6:31 PM Tuesday20 - January 2026
ಬ್ರೇಕಿಂಗ್ ನ್ಯೂಸ್
ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ

ಇತ್ತೀಚಿನ ಸುದ್ದಿ

ಶಿಷ್ಟಾಚಾರ ಬದಿಗೊತ್ತಿ ಗೇಟಿನಡಿ ನುಸುಳಿದ ಸ್ಫೀಕರ್ ಖಾದರ್!!: ಜನರ ಬವಣೆ ಸ್ವಂತ ಅನುಭವಕ್ಕೆ!

20/01/2024, 21:03

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯದ ಎರಡನೇ ಅತ್ಯುನ್ನತ ಸ್ಥಾನವಾದ ವಿಧಾನ ಸಭೆ ಸ್ಫೀಕರ್ ಸ್ಥಾನವನ್ನು ಅಲಂಕರಿಸಿರುವ ಯು.ಟಿ. ಖಾದರ್ ಅವರು ತನ್ನೆಲ್ಲ ಶಿಷ್ಟಾಚಾರವನ್ನು ಬದಿಗೊತ್ತಿ ಜನಸಾಮಾನ್ಯರ ಕಷ್ಟವನ್ನು ಸ್ವತಃ ತಾನೇ ಅನುಭವಿಸಿದ ಪ್ರಸಂಗ ಅವರ ಸ್ವಕ್ಷೇತ್ರದಲ್ಲಿ ಶನಿವಾರ ನಡೆಯಿತು.



ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಿಂದ ತೊಕ್ಕೊಟ್ಟು ಒಳಪೇಟೆಗೆ ಹೋಗುವ ಅಡ್ಡರಸ್ತೆಯನ್ನು ಅನೇಕ ವರ್ಷಗಳಿಂದ ಜನರು ಕಾಲುದಾರಿಯಾಗಿ ಉಪಯೋಗಿಸುತ್ತಿದ್ದರು. ರೈಲ್ವೆ ಟ್ರ್ಯಾಕ್ ನಿಂದಾಗಿ ಈ ರಸ್ತೆಯ ನ್ನು ಬಳಸಬೇಕಿತ್ತು. ಆದರೆ ಮೊನ್ನೆ ಮೊನ್ನೆ ಯಾವುದೇ ಸೂಚನೆ ನೀಡದೆ ರೈಲ್ವೆ ಇಲಾಖೆಯಿಂದ ಈ ದಾರಿಯನ್ನು ಮುಚ್ಚಲಾಗಿದೆ. ಇಲ್ಲೊಂದು ಕಬ್ಬಿಣದ ಸಲಾಕೆಗಳನ್ನು ಬಳಸಿ ಗೇಟ್ ಅಳವಡಿಸಲಾಗಿದೆ. ಗೇಟಿ ಅಡಿಯಿಂದ ಜನರು ಶ್ವಾನ ತರಹ ತೂರಿಕೊಂಡು ಆ ಕಡೆಯಿಂದ ಈ ಕಡೆಗೆ ಬರಬೇಕು. ಮಹಿಳೆಯರಿಗೆ ಹಾಗೂ ಕೈಯಲ್ಲಿ ಸಾಮಾಗ್ರಿಗಳನ್ನು ಹಿಡಿದುಕೊಂಡು ಹೋಗುವವರಿಗೆ ಗೇಟಿನಡಿಯಿಂದ ತೂರಲು ಸಾಧ್ಯವೇ ಇಲ್ಲ. ಈ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಯವರಿಗೆ ದೂರು ಕೂಡ ನೀಡಿ ರಸ್ತೆ ತೆರವಿಗೆ ಮನವಿ ಮಾಡಿದ್ದರು. ವಿಷಯ ಅರಿತ ಸ್ಪೀಕರ್ ಖಾದರ್ ಅವರು ಸ್ವತಃ ತಾನೇ ಫೀಲ್ಡಿಗಿಳಿದರು. ಗೇಟು ಅಳವಡಿಸಿದ ಜಾಗಕ್ಕೆ ಬಂದರು. ಜನಸಾಮಾನ್ಯರು ಗೇಟಿನಡಿ ತೂರಿದ ಹಾಗೆ ತಾನು ಕೂಡ ತೂರಿ ಈ ಕಡೆ ಬಂದು ಜನರು ಪಡುವ ಕಷ್ಟವನ್ನು ಸ್ವತಃ ತಾನೇ ಅನುಭವಿಸಿದರು. ಈ ಕುರಿತು ಸಭೆ ಕರೆದು ಕ್ರಮ ಕೈಗೊಳ್ಳಲು ಸ್ಫೀಕರ್ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು