ಇತ್ತೀಚಿನ ಸುದ್ದಿ
ಶಿಕ್ಷಕರ ದಿನಾಚರಣೆ: ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾದಿಂದ ಗುರುಗಳಿಗೆ ಉಚಿತ ಪ್ರವೇಶ
26/08/2022, 20:40
ಬೆಂಗಳೂರು(reporterkarnataka.com): ದೇಶದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳಿಂದ 300 ಶಿಕ್ಷಕರರಿಗೆ ಉಚಿತ ಪ್ರವೇಶ ನೀಡಿದೆ.
ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಉಚಿತ ಪ್ರವೇಶ ಇರಲಿದೆ. ಇದರ ಬಗ್ಗೆ
ಮಾತನಾಡಿದ ವಂಡರ್ ಲಾ ಹಾಲಿ ಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಲ್ಲಿ ಸಾಂಕ್ರಾಮಿಕ ರೋಗದ ಉದ್ದಕ್ಕೂ ಶಿಕ್ಷಕರು ಆನ್‌ಲೈನ್ ತರಗತಿ ಹೆಸರಿನಲ್ಲಿ ಮನೆ ಹಾಗೂ ಶಾಲೆ ಎರಡೂ ಸೇವೆ ಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಜೀವನದ ಪಾಠ ಕಲಿಸುವ
ಈ ಮಾರ್ಗದರ್ಶಕರನ್ನು ವಂಡರ್ ಲಾ ಗೌರವಿಸುವ ಉದ್ದೇಶದಿಂದ ಈ ಕೊಡುಗೆ ನೀಡುತ್ತಿದೆ. ಇದಷ್ಟೇ ಅಲ್ಲದೆ, ಆಗಸ್ಟ್ 29 ರಿಂದ ಸೆಪ್ಟೆಂಬರ್ 5 ರ ಅವಧಿಯಲ್ಲಿ ವಂಡರ್ ಲಾ ಪಾರ್ಕ್‌ಗೆ ಭೇಟಿ ನೀಡುವ ಎಲ್ಲಾ ಶಿಕ್ಷಕರಿಗೂ ತಮ್ಮ ಬುಕಿಂಗ್‌ಗಳ ಮೇಲೆ ಶೇ. 20 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.ಈ ಕೊಡುಗೆ ಯನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ಕೊಂಡೊಯ್ಯಬೇಕು.














