12:22 PM Wednesday27 - November 2024
ಬ್ರೇಕಿಂಗ್ ನ್ಯೂಸ್
ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ…

ಇತ್ತೀಚಿನ ಸುದ್ದಿ

ಶಿಕ್ಷಣ, ಪರಿಸರ: 24 ಸಾವಿರ ಕಿ.ಮೀ. ಸೈಕಲ್ ಜಾಥಾ ಪೂರೈಸಿದ ಬೆಂಗಳೂರಿನ ಇಬ್ಬರು ಯುವಕರು

13/03/2022, 10:28

ಬೆಂಗಳೂರು(reporterkarnataka.com): ಬಿಕಾಂ ಪದವೀಧರರಾದ 23 ವರ್ಷದ ಇಬ್ಬರು ಯುವಕರು ಶಿಕ್ಷಣ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ 245 ದಿನಗಳ ಕಾಲ ಕೈಗೊಂಡಿದ್ದ ಸೈಕಲ್ ಜಾಥಾ ಯಶಸ್ವಿಯಾಗಿದ್ದು, ಶನಿವಾರ ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದರು.

ತಮ್ಮದೇ ಕ್ಷೇತ್ರದ ಈ ಯುವಕರನ್ನು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಬರಮಾಡಿಕೊಂಡರು. 

ಎಂ. ಧನುಷ್ (23) ಮತ್ತು ವೈ.ಬಿ. ಹೇಮಂತ್ (23) ಅವರು 245 ದಿನಗಳಲ್ಲಿ 29 ರಾಜ್ಯ ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಕಲ್ ಜಾಥ ಕೈಗೊಂಡು ಶಿಕ್ಷಣ ಮತ್ತು ಪರಿಸರ ಜಾಗೃತಿ ಮೂಡಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಈ ಯುವಕರು ಈಗಾಗಲೇ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. 

ಪರಿಸರ ಸಂರಕ್ಷಣೆ, ಕಡ್ಡಾಯ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಬೆಂಗಳೂರಿನ ಶಿಶು ಮಂದಿರ್ ಸಂಸ್ಥೆಯ ರೋಟ್ರ್ಯಾಕ್ಟರ್ ಕ್ಲಬ್ನ ಇಬ್ಬರು ಯುವಕರು ಕಳೆದ 8 ತಿಂಗಳ ಹಿಂದೆ ಸೈಕಲ್ ಜಾಥಾ ಆರಂಭಿಸಿದ್ದರು. ಮಾ.12ರ ಶನಿವಾರ ಕೋಲಾರ ಜಿಲ್ಲೆಯ ಮುಖಾಂತರ ಬೆಂಗಳೂರು ನಗರಕ್ಕೆ ಆಗಮಿಸಿದರು. ಈ ಯುವಕರು ನಗರದ ಕಾಡುಗೋಡಿಯ ಮಹದೇವಪುರ ಕ್ಷೇತ್ರದವರಾಗಿದ್ದು ಕಳೆದ ಜುಲೈ 11 ರಂದು ಬೆಂಗಳೂರಿನ ವಿಧಾನಸೌಧದ ಎದುರು ಜಾಥಾ ಆರಂಭಿಸಿದ್ದು, ಯುವಕರು ಈವರೆಗೆ 29 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಬಂದಿದ್ದಾರೆ.

ಶಿಕ್ಷಣ ಮತ್ತು ಪರಿಸರ ಈ ಎರಡು ಸಧ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಚರ್ಚಿಸಬೇಕಾದ ವಿಷಯಗಳು. ಹೀಗಾಗಿ ಇವುಗಳ ಬಗ್ಗೆಯೇ ಜನರಲ್ಲಿ ಅರಿವು ಮೂಡಿಸುವ ಸಮಯದಲ್ಲಿ 4 ರಾಜ್ಯಗಳ ಮುಖ್ಯ ಮಂತ್ರಿಗಳು, ರಾಜ್ಯಪಾಲರು, ರಾಜ್ಯ ಕ್ರೀಡಾ ಸಚಿವರು, ಕಂದಾಯ ಸಚಿವರು, ಸಂಸದರು, ರೋಟರಿ ಮತ್ತು ರೋಟ್ರ್ಯಾಕ್ಟರ್ ಕ್ಲಬ್ಗಳು, ಅನೇಕ ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಕಲ್ ಜಾಥದ ಉದ್ದೇಶವನ್ನು ತಿಳಿಸಿಕೊಟ್ಟಿದ್ದಾರೆ. 

ನಿರಂತರವಾಗಿ ರೇಸ್ನಲ್ಲಿ 19,500 ಕಿ.ಮೀ ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಬೆಂಗಳೂರಿನ ಯುವಕರು ಆ ದಾಖಲೆಯನ್ನು ಮುರಿದು 24 ಸಾವಿರ ಕಿ.ಮೀ. ಸೈಕಲ್ ಜಾಥಾ ನಡೆಸಿದ್ದಾರೆ. ಈ ಯುವಕರು ಪ್ರತೀ ದಿನ 120 ಕಿ.ಮೀ ಪ್ರಯಾಣ ಮಾಡಿದ್ದು, ರಾತ್ರಿ ಸಮಯದಲ್ಲಿ ರೋಟರಿ ಕ್ಲಬ್ನ ಮುಖಾಂತರ ವ್ಯವಸ್ಥೆ ಮಾಡಿದಂತಹ ವಿಶ್ರಾಂತಿ ಗೃಹಗಳಲ್ಲಿ ತಂಗಿದ್ದರು. ಇವರ ಈ ಸೈಕಲ್ ಸವಾರಿಯ ಬಗ್ಗೆ ರೋಟ್ರ್ಯಾಕ್ಟರ್ ಕ್ಲಬ್ ಆಫ್ ಶಿಶು ಮಂದಿರಂನ 5 ಜನ ಯುವಕರ ತಂಡ ಸದಾ ನಿಗಾವಹಿಸಿ ಅವರ ಪ್ರಯಾಣವನ್ನು ಟ್ರ್ಯಾಕ್ ಮಾಡುವ ಮೂಲಕ ಅವರಿಗೆ ಮುಂದಿನ ಪ್ರಯಾಣದಲ್ಲಿ ಸಿಗುವ ವಿಶ್ರಾಂತಿ ಸ್ಥಳಗಳ ಕುರಿತು ಮಾಹಿತಿ ನೀಡಿದರು. ಇದೀಗ ಶಿಶು ಮಂದಿರ್ ಸಂಸ್ಥೆಯ ರೋಟ್ರ್ಯಾಕ್ಟರ್ ಕ್ಲಬ್ನ ಇಬ್ಬರು ಯುವಕರು 24 ಸಾವಿರ ಕಿ.ಮೀ ಕ್ರಮಿಸುವ ಮುಖಾಂತರ ಗುರಿಯನ್ನು ನಗರದ ಶಿಶು ಮಂದಿರ್ ಸಂಸ್ಥೆಯಲ್ಲಿ ಸೈಕಲ್ ಜಾಥವನ್ನು ಮುಕ್ತಾಯಗೊಳಿಸಿದರು. 

ಯುವಕರನ್ನು ಸ್ವಾಗತಿಸಿದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಯುವಕರಿಬ್ಬರು ಒಳ್ಳೆಯ ಉದ್ದೇಶದಿಂದ ದೇಶಾದ್ಯಂತ ಸೈಕಲ್ ಜಾಥಾ ಕೈಗೊಂಡಿದ್ದುದು ಹಲವರಿಗೆ ಸ್ಫೂರ್ತಿ ಮತ್ತು ಮಾದರಿಯಾಗಿದೆ. ರೋಟರಿ ಸಂಸ್ಥೆಯು ಹಲವು ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ವಿಶ್ವದಾದ್ಯಂತ ಘಟಕಗಳನ್ನು ಹೊಂದಿದೆ. ನಮ್ಮ ಕ್ಷೇತ್ರದಲ್ಲೂ ರೋಟರಿ ಕ್ಲಬ್ನವರು ಹಲವು ಕೆಲಸಗಳನ್ನು ಮಾಡುತ್ತಿದೆ. 10 ಲಕ್ಷ ಜನಸಂಖ್ಯೆಯುಳ್ಳ ಕ್ಷೇತ್ರ ನಮ್ಮದು. ನಮ್ಮ ಸರಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸಿಎಸ್ಆರ್ ನಿಧಿಯನ್ನು ಬಳಸಿ ಕಟ್ಟುತ್ತಿದ್ದೇವೆ. ಹೀಗಾಗಿ ನಮ್ಮ ಜತೆಗೆ ರೋಟರಿ ಕ್ಲಬ್ನವರು ಕೂಡ ಇದಕ್ಕೆ ಕೈ ಜೋಡಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದ ಅವರು, ಮುಂದಿನ ವರ್ಷ ಮತ್ತೆ ಸೈಕಲ್ ಜಾಥಾ ಮಾಡುವುದಾಗಿ ಈ ಯುವಕರು ಹೇಳುತ್ತಿದ್ದಾರೆ. ಯುವಕರು ಈ ರೀತಿ ಕೆಲಸಗಳನ್ನು ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು. 

ರೋಟರಿ ಡಿಸ್ಟ್ರಿಕ್ಟ್ 3190 ಗೌರ್ನರ್ ಫಜಲ್ ಮಹಮ್ಮದ್ ಮಾತನಾಡಿ, ಒಂದು ದಿನ ಮನೆಯಿಂದ ಹೊರಗೆ ಹೋದರೆ ಅವರ ಪೆÇೀಷಕರು ಆತಂಕಕ್ಕೆ ಒಳಗಾಗುವುದು ಸಹಜ. ಅಲ್ಲದೆ ಅವರು ಉಳಿಯುವುದೆಲ್ಲಿ, ಅವರಿಗೆ ಊಟ, ತಿಂಡಿ, ನಿದ್ದೆ ಇತ್ಯಾದಿಗಳ ಬಗ್ಗೆ ಆತಂಕ ಮೂಡುತ್ತದೆ. ಆದರೆ ಧನುಷ್ ಮತ್ತು ಹೇಮಂತ್ ಬರೋಬ್ಬರಿ 240 ದಿನ ಮನೆಯಿಂದ ಹೊರಗಿದ್ದುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಅದೂ ಸೈಕಲ್ ತುಳಿಯುತ್ತಾ ಸಾಗಿದ್ದುದು ಮತ್ತಷ್ಟು ಕಷ್ಟದ ಕೆಲಸ. ರೋಟರಿಯಿಂದ ಹಮ್ಮಿಕೊಂಡಿರುವ ಮೂಲ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕೋವಿಡ್ನಂತಹ ಸಂದರ್ಭದಲ್ಲಿ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಒಂದು ಬಹುಮುಖ್ಯ ಉದ್ದೇಶವನ್ನು ಹೊತ್ತು ದೇಶ ಪರ್ಯಟನ ಮಾಡಿದ್ದು ಖುಷಿಯ ಸಂಗತಿ. ನಮ್ಮ ಕ್ಲಬ್ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಇಂದು ಇವರು ಜಾಥಾ ಪೂರೈಸಿ ವಾಪಸಾದುದು ಸಂತಸ ತಂದಿದೆ ಎಂದರು. 

ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ವೈಟ್ಫೀಲ್ಡ್ನ ದುರ್ಗಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು