ಇತ್ತೀಚಿನ ಸುದ್ದಿ
ಸೀನಿಯರ್ ಸಿಟಿಜನ್ ಗಳಿಗೆ ಬೈಯುವ ಖಾಸಗಿ ಬಸ್ ಕಂಡೆಕ್ಟರ್ ಗಳು: ಪೊಲೀಸ್ ಕಮಿಷನರ್ ಫೋನ್ – ಇನ್ ಕಾರ್ಯಕ್ರಮದಲ್ಲಿ ಬಹಿರಂಗ
02/09/2023, 11:33

ಮಂಗಳೂರು(reporterkarnataka.com) ಬಸ್ಸು ಹತ್ತುವಾಗ, ಇಳಿಯುವಾಗ ಬಸ್ ನಿರ್ವಾಹಕರು ಬೈಯ್ಯುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ನೊಂದು ದೂರು ನೀಡಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ನಡೆದ ಪೋನ್ – ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು
ಈ ಆಘಾತಕ್ಕಾರಿ ದೂರನ್ನು ಸ್ವೀಕರಿಸಿದರು. ಸುಶಿಕ್ಷಿತರ ನಾಡು, ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹಿರಿಯ ನಾಗರಿಕರೊಬ್ಬರು ನೋವಿನಿಂದ ಈ ದೂರನ್ನು ಫೋನ್- ಇನ್ ಕಾರ್ಯಕ್ರಮದಲ್ಲಿ ಮೌಖಿಕವಾಗಿ ದಾಖಲಿಸಿದ್ದಾರೆ. ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು ಕೂಡ ಸೀನಿಯರ್ ಸಿಟಿಜನ್ ಅವರ ದುಖಃ ದುಮ್ಮಾನಕ್ಕೆ ಸಕರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಸಾಮಾನ್ಯವಾಗಿ ಮಂಗಳೂರಿನ ಸಿಟಿ ಹಾಗೂ ಸರ್ವಿಸ್ ಬಸ್ ನ ಕೆಲವು ಕಂಡೆಕ್ಟರ್ ಗಳು ವಿದ್ಯಾರ್ಥಿ ಹಾಗೂ ಯುವ ಸಮುದಾಯದ ಜತೆ ಈ ರೀತಿ ದುರ್ವತನೆ ತೋರಿಸುವುದು ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಅದೀಗ ಎಲ್ಲೆ ಮೀರಿ ವಯಸ್ಸಾದ ಹಿರಿಯ ನಾಗರಿಕರ ವರೆಗೆ ತಲುಪಿರುವುದು ಪೊಲೀಸ್ ಇಲಾಖೆಯನ್ನು ಒಂದು ಕ್ಷಣ ಚಿಂತಿಸುವಂತೆ ಮಾಡಿದೆ.
ಜಾರ್ಜ್ ಫೆರ್ನಾಂಡಿಸ್ ಎಂಬವರು ಕರೆ ಮಾಡಿ ನಗರದ ವೆಲೆನ್ಸಿಯಾದಲ್ಲಿ ಪಾದಚಾರಿಗಳು ಓಡಾಡುವ
ಫುಟ್ ಪಾತ್ ನಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ನಮಗೆ ಸಮಸ್ಯೆ ಆಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅವರ ಜತೆ ನಿವೇದಿಸಿಕೊಂಡಿದ್ದಾರೆ. ಹಾಗೆ ವೆಲೆನ್ಸಿಯಾದಲ್ಲಿ ಆ್ಯಂಬ್ಯುಲೆನ್ಸ್
ಡೋರ್ ಓಪನ್ ಮಾಡಿ ಒಳಗೆ ಕುಳಿತು ಕೊಳ್ತಾರೆ. ಅದು ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರು ಕೂಡ ಬಂದಿದೆ.
ಬಜಪೆ ಸಮೀಪದ ಮರವೂರಲ್ಲಿ ರಾತ್ರಿ ಹೊತ್ತು ಅಕ್ರಮವಾಗಿ ಹೊಯಿಗೆ ತೆಗೆಯುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಎಲ್ ಇಡಿ ಲೈಟ್ ಗಳಿಂದ ಹೆಚ್ಚಾಗಿ ಅಪಘಾತ ಸಂಭವಿಸುತ್ತಿದೆ ಎಂಬ ಕಳಕಳಿ ಕೂಡ ವ್ಯಕ್ತವಾಗಿದೆ. ಕುಂಜತ್ತ್ ಬೈಲ್ ಗೆ ಪರ್ಮಿಟ್ ಇದ್ದರೂ ಬಸ್ ಬರುವುದಿಲ್ಲ ಎಂಬ ದುಮ್ಮಾನ ಬಹಿರಂಗಗೊಂಡಿದೆ.
ಬೈಕಂಪಾಡಿ ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳ
ಪಾರ್ಕಿಂಗ್ ಮಾಡುತ್ತಾರೆ ಎಂದು ಉರ್ವಸ್ಟೋರ್ ನಿಂದ ಸುರತ್ಕಲ್ ಗೆ ತೆರಳುವ ನಿತ್ಯ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ.