6:49 AM Friday18 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ  ಕರ್ನಾಟಕ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ‘ಸ್ಕಿಲ್ಅಪ್’ 

23/06/2022, 00:13

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಕರ್ನಾಟಕ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ‘ಸ್ಕಿಲ್ಅಪ್’ ನಗರದ ಶಕ್ತಿನಗರದ ಕಲಾಂಗಣದಲ್ಲಿ ಜರುಗಿತು.

ಕಾರ್ಯಾಗಾರವನ್ನು ಅಂತಾರಾಷ್ಟ್ರೀಯ ಅಧ್ಯಕ್ಷರಾದ Snr.PPF. ಭರತ್ ದಾಸ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ರಾಷ್ಟ್ರೀಯ ನಿರ್ದೇಶಕರಾದ(ಆಡಳಿತ)Snr.Csl.PPF. ಜೋಸ್ ಕಂಡೋತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಂತಾರಾಷ್ಟ್ರೀಯ ನಿಕಟ ಪೂರ್ವ ಅಧ್ಯಕ್ಷರಾದ  Snr.PPF. ಡಾ.ಕೇದಿಗೆ ಅರವಿಂದ್ ರಾವ್, ರಾಷ್ಟ್ರೀಯ