ಇತ್ತೀಚಿನ ಸುದ್ದಿ
ಶಾಲೆಗೆ ಬೀಗ, ತಿಂಗಳ ಸಂಬಳಕ್ಕೆ ಮಾತ್ರ ಲಾಗ!: ಶಿಕ್ಷಣ ಸಚಿವರೇ, ಏನು ಮಾಡುತ್ತಿದ್ದೀರಿ?
04/01/2023, 20:18

ಸಿದ್ದಾರೂಢ ಬಣ್ಣದ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ನಾಗರಾಳ ಗ್ರಾಮದ ಗೊಂಡೆ ತೋಟ ಪ್ರಾಥಮಿಕ ಶಾಲೆಯ ಶಿಕ್ಷಕ ಸರಿಯಾಗಿ ಶಾಲೆಗೆ ಬರಲ್ಲ. ಆದರೆ ತಿಂಗಳ ಸಂಬಳಕ್ಕೆ ಮಾತ್ರ ರೆಡಿಯಾಗಿರುತ್ತಾರೆ.
ಇದರಿಂದ ಇಲ್ಲಿನ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಿಂತಹ ಶಿಕ್ಷಕರು ನಲಿ ಕಲಿ, ಶಾಲೆಗೆ ಬಾ ಮಗು ಎಂಬ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡದೆ ತಾವೇ ಸರಿಯಾಗಿ ಶಾಲೆಗೆ ಬಾರದೆ ತಿಂಗಳ ತಿಂಗಳ ಸರ್ಕಾರಿ ಸಂಬಳ ಮಾತ್ರ ಪಡೆದು ಹೋಗುತ್ತಾರೆ.
ಇದನೆಲ್ಲ ನೋಡಿ ನೋಡದ ಹಾಗೆ ಕಣ್ಣು ಮುಚ್ಚಿಕುಳಿತ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಏನು ಕ್ರಮ ಕೈಗೊಳ್ಳತೀರಾ ನಿಮ್ಮ ಶಾಲೆಯ ಹಲವು ಕಾರ್ಯಕ್ರಮಗಳಿಗೆ ತಾವು ಎಷ್ಟು ಖುದ್ದು ನಡೆಸಿಕೊಟ್ಟಿದ್ದಿರಾ? ಸಾರ್ವಜನಿಕರಿಗೆ ಉತ್ತರಿಸಬೇಕು.