10:15 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ: ಅಪ್ಪಟ ಗ್ರಾಮೀಣ ಸೊಗಡಿನ ಸಣ್ಣ ಗೌರಿಹಬ್ಬ

21/10/2021, 08:36

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕಾಚರಣೆಗಳಿಗೆ ಲೆಕ್ಕವಿಲ್ಲ, ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ಅಮವಾಸ್ಯೆ ಹುಣ್ಣಿಮೆಗೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿರುತ್ತೆ.ಅಂತೆಯೇ ಸೀಗೆಹುಣ್ಣಿಮೆ ಸಣ್ಣ ಗೌರಿಹಬ್ಬ ಎಂದು ಕರೆಸಿಕೊಳ್ಳುವ ಕಿನ್ನರಿಯರ ಹಬ್ಬವಾಗಿದೆ.

ದಸರಾ ಹಬ್ಬದ ನಂತರದಲ್ಲಿಯೇ ಗರಿಗೆದರುವ ಸೀಗೆಹುಣ್ಣಿಮೆ ಅಪ್ಪಟ ಗ್ರಾಮೀಣ ಸೊಗಡಿನ ಕಿನ್ನರಿಯರ ಹಬ್ಬವಾಗಿದೆ. 

ಕಿನ್ನರಿಯರು ಹಿರಿಯರ ಹೆಂಗಳೆಯರ ಸೀರೆಯನ್ನುಟ್ಟು, ದೀಪಗಳೊಂದಿಗೆ  ಸಕ್ಕರಾರತಿಯನ್ನು  ಇಟ್ಟುಕೊಂಡು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಗೌರಿ ಮೂರ್ತಿ ಗೆ ಬೆಳಗುವ ಸಾಂಪ್ರದಾಯಿಕ ಹಬ್ಭ ಇದಾಗಿದೆ. ಸೀಗೆ ಹುಣ್ಣಿಮೆಯಂದು ಕೂಡ್ಲಿಗಿ ಪಟ್ಟಣ ಸೇರಿದಂತೆ ಕೂಡ್ಲಿಗಿ ತಾಲೂಕು, ವಿವಿಧೆಡೆಯ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ತಮ್ಮ ಹೆತ್ತವುರು ತೊಡಿಸಿದ ಸೀರೆಯನ್ನುಟ್ಟು ಗೌರಿಯನ್ನಾರಾಧಿಸಿ ಸಂಭ್ರಮಿಸಿದರು. ಸೀಗೆ ಹುಣ್ಣಿಮೆ ಹಲವೆಡೆಗಳಲ್ಲಿ ಸೀಗೆ ಹುಣ್ಣಿಮೆ ಎಂದರೆ ಮತ್ತಿತರೆ ಕಡೆಗಳಲ್ಲಿ ಸಣ್ಣಗೌರಿಹಬ್ಬ ಎಂದೇ ಪ್ರತೀತಿ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು