7:01 AM Wednesday30 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು… ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ‘ಉಡುಗೊರೆ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಇತ್ತೀಚಿನ ಸುದ್ದಿ

ಶಾಸಕರೇ, ಒಮ್ಮೆ ಇತ್ತ ಬನ್ನಿ: ನಗರಸಭೆಯ ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾರಕ ರೋಗಗಳ ತಾಣವಾಗಿದೆ ನಂಜನಗೂಡು!

24/10/2024, 18:50

ಮೋಹನ್ ನಂಜನಗೂಡು ಮೈಸೂರು

info.reporterkarnataka@gmsil.com

ಶಾಸಕರೇ ಈ ಕಡೆ ಒಮ್ಮೆ ಬಂದು ನೋಡಿ. ನಿಮ್ಮ ನಗರ ಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಮಾರಕ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗ ಹರಡುವ ಉಗಮ ಸ್ಥಾನವಾಗಿದೆ ನಂಜನಗೂಡು ಎನ್ನುವುದು ಪಟ್ಟಣವಾಸಿಗಳ ಕೂಗಾಗಿದೆ.
ಈ ವಿಡಿಯೋ ನೋಡಿ ಶಾಸಕರೇ ಮತ್ತು ಸ್ಥಳೀಯ ಜನಪ್ರತಿನಿಧಿಗಳೇ ಹಾಗೂ ಲಜ್ಜೆಗೆಟ್ಟ ಅಧಿಕಾರಿಗಳೇ.
ಇದು ಯಾವುದೋ ಕೆರೆ ಅಥವಾ ಕಟ್ಟೆಯಲ್ಲ ಕೆರೆಯೊಪಾದಿಯಲ್ಲಿ ನಿಂತಿರುವ ಚರಂಡಿ ಮತ್ತು ಶೌಚದ ಕೊಳಚೆ ನೀರು. ಇದು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲದೆ ಎಕರೆಗಟ್ಟಲೆ ಖಾಸಗಿ ನಿವೇಶನಗಳಲ್ಲಿ ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿದೆ. ಚೆನ್ನಪ್ಪ ಲೇಔಟ್ ಬಳಿ ದೇವಿರಮ್ಮನಹಳ್ಳಿ ಮುಖ್ಯ ರಸ್ತೆಯಿಂದ ಹಂಡುವಿನಹಳ್ಳಿ ಮೂಡಾ ಲೇಔಟ್ ಗೆ ತೆರಳುವ ಮಧ್ಯದಲ್ಲಿರುವ ಪ್ರತಿಷ್ಠಿತ ಬಡಾವಣೆಗಳಾದ ಬಾಲಚಂದ್ರ ಲೇಔಟ್, ನಂಜುಂಡಸ್ವಾಮಿ ಲೇಔಟ್, ಮಹದೇವಪ್ಪ ಲೇಔಟ್ ಗಳೇ ಈ ಮಾರಕ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ.


ಈ ಬಡಾವಣೆಗಳ ಮೇಲ್ಭಾಗಕ್ಕೆ ಬರುವ ಮತ್ತಷ್ಟು ಬಡಾವಣೆಗಳ ಚರಂಡಿ ಹಾಗೂ ಶೌಚದ ನೀರು ಇಲ್ಲಿಗೆ ಹರಿದು ಬಂದು ಸಂಗ್ರಹವಾಗುತ್ತಿದೆ. ಆದರೆ ಇಲ್ಲಿಂದ ಮುಂದೆ ಹೋಗಲು ಮಾತ್ರ ಯಾವುದೇ ಚರಂಡಿ ವ್ಯವಸ್ಥೆ ಇಲ್ಲ.
ಈ ಕೊಳಚೆ ನೀರಿನಲ್ಲಿ ಕೊಳೆತ ತ್ಯಾಜ್ಯದ ಜೊತೆಗೆ ಕೋಟ್ಯಂತರ ಸೊಳ್ಳೆಗಳು ಮೊಟ್ಟೆ ಮರಿ ಮಾಡುತ್ತಾ ತಮ್ಮ ವಂಶಾಭಿವೃದ್ಧಿ ಬೆಳೆಸಿಕೊಂಡು ಸುತ್ತಮುತ್ತಲ ಬಡಾವಣೆಗಳ ಜನರ ಮಾರಕ ರೋಗಕ್ಕೆ ಕಾರಣವಾಗುತ್ತಿದೆ.
ಅಲ್ಲದೆ ಹಂದಿಗಳು ಕೂಡ ಆ ಕೊಳಚೆಯಲ್ಲೆ ಬಿದ್ದು ಒದ್ದಾಡುತ್ತಿವೆ. ಈ ಕೊಳಚೆ ಕೆರೆಯಲ್ಲಿ ಆಳೆತರಕ್ಕೆ ಬೆಳದು ನಿಂತ ಜೊಂಡು ಹಾಗೂ ಗಿಡ ಗಂಟೆಗಳು ಕಾಡಿನೋಪಾದಿಯಲ್ಲಿ ಬೆಳೆದು ನಿಂತಿದ್ದು ಹಾವು ಚೇಳುಗಳು ಸೇರಿದಂತೆ ವಿಷಜಂತುಗಳಿಗೂ ಕೂಡ ಆವಾಸಸ್ಥಾನವಾಗಿದೆ.

