ಇತ್ತೀಚಿನ ಸುದ್ದಿ
ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ತುಮಕೂರು, ವಿಜಯಪುರದ11 ಮಂದಿ ಸಿಐಡಿ ಬಲೆಗೆ
07/09/2022, 13:46
ತುಮಕೂರು/ವಿಜಯಪುರ(reporterkarnataka.com): ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಅಕ್ರಮದ ಆರೋಪದ ಮೇಲೆ ಸಿಐಡಿ ಅಧಿಕಾರಿಗಳು 11 ಮಂದಿಯನ್ನು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ 10 ಜನ ಹಾಗೂ ವಿಜಯಪುರದ ಒಬ್ಬ ಶಿಕ್ಷಕನನ್ನು ಬಂಧಿಸಲಾಗಿದ್ದು, ಅವರನ್ನು ಬುಧವಾರ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಆರೋಪಿಗಳಲ್ಲಿ ತುಮಕೂರಿನ 10 ಜನ ಹಾಗೂ ವಿಜಯಪುರದ ಓರ್ವ ಶಿಕ್ಷಕ ಸಿಐಡಿ ಅಧಿಕಾರಿಗಳ ಕೈಯಲ್ಲಿ ಸೆರೆಯಾಗಿದ್ದಾರೆ. ಶಮೀನಾಜ್, ರಾಜೇಶ್ವರಿ ಜಗ್ಲಿ, ಕಮಲಾ, ನಾಗರತ್ನ, ದಿನೇಶ್, ನವೀನ್ ಹನುಮಗೌಡ, ನವೀನ್ ಕುಮಾರ್, ದೇವೇಂದ್ರ ನಾಯ್ಕ್, ಹರೀಶ್ ಆರ್, ಪ್ರಸನ್ನ ಬಿ.ಎಂ ಹಾಗೂ ಮಹೇಶ ಶ್ರೀಮಂತ ಸೂಸಲಾಡಿ ಬಂಧಿತ ಆರೋಪಿಗಳು. ಸಿಐಡಿ ತಂಡ ಮತ್ತೋರ್ವ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.