ಇತ್ತೀಚಿನ ಸುದ್ದಿ
ಶಿವಮೊಗ್ಗ ಅಹಿತಕರ ಘಟನೆ: ರಾತ್ರಿ ಬೈಕ್ ಸಂಚಾರ, ಇಬ್ಬರ ಪ್ರಯಾಣಕ್ಕೆ ನಿಷೇಧ; 18ರ ವರೆಗೆ ನಿಷೇಧಾಜ್ಞೆ
16/08/2022, 21:07
ಶಿವಮೊಗ್ಗ(reporterkarnataka.com): ಅಹಿತಕರ ಘಟನೆಯಿಂದ ಉದ್ವಿಗ್ನಗೊಂಡಿರುವ ಶಿವಮೊಗ್ಗ ನಗರದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು,
ಅಲ್ಲಿವರೆಗೆ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡದಂತೆ ನಿಷೇಧಿಸಲಾಗಿದೆ. ರಾತ್ರಿ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಅವಧಿಯಲ್ಲಿ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆವರೆಗೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದು, ಇದರ ಜೊತೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಸಂಚರಿಸುವುದನ್ನು ನಿಷೇಧಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ 40 ವರ್ಷ ಮೇಲ್ಪಟ್ಟವರು, ರೋಗಿಗಳನ್ನು ಕರೆದೊಯ್ಯಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ವಾಹನಗಳ ನಿರಂತರ ತಪಾಸಣೆಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.