5:27 PM Monday31 - March 2025
ಬ್ರೇಕಿಂಗ್ ನ್ಯೂಸ್
PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ…

ಇತ್ತೀಚಿನ ಸುದ್ದಿ

ಶತದಿನೋತ್ಸವದತ್ತ ‘ಪಯಣ್‌’ ಕೊಂಕಣಿ ಸಿನೆಮಾ: 29ರಂದು ಮಂಗಳೂರಿನಲ್ಲಿ ಸಂಭ್ರಮ

27/12/2024, 16:20

ಮಂಗಳೂರು(reporterkarnataka.com):ಬಿಡುಗಡೆಗೊಂಡ ದಿನದಿಂದಲೇ ಜನಮನ ಗೆದ್ದ, ಸಂಗೀತ್‌ ಘರ್‌’ ಬ್ಯಾನರ್‌ನಡಿಯಲ್ಲಿ ಯೊಡ್ಲಿಂಗ್‌ ಕಿಂಗ್‌ ಮೆಲ್ವಿನ್‌ ಪೆರಿಸ್‌ ಮತ್ತು ನೀಟ ಪೆರಿಸ್‌ ನಿರ್ಮಿಸಿರುವ “ಪಯಣ್‌’ ಕೊಂಕಣಿ ಚಲನಚಿತ್ರವು ನೂರನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಸೀಮಿತ ಮಾರುಕಟ್ಟೆಯಿಂದಾಗಿ ಕೊಂಕಣಿಯಲ್ಲಿ ಸಿನಿಮಾ ತಯಾರಿಸುವುದು ಮತ್ತು ಚದುರಿ ಹೋಗಿರುವ ಕೊಂಕಣಿ ಜನರಿಗೆ ಅದನ್ನು ತಲುಪಿಸುವುದು ಬಲುದೊಡ್ಡ ಪ್ರಯಾಸದ ಕೆಲಸ. ಆದರೆ “ಪಯಣ್‌’ ಸಿನಿಮಾ ತಂಡವು ‘ಪಯಣ್‌’ ಸಿನಿಮಾ ನೂರು ದಿನಗಳ ಪ್ರದರ್ಶನವನ್ನು ಕಾಣುವಂತೆ ನಿರಂತರ ಶ್ರಮವಹಿಸಿ ದುಡಿದಿದೆ. ಕೋಟ್ಯಾಂತರ ಬಜೆಟಿನ ಚಿತ್ರಗಳು ಸೋಲುತ್ತಿರುವಾಗ, ಸೀಮಿತ ಮಾರುಕಟ್ಟೆಯಿರುವ ಕೊಂಕಣಿ ಸಮಾಜದ ಸಿನಿಮಾವೊಂದು ನೂರು ದಿನಗಳ ಪ್ರದರ್ಶನವನ್ನು ಕಾಣುವುದು ನಿಜಕ್ಕೂ ದಾಖಲೆಯೇ ಸರಿ. ಕಳೆದ ವರ್ಷ ತೆರೆಕಂಡ “ಅಸ್ಮಿತಾಯ್‌’ ಕೊಂಕಣಿ ಚಲನಚಿತ್ರದ ಬಳಿಕ ನೂರು ದಿನಗಳ ಪ್ರದರ್ಶನ ಕಂಡ ದ್ವಿತಿಯ ಚಿತ್ರವಾಗಿ ‘ಪಯಣ್‌’ ಇತಿಹಾಸ ಸೃಷ್ಠಿಸಿದೆ.

“ಪಯಣ್‌’ ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವ ಸಂಗೀತಗಾರನ ಜೀವನಗಾಥೆ. ನಾಯಕ ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ – ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಕಸುಬಿನ ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾನೆ. ಸಂಗೀತ ಕ್ಷೇತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವ ತನ್ನ ಸಂಗೀತ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರಬಿಂದುವಾಗಿಸಿದ ಕಥೆಯೇ ಪಯಣ್‌.
ಶತದಿನೋತ್ಸವ ಸಂಭ್ರಮವು ಡಿಸೆಂಬರ್‌ 29ರಂದು ಸಂಜೆ 4.00 ಗಂಟೆಗೆ ಸರಿಯಾಗಿ ಬಿಜೈನಲ್ಲಿರುವ ಭಾರತ್‌ ಸಿನೆಮಾದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜಾರವರು ಮುಖ್ಯ ಅಥಿತಿಯಾಗಿ ಆಗಮಿಸಲಿರುವರು. ಸಂತ ಅಲೋಶಿಯಸ್‌ ಸಮೂಹ ವಿದ್ಯಾ ಸಂಸ್ಥೆಗಳ ರೆಕ್ಟರ್‌ ವಂ| ಮೆಲ್ವಿನ್‌ ಜೋಸೆಫ್‌ ಪಿಂಟೊ ಮತ್ತು ಅನಿವಾಸಿ ಉಧ್ಯಮಿ ಶ್ರೀ ಜೇಮ್ಸ್‌ ಡಿ’ಸೋಜಾ ದುಬಾಯ್‌ ಇವರುಗಳು ಗೌರವ ಅಥಿತಿಗಳಾಗಿರುವರು.
ಪಯಣ್‌ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್‌ ಪಿರೇರಾ ಬರೆದಿದ್ದು, ರೋಶನ್‌ ಡಿ’ಸೋಜಾ ಆಂಜೆಲೊರ್‌ ಸಂಗೀತ ನಿರ್ದೇಶನ ನೀಡಿದ್ದಾರೆ. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್‌ ಸಿಕ್ಟೇರಾ ನಾಯಕನಾಗಿ ಹಾಗೂ ಜಾಸ್ಮಿನ್‌ ಡಿ’ಸೋಜಾ, ಕೇಟ್‌ ಪಿರೇರಾ ಮತ್ತು ಶೈನಾ ಡಿ’ಸೋಜ ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್‌ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ನಾ, ವಾಲ್ಟರ್‌ ನಂದಳಿಕೆ, ಜೀವನ್‌ ವಾಸ್‌, ಜೊಸ್ಸಿ ರೇಗೊ, ಆಲ್ವಿನ್‌ ದಾಂತಿ, ಆಲ್ಬರ್ಟ್‌ ಪೆರಿಸ್‌, ಅರುಣ್‌ ನೊರೊನ್ಹಾ, ಡೆನ್ವರ್‌ ಪೆರಿಸ್‌, ಡೆನ್ವರ್‌ ಡಿ’ಸೋಜಾ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಸಾಹಿತ್ಯ ಮತ್ತು ರಾಗ ಸಂಯೋಜನ್‌ ಮೆಲ್ವಿನ್‌ ಪೆರಿಸ್‌, ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಸಂಕಲನ ಮೆವಿನ್‌ ಜೊಯೆಲ್‌ ಪಿಂಟೊ, ಶಿರ್ತಾಡಿ ಇವರದ್ದು.

ಇತ್ತೀಚಿನ ಸುದ್ದಿ

ಜಾಹೀರಾತು