10:14 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಶಬರಿಮಲೆ ದೇವಸ್ಥಾನದ ವಾರ್ಷಿಕ ಯಾತ್ರೆ ಇಂದಿನಿಂದ ಆರಂಭ: ಪಂಪಾ ತೀರದಲ್ಲಿ ಭಕ್ತರ ದಂಡು

15/11/2024, 12:16

ತಿರುವನಂತಪುರಂ(reporterlarnataka.com): ದೇಶದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲೊಂದಾದ ಶಬರಿಮಲೆಯ ದೇಗುಲ ಇಂದು ತೆರೆಯಲಿದ್ದು,ಮಂಡಳ ಪೂಜೆ ಪ್ರಾರಂಭವಾಗಲಿದೆ.
ಭಕ್ತಾದಿಗಳು ಮಧ್ಯಾಹ್ನ 1.00 ಗಂಟೆಯಿಂದ ಪಂಪಾ ನದಿಯಿಂದ ಶಬರಿಮಲೆ ಯಾತ್ರೆ ಪ್ರಾರಂಭಿಸಬಹುದಾಗಿದೆ. ಆನ್‌ಲೈನ್ ಮೂಲಕ ಮುಂಗಡ ಬುಕಿಂಗ್ ಸೌಲಭ್ಯ ನೀಡಲಾಗಿದೆ. ನವೆಂಬ‌ರ್ ತಿಂಗಳ ಬುಕಿಂಗ್ ಭರ್ತಿಯಾಗಿದೆ. ಕೇವಲ ನ.30 ರ ಕೆಲವು ಸ್ಲಾಟ್ ಗಳು ಮಾತ್ರ ಲಭ್ಯವಿದೆ. ಡಿಸೆಂಬರ್ ತಿಂಗಳಲ್ಲಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಸರದಿಯಲ್ಲಿದ್ದಾರೆ. ಈಗಾಗಲೇ ಮುಂಗಡ ಬುಕಿಂಗ್ ಮಾಡಿರುವ ಭಕ್ತರು ಒಂದು ವೇಳೆ ತಮ್ಮ ಪ್ರಯಾಣ ರದ್ದಾದರೆ ಅಥವಾ ಮುಂದೂಡಿಕೆಯಾದರೆ ತಮ್ಮ ಸ್ಲಾಟ್ ಕ್ಯಾನ್ಸಲ್ ಮಾಡಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.
ನೇರವಾಗಿ ದರ್ಶನಕ್ಕೆ ಬರುವ ಭಕ್ತರು ತಮ್ಮ ಆಧಾರ್ ಕಾಡ್, ವೋಟರ್ ಐಡಿ ಅಥವಾ ಪಾಸ್ ಪೋರ್ಟ್ ಗುರುತಿನ ಚೀಟಿಯ ನಕಲು ತರಬೇಕು. ಪಂಪಾ ನದಿಯ ಬಳಿ 7 ಸಾವಿರ ಯಾತ್ರಿಕರಿಗೆ ಹಾಗೂ ನೀಲಕ್ಕಲ್ ಬಳಿ 8 ಸಾವಿರ ಯಾತ್ರಿಕರಿಗೆ ವಾಸ್ತವ್ಯದ ಅನುಕೂಲ ಕಲ್ಪಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು