2:09 AM Friday1 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ: ಅಕ್ಷರ ಸಂತ ಹರೇಕಳ ಹಾಜಬ್ಬ

02/12/2023, 22:02

ಕುತ್ಲೂರು(reporterkarnataka.com): ಕುತ್ಲೂರು ಸರಕಾರಿ ಶಾಲೆಯ ಅಭಿವೃದ್ಧಿ ನೋಡಿ ಅತ್ಯಂತ ಹೆಚ್ಚು ಖುಷಿ ಪಟ್ಟಿರುವುದಾಗಿ ಪದ್ಮಶ್ರೀ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬ ಹೇಳಿದ್ದಾರೆ.
ಅವರು ಇಂದು ಬೆಳ್ತಂಗಡಿ ತಾಲೂಕಿನ ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಊರಿನ ಜನ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿದಾಗ ಸಾಮೂಹಿಕ ಪ್ರಯತ್ನದಿಂದ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ನಾನು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿ. ನನ್ನ ಊರಿಗೆ ಸರಕಾರಿ ಶಾಲೆ ಆಗಬೇಕೆಂಬ ಇಚ್ಛೆಯಿಂದ ಜನಪ್ರತಿನಿಧಿಗಳು, ಮಾಧ್ಯಮಗಳು ಸೇರಿದಂತೆ ಶಿಕ್ಷಣದ ಆಸಕ್ತಿ ಹೊಂದಿರುವ ಜನರ ಸಹಕಾರ ದಿಂದ ನನ್ನ ಆಸೆ ಈಡೇರಿದೆ. ಅದೇ ರೀತಿ ಕುತ್ಲೂರಿನಲ್ಲಿಯೂ ಎಲ್ಲ ಜನರ ಸಹಕಾರದಿಂದ ಶಾಲಾ ತೋಟ,ಸಂಸ್ಥೆ ಬೆಳೆದು ಬಂದಿರುವುದು ನೋಡಿದಾಗ ಅತ್ಯಂತ ಹೆಚ್ಚು ಸಂತೋಷವಾಯಿತು ಎಂದು ಹಾಜಬ್ಬ ವಿವರಿಸಿದರು.
ಶಾಲಾ ತೋಟದ ಉದ್ಘಾಟನೆ ಸಮಾರಂಭದಲ್ಲಿ ನಾರಾವಿ ಅಧ್ಯಕ್ಷ ರಾಜ ವರ್ಮ ಜೈನ್ ಅಧ್ಯಕ್ಷ ತೆ ವಹಿಸಿದ್ದರು.ಧರ್ಮ ಸ್ಥಳದ ಧರ್ಮೋಥ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವೀರು ಶೆಟ್ಟಿ,ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯಕ ಯೋಜನಾಧಿಕಾರಿ ಆನಂದ ಸುವರ್ಣ, ಇತರ ಅತಿಥಿ ಗಳಾದ ಜೀವಂಧರ ಕುಮಾರ್, ಸತೀಶ್ ಪಡಿವಾಳ್, ಕೃಷ್ಣ ಪ್ಪ ಪೂಜಾರಿ,ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ,ಮುಖ್ಯೋಪಾಧ್ಯಾಯರಾದ ರೂಪ ಕುಮಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿ ಕಾರಿ ಪುಷ್ಪ ರಾಜ್ ಬಿ.ಎನ್,ಉಪಾಧ್ಯಕ್ಷ ಭಾಸ್ಕರ ರೈ ಕೆ,ಪತ್ರಕರ್ತ ಧನಕೀರ್ತಿ ಅರಿಗ, ಎಸ್ ಡಿಎಂಸಿ ಉಪಾಧ್ಯಕ್ಷ ರಾದ ಜ್ಯೋತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಉಪಸ್ಥಿತರಿದ್ದರು.

ಎಸ್ ಡಿಎಂ ಸಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು.ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು