ಇತ್ತೀಚಿನ ಸುದ್ದಿ
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲಿಜನ್ ಗೆ ರಾಷ್ಟ್ರೀಯ ಉಪಾಧ್ಯಕ್ಷ ಸಂಪತ್ ಕುಮಾರ್ ಭೇಟಿ
09/12/2022, 16:03

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲಿಜನ್ ಗೆ ಸೀನಿಯರ್ ಪಿಪಿಎಫ್ ಸಂಪತ್ ಕುಮಾರ್ ಅವರು ಅಧಿಕೃತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಗರದ ಯೆಯ್ಯಾಡಿ-ಕೊಂಚಾಡಿಯಲ್ಲಿರುವ ಹೋಟೆಲ್ ಶ್ರೀ ಶಂಕರ ಭವನ ದಲ್ಲಿ ಆಯೋಜಿಸಿದ ಸಭೆಯಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರಾದ (ಸಮುದಾಯ ಅಭಿವೃದ್ಧಿ) ಐಪಿಎನ್ ಪಿ ಸೀನಿಯರ್ ಪಿಪಿಎಫ್ ಚಿತ್ರ ಕುಮಾರ್ ಪ್ರಾಯೋಜಕತ್ವದಲ್ಲಿ 10 ಕನ್ನಡಕಗಳನ್ನು ವಿತರಿಸಲಾಯಿತು. ಐಪಿಎನ್ ಪಿ ಸೀನಿಯರ್ ಡಾ. ಅರವಿಂದ ಕೇದಿಗೆ ಅವರು ಸಂಪತ್ ಕುಮಾರ್ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಲೀಜನ್ ಅಧ್ಯಕ್ಷ ಕಿಶೋರ್ ಫರ್ನಾಂಡಿಸ್ ಅತಿಥಿಯನ್ನು ಸ್ವಾಗತಿಸಿದರು. ಲೀಜನ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿ ಆರ್ ಒ) ಹಾಗೂ ಜತೆ ಕಾರ್ಯದರ್ಶಿ ಲತಾ ಕಲ್ಲಡ್ಕ ಅವರು ಸಂಪತ್ ಕುಮಾರ್ ಅವರ ಕಿರು ಪರಿಚಯ ನಡೆಸಿಕೊಟ್ಟರು. ಸೀನಿಯರ್ ವಾಣಿಯನ್ನು ಅಶೋಕ್ ಅವರು ವಾಚಿಸಿದರು. ಲಿಜನ್ ಮಾಜಿ ಅಧ್ಯಕ್ಷರಾದ ಹರಿಪ್ರಸಾದ್ ರೈ,
ಉಪಾಧ್ಯಕ್ಷರಾದ ದತ್ತಾತ್ರೇಯ,ಕೋಶಾಧಿಕಾರಿ ಶಾಲಿನಿ ಪ್ರಶಾಂತ್ ಸುವರ್ಣ, ಸೀನಿಯರೇಟ್ ಅಧ್ಯಕ್ಷೆ ನಿರ್ಮಲಾ ಪ್ರಮೋದ್,
ಸೀನಿಯರೇಟ್ ಕಾರ್ಯದರ್ಶಿ ಮಾಲತಿ ಶೆಟ್ಟಿ, ಸದಸ್ಯರಾದ ಹೀರಾಚಂದ್, ಪ್ರಶಾಂತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಲಿಜನ್ ಕಾರ್ಯದರ್ಶಿ ಪ್ಲೇವಿ ಗ್ಲಾಡಿಸ್ ಡಿಮೆಲ್ಲೋ ವಂದಿಸಿದರು.