2:36 PM Friday3 - April 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ಶಂಕಿತ ಉಗ್ರ ಚಟುವಟಿಕೆ ಹಿನ್ನೆಲೆ ಮಗನ ಬಂಧನ ; ಮಂಗಳೂರಿನಲ್ಲಿ ತಂದೆ ಹೃದಯಾಘಾತದಿಂದ ನಿಧನ

24/09/2022, 00:28

ಮಂಗಳೂರು(reporterkarnataka.com)ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಶಿವಮೊಗ್ಗದಲ್ಲಿ ಬಂಧಿತನಾಗಿದ್ದ ಆರೋಪಿ ಮಾಝ್‌ನ ತಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಂಕಿತ ಉಗ್ರ ಮಾಝ್ ಮುನೀರ್ ಅಹಮದ್ ‌ನ ತಂದೆ ಮುನೀರ್ ಅಹ್ಮದ್ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮೃತ ಮುನೀರ್ ಅಹ್ಮದ್‌ರವರು ತೀರ್ಥಹಳ್ಳಿಯ ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದಿವಂಗತ ಸಾಬ್ಬಾನ್ ಸಾಹೇಬ್ ಅವರ ಮಗನಾಗಿದ್ದಾರೆ. ಮೃತದೇಹವನ್ನು ರಾತ್ರಿ ತೀರ್ಥಹಳ್ಳಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುನೀರ್ ಅಹಮ್ಮದ್‌ರವರ ಮನೆ ತೀರ್ಥಹಳ್ಳಿ ಮೀನು ಮಾರ್ಕೆಟ್ ಹತ್ತಿರ ಸೊಪ್ಪುಗುಡ್ಡೆ ಎಂಬಲ್ಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಗ್ಗುಲಿನಲ್ಲಿ ಮನೆ ಮಾಡಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಮಗ ಮಾಝ್ ನನ್ನು ಮಂಗಳೂರು ಪೊಲೀಸರು ಗೋಡೆ ಬರಹವೊಂದರ ಆಪಾದನೆಯಲ್ಲಿ ಬಂಧಿಸಿದ್ದಾಗ ಮುನೀರ್ ಅತೀವ ರಕ್ತದೊತ್ತಡಕ್ಕೆ ಸಿಲುಕಿ ಬಳಲಿದ್ದರು. ಆ ಬಳಿಕ ಹೃದಯಕ್ಕೆ ಎರಡು ಸ್ಟಂಟುಗಳನ್ನು ಅಳವಡಿಸಲಾಗಿತ್ತು.

ಈಗ ಮತ್ತೊಮ್ಮೆ ತಮ್ಮ ಮಗನನ್ನು ದೇಶದ್ರೋಹದ ಶಂಕಿತ ಆರೋಪಿ ಎಂದು ಪರಿಗಣಿಸಿ ಕರೆದೊಯ್ಯಲಾಗಿದೆ ಎಂದು ತಿಳಿದ ಬಳಿಕ ವಿಪರೀತವಾಗಿ ನೊಂದಿದ್ದರು ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು