4:49 AM Friday16 - January 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.…

ಇತ್ತೀಚಿನ ಸುದ್ದಿ

Shame Shame | ಯಮನ ತಮ್ಮನೇ ಪುತ್ತೂರು ಆಸ್ಪತ್ರೆಯ ಈ ವೈದ್ಯ?: ಸಿಸೇರಿಯನ್ ಮಾಡಿ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ಮಿಸ್ಟರ್ ಡಾಕ್ಟರ್!

24/02/2025, 18:44

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮೆಡಿಕಲ್ ಮಾಫಿಯಾದ ಈ ಕಾಲದಲ್ಲಿ ವೈದ್ಯರು ಆಗಾಗ ಎಡವಟ್ಟು ಮಾಡಿಕೊಳ್ಳುವುದು, ರೋಗಿ ಪ್ರಾಣ ಕಳೆದುಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಅಂತಹದ್ದೇ ಒಂದು ಎಡವಟ್ಟು ಪುತ್ತೂರಿನ ವೈದ್ಯರೊಬ್ಬರು ಮಾಡಿ, ಬಾಣಂತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇದು ನಡೆದದ್ದು ಸುಮಾರು ಒಂದೂವರೆ ತಿಂಗಳ ಹಿಂದೆ 2024 ಡಿಸೆಂಬರ್ ತಿಂಗಳಿನಲ್ಲಿ. ಹಾಗಾದರೆ ವೈದ್ಯನೆಂಬ ಯಮನ ತಮ್ಮ ಮಾಡಿದ ಎಡವಟ್ಟು ಏನೆಂದು ನೋಡೋಣ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕದ ಮಹಿಳೆ ಶರಣ್ಯ ಲಕ್ಷ್ಮೀ ಅವರು ಹೆರಿಗೆಗಾಗಿ 2024 ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಿಸೇರಿಯನ್ ಮೂಲಕ‌ ಹೆರಿಗೆಯಾಗಿ ಡಿ.2ರಂದು ಶರಣ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಡಿಸ್ಚಾರ್ಜ್ ಬಳಿಕ ಬಾಣಂತಿ ಶರಣ್ಯ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಈ ಬಗ್ಗೆ ಹೆರಿಗೆ ಮಾಡಿಸಿದ್ದ ವೈದ್ಯ ಡಾ.ಅನಿಲ್ ಬಳಿ ಶರಣ್ಯರ ಪತಿ ಗಗನ್ ದೀಪ್ ವಿಚಾರಿಸಿದಾಗ,
ಜ್ವರದ ಔಷಧಿ ಬಳಸುವಂತೆ ಸೂಚಿಸಿದ್ದರು. ಜ್ವರ ಕಡಿಮೆಯಾಗದಿದ್ದಾಗ ಮತ್ತೆ ವೈದ್ಯರ ಬಳಿ‌ ವಿಚಾರಿಸಿದಾಗ ಹೆಮಟೋಮ್ ಆಗಿರಬಹುದೆಂದು ವೈದ್ಯರು ಹೇಳಿದ್ದರು. ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಕಡಿಮೆಯಾಗುತ್ತೆ ಎಂದು ಕೂಡ ವೈದ್ಯರು ಅಭಯ ನೀಡಿದ್ದರು. ಶರಣ್ಯರ ಮತ್ತೆ ಅಲ್ಟ್ರಾಸೌಂಡ್ ಮಾಡಿಸಿದಾಗ 10 ಸೆಂ.ಮೀ ಮಾಪ್ ಫಾರ್ಮೇಶನ್ ಆಗಿರೋದು ಪತ್ತೆಯಾಯಿತು.
ಇದಾದ ಬಳಿಕ ಬಾಣಂತಿಯನ್ನು
ಸಂಧಿ ನೋವು ಕಾಡಿತು. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಡಾ. ಅನಿಲ್ ಅವರು ಅರ್ಥೋ ಸಮಸ್ಯೆ ಇರಬಹುದೆಂದು ಹೇಳಿದ್ದರು. ಈ ಬಗ್ಗೆ ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದ್ದ ಶರಣ್ಯ ಕುಟುಂಬ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಮಾಪ್ ಫಾರ್ಮೇಶನ್ ಆಗಿರೋದು ಕಂಡು ಬಂದರೂ ಅದನ್ನು ತೆರವು ಮಾಡದಿರುವ ಬಗ್ಗೆ ವೈದ್ಯರಲ್ಲಿ ಪ್ರಶ್ನಿಸಿದರು. ಬಳಿಕ ಸಿಟಿ ಸ್ಕ್ಯಾನ್ ಮಾಡಿದಾಗ ಸರ್ಜಿಕಲ್ ಮಾಪ್ ಇರುವುದು ಕಂಡು ಬಂತು. ಅಷ್ಟರಲ್ಲಾಗಲೇ ಸಿಸೇರಿಯನ್ ಆಗಿ ಒಂದೂವರೆ ತಿಂಗಳಾಗಿದ್ದರಿಂದ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡಿತು. ಬಾಣಂತಿ ಆರೋಗ್ಯ ಸ್ಥಿತಿ ಅಪಾಯದ ಹಂತಕ್ಕೆ ತಲುಪಿದೆ ಎಂದು ಮಂಗಳೂರಿನ ವೈದ್ಯರು ಎಚ್ಚರಿಸಿದರು. ನಂತರ
ತಕ್ಷಣ ಜನವರಿ 25ರಂದು ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಸರ್ಜಿಕಲ್ ಬಟ್ಟೆಯ ಮುದ್ದೆಯನ್ನು ವೈದ್ಯರು
ಹೊರತೆಗೆದರು. ಹೊಟ್ಟೆಯೊಳಗೆ ಬಟ್ಟೆ ಇದ್ದುದರಿಂದ ದೇಹದ ಇತರ ಅಂಗಾಗಳಿಗೂ ತೊಂದರೆ ಆಗಿತ್ತು.
ಸಿಸೇರಿಯನ್ ಮಾಡಿದ ವೈದ್ಯ ಡಾ.ಅನಿಲ್ ವಿರುದ್ದ ಶರಣ್ಯ ಅವರ ಪತಿ ಗಗನ್ ದೀಪ್ ಅವರು ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿಗೂ‌ ದೂರು ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಭಾರೀ ಅನಾಹುತ ಆಗಿದೆ. ತಪ್ಪಿತಸ್ಥ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು