್ರದರ್ಶನ ನೀಡುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮವನ್ನು ಯು.ಟಿ. ಖಾದರ್ ಉದ್ಘಾಟಿಸಿ, ಯೋಗಪಟುಗಳೊಂದಿಗೆ ತಾವು ಕೂಡ ಯೋಗ ಮಾಡಿದ್ದಾರೆ. ಖಾದರ್ ಅವರು ಹೆಚ್ಚು ಕಡಿಮೆ ಎಲ್ಲಾ ಆಸನಗಳನ್ನು ಲೀಲಾಜಾಲವಾಗಿ ಮಾಡಿ ಶಿವಮೊಗ್ಗ ಮಾತ್ರವಲ್ಲ, ಇಡೀ ನಾಡಿನ ಗಮನ ಸೆಳೆದಿದ್ದಾರೆ.
ನನ್ನ ಬಾಲ್ಯಾವಸ್ಥೆಯಲ್ಲೇ 6ನೇ ತರಗತಿಯಿಂದ ನಾನು ಯೋಗಾಸನ ಮಾಡುತ್ತಿದ್ದೇನೆ.
ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು.ಯೋಗವನ್ನು ಎಲ್ಲರು ಮಾಡಬೇಕು ಎಂದು ಹೇಳಿದ್ದಾರೆ.
ನನ್ನ ಅಜ್ಜ (ತಾಯಿಯ ತಂದೆ) ಅವರು ಯೋಗ ಗುರುವಿಗೆ ಮನೆಗೆ ಬಂದು ಕಲಿಸಿಕೊಡುವಂತೆ ಕರೆಯುತ್ತಿದ್ದರು. ಇದರಿಂದ ಯೋಗ ನನಗೆ ಕಲಿಯಲು ಸಾಧ್ಯವಾಯಿತು ಎಂದು ಯು.ಟಿ. ಖಾದರ್ ಹೇಳಿದರು.