2:37 PM Friday11 - April 2025
ಬ್ರೇಕಿಂಗ್ ನ್ಯೂಸ್
ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್…

ಇತ್ತೀಚಿನ ಸುದ್ದಿ

“ಸೇವೆಗಾಗಿ ನೃತ್ಯ”: ನಾಳೆ ನ್ಯೂಯಾರ್ಕ್ ನಲ್ಲಿ ನಾಟ್ಯ ಸೇವೆಯ ಬೃಹತ್ ಪ್ರದರ್ಶನ

21/09/2024, 20:26

ಮಂಗಳೂರು(reporterkarnataka.com):ದೂರದ ಅಮೆರಿಕಾದಲ್ಲಿ ಹದಿಹರೆಯದ ಮಕ್ಕಳು ಪಸರಿಸುತ್ತಿರುವ ನಮ್ಮ ನಾಡಿನ ಸಾಂಸ್ಕೃತಿಕ ಸೌರಭ ದೂರದ ಅಮೇರಿಕಾದಲ್ಲಿ ಹುಟ್ಟಿ ಬೆಳೆದ ನಮ್ಮ ನಾಡಿನ ವಂಶಜರ ಹದಿಹರೆಯದ ಸುಮಾರು 15 ಬಾಲಕ- ಬಾಲಕಿಯರು ನಮ್ಮ ಸಾಂಸ್ಕೃತಿಕ ಪರಂಪರೆಯ ಉನ್ನತ ಕಲೆಯಾದ ಭರತನಾಟ್ಯವನ್ನು “ನಾಟ್ಯ ಸೇವಾ” ಎಂಬ ವಿನೂತನ ಮಾದರಿಯ ಸೇವಾ ಸಂಸ್ಥೆಯನ್ನು ಕಟ್ಟಿಕೊಂಡು “ಸೇವೆಗಾಗಿ ನೃತ್ಯ” ( Dance to Serve) ಎಂಬ ಶೀರ್ಷಿಕೆಯಡಿ ನೃತ್ಯ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ.
ಆನ್ಯ ಶೆಟ್ಟಿ ಎಂಬ ಬಾಲಕಿಯು ತನ್ನ ಓರಗೆಯ ಇತರ ಗೆಳತಿಯರ ಜೊತೆ ಸೇರಿ ನಡೆಸುತ್ತಿರುವ ಈ ನಾಟ್ಯ ಸೇವೆಯ ಒಂದು ಬೃಹತ್ ಪ್ರದರ್ಶನವು ಇದೇ ಸೆ. 22ರಂದು ಅಪರಾಹ್ನ ಗಂಟೆ 3:00 ಕ್ಕೆ ಸರಿಯಾಗಿ “ಬೈತಡೇಲ್ ಮಕ್ಕಳ ಆಸ್ಪತ್ರೆ” (Blythedale children’s Hospital), ಫೋಕ್ಸ್‌ಲೇನ್ ಹೈಸ್ಕೂಲ್ ಥಿಯೇಟರ್, ಬೆಡ್ ಪೋರ್ಡ್ ನ್ಯೂಯಾರ್ಕ್ ಇಲ್ಲಿ ನಡೆಯಲಿರುವುದು. ಆನ್ಯ ಮಂಗಳೂರು ಸುರತ್ಕಲ್ ನಿವಾಸಿಗಳಾದ ಪ್ರೇಮಾ ಹಾಗೂ ನಾರಾಯಣ ದಂಪತಿ ಮೊಮ್ಮಗಳು. ಈ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಭರತನಾಟ್ಯ, ನೃತ್ಯ ನಾಟಕ, ಶಾಸ್ತ್ರೀಯ/ಅರೆಶಾಸ್ತ್ರೀಯ/ ನವ್ಯ ಈ ರೀತಿಯ ವಿವಿಧ ಪ್ರಕಾರಗಳ ಪ್ರದರ್ಶನವಿರುವುದು. ಈ ಪ್ರದರ್ಶನದಲ್ಲಿ ಇರುವ ನೃತ್ಯ ಕೊರಿಯೋಗ್ರಾಫಿ ಹಾಗೂ ಮಾರ್ಗದರ್ಶನದ ಹಿಂದೆ ಗುರು ಲತಿಕಾ ಉನ್ನಿ ಮತ್ತು ವಿದುಷಿ ಸುಮಂಗಲಾ ರತ್ನಾಕರರಾವ್ ಹಾಗೂ ಎಲ್ಲಾ
ಪೋಷಕರ ಬೆಂಬಲವಿದೆ.
” ತಡೇಲ್ ಮಕ್ಕಳ ಆಸ್ಪತ್ರೆ”ಯು ಮಕ್ಕಳ ಶುಶೂಷೆ, ವಿದ್ಯಾಭ್ಯಾಸ ಮುಂತಾದ ಸೇವೆಗಳನ್ನು ಬಹಳ ಮುತುವರ್ಜಿಯಿಂದ ನೀಡುತ್ತಿದ್ದು ಈ ಆಸ್ಪತ್ರೆಯ ವಿವಿಧ ಸೇವೆಗಳನ್ನು ಹಾಗೂ ಈ ಆಸ್ಪತ್ರೆಯ ಒತ್ತಿನಲ್ಲಿರುವ ಕಾಲೇಜಿನ ಅಭಿವೃದ್ಧಿಪರ ಚಟುವಟಿಕೆಗಳನ್ನು ಗುರುತಿಸಿದ ಈ ಮಕ್ಕಳು ಈ ಆಸ್ಪತ್ರೆಗೆ ಆರ್ಥಿಕ ಸಹಾಯಾರ್ಥಕವಾಗಿ ನೀಡಲು “ಸೇವೆಗಾಗಿ ನೃತ್ಯ” ಎನ್ನುವ ಈ ಕಾರ್ಯಕ್ರಮವನ್ನು ಹಮ್ಮಿಕ ದೊಂಡಿರುವರು ಈಗಾಗಲೇ ಸುಮಾರು 25 ಸಾವಿರ ಡಾಲರ್ ನಷ್ಟು ನಿಧಿ ಸಂಗ್ರಹಿಸಿ ನೀಡಿರುವ ಈ ತಂಡವು ಪ್ರಸ್ತುತ ಕಾರ್ಯಕ್ರಮದ ಮುಖೇನ ಒಂದು ದೊಡ್ಡ ಮಟ್ಟದ ಮೊತ್ತವನ್ನು ಸಹಾಯಾರ್ಥವಾಗಿ, ಮಾನವೀಯ ನೆಲೆಯಲ್ಲಿ ಯಾವುದೇ ಲಾಭ ನಿರೀಕ್ಷಿಸದೆ ಮಕ್ಕಳಿಗೆ ಸೇವೆ ನೀಡುತ್ತಿರುವ ಈ ಆಸ್ಪತ್ರೆಗೆ ನೀಡುವರೇ ನಿರ್ಧರಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು