ಇತ್ತೀಚಿನ ಸುದ್ದಿ
ಸೆ.26ರಿಂದ ಅ.10ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ: ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್
12/09/2022, 23:26
ಮಂಗಳೂರು(reporterkarnataka.com):ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆಯನ್ನು ಪರಿಷ್ಕರಣೆ ಮಾಡಿದ್ದು, ಸೆ.26ರಿಂದ ಅ.10ರವರೆಗೆ ನೀಡಲು ತೀರ್ಮಾನಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಥಳೀಯ ಮಟ್ಟದ ಮನವಿ ಮೇರೆಗೆ ದಸರಾ ರಜೆಯನ್ನು ದ.ಕ ಜಿಲ್ಲೆಗೆ ಪೂರಕವಾಗುವಂತೆ ಪರಿಶೀಲಿಸಲಾಗಿದ್ದು, ಪ್ರಕಟಣೆ ಹೊರಡಿಸುವಂತೆ ಸೂಚಿಸಿದ್ದಾರೆ. ಆದರೆ ಅ.2ರ ಗಾಂಧಿ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ.
ಶಾಸಕ ಡಿ. ವೇದವ್ಯಾಸ ಕಾಮತ್ ಅವರು ದಸರಾ ರಜೆ ಕುರಿತು ಸಚಿವ ನಾಗೇಶ್ ಜತೆ ಚರ್ಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.