ಇಂತಹ ಕೆಟ್ಟ ಪರಿಸ್ಥಿತಿಯ ಘಟನೆಯ ವಿಡಿಯೋ ಮತ್ತು ಫೋಟೋ ಮಾಡಿ ತೋರಿಸುವ ಮೂಲಕ ಹಲವಾರು ಬಾರಿ ನಗರಸಭೆ ಆಯುಕ್ತರಿಗೆ ಮನವಿ ಮಾಡಿದರು ಎಮ್ಮೆ ಚರ್ಮದ ಈ ಅಧಿಕಾರಿ ಮಾತ್ರ ಇದರ ಬಗ್ಗೆ ತಲೆಕೆಡಿಸಿಯೇ ಕೊಳ್ಳಲಿಲ್ಲ.
ಈ ರೀತಿ ಕೊಳಚೆ ಕೆರೆಯಿಂದಾಗಿ ಸುತ್ತಮುತ್ತ ನಾಲ್ಕಾರು ಬಡಾವಣೆಗಳ ನಿವಾಸಿಗಳು ಮತ್ತು ಮಕ್ಕಳಿಗೆ ಹಲವಾರು ಸಾಂಕ್ರಾಮಿಕ ರೋಗಗಳು ತಗುಲಿ ಆಗಿಂದಾಗ್ಗೆ ಆಸ್ಪತ್ರೆ ಸೇರುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಅಲ್ಲದೆ ಈ ಬಡಾವಣೆಗಳಿಗೆ ರಸ್ತೆ, ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಒಂದೂ ರೀತಿ ಸ್ಲಂ ಮಾದರಿಯಲ್ಲಿದೆ.
ಕಿರಿದಾದ ಮಣ್ಣಿನ ರಸ್ತೆ ರಸ್ತೆಯ ತುಂಬೆಲ್ಲಾ ಗುಂಡಿಗಳು ಇಕ್ಕೆಗಳಲ್ಲಿ ಬೆಳೆದು ನಿಂತಿರುವ ಗಿಡಗಳ ಪೊದೆಗಳಿಂದಾಗಿ ಶಾಲಾ ಬಸ್ಸುಗಳು ಸಹ ಈ ರಸ್ತೆಯಲ್ಲಿ ಬರಲಾಗದೆ ಪುಟ್ಟ ಪುಟ್ಟ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ತುಂಬಾ ತೊಂದರೆಯಾಗಿದೆ.
ಕನಿಷ್ಠ ಗಿಡಗಂಟೆಗಳನ್ನು ತೆಗೆಸಿ ಗುಂಡಿಗಳಿಗೆ ಒಂದಷ್ಟು ಮಣ್ಣು ಹಾಕಿಸಿ ಎಂದು ಬಡಾವಣೆಗಳ ನಿವಾಸಿಗಳು ಎಷ್ಟೇ ಅಂಗಲಾಚಿದರು ಕ್ಯಾರೆ ಎನ್ನದ ದಪ್ಪ ಚರ್ಮದ ಅಧಿಕಾರಿಗಳು.
ಆರೋಗ್ಯ, ಸ್ವಚ್ಛತೆ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚು ತೋರಿಸುವ ಅಧಿಕಾರಿಗಳ ಕಣ್ಣಿಗೆ ಮಾತ್ರ ಇದು ಕಂಡಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ
ಇಂತಹ ಪ್ರಮುಖ ಕೆಲಸಗಳ ಬಗ್ಗೆ ಗಮನಹರಿಸದೆ ಕೇವಲ ಗಂಟೆ ಹೊಡಿ.. ಸಂಬಳ ಪಡಿ.. ಜೊತೆಗೆ ತಮ್ಮ ಗಿಂಬಳಕ್ಕೆ ಮಾತ್ರ ಏನು ಬೇಕೋ ಆ ಕೆಲಸ ಮಾಡಿ ಬ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ.
ನಂಜನಗೂಡಿಗೆ ಅಭಿವೃದ್ಧಿಯ ಹೊಳೆಯನ್ನೆ ಹರಿಸಿದ್ದೇನೆ ಎಂದು ಹೇಳುವ ಮಾಜಿ ಶಾಸಕ ಹರ್ಷವರ್ಧನ್ ಕೂಡ ಇದರ ಬಗ್ಗೆ ಗಮನಹರಿಸದೆ ಈಗ ಮನೆ ಸೇರಿದ್ದಾರೆ.
ಶಾಸಕರೆ ಈಗ ತಾವಾದರೂ ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ವಹಿಸಿ ಸುತ್ತ ಮುತ್ತಲ ಬಡಾವಣೆ ನಿವಾಸಿಗಳ ಆರೋಗ್ಯ ಸುಧಾರಣೆ ಮತ್ತು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂಬುದೇ ಈ ಭಾಗದ ನಿವಾಸಿಗಳ ಆಶಯ. ಒಟ್ಟಾರೆ ಗ್ರಾಮ ಪಂಚಾಯಿತಿಗಳಿಗಿಂತಲೂ ಕೆಟ್ಟದಾಗಿ ಆಡಳಿತ ನಡೆಸುತ್ತಿರುವ ಎಮ್ಮೆ ಚರ್ಮದ ಅಧಿಕಾರಿಗಳಿಂದ ತಮಗೂ ಕೆಟ್ಟ ಹೆಸರು ಬರುವಂತಾಗುತ್ತದೆ.
ಕೂಡಲೆ ಇಂತಹ ನಾಲಾಯಕ್ ಹಾಗೂ ಬೇಜವಾಬ್ದಾರಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಪಾರದರ್ಶಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಿ. ಬಡಾವಣೆಯ ನಿವಾಸಿ ದಲಿತ ಸಂಘಟನೆಗಳ ಮುಖಂಡ ಮಲ್ಲಳ್ಳಿ ನಾರಾಯಣ್ ಈ ಬಗ್ಗೆ ಮಾತನಾಡಿ ನಗರಸಭೆಯ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಶಾಸಕರು ಇದರ ಬಗ್ಗೆ ಗಮನ ಹರಿಸಿ ಈ ಬಡಾವಣೆ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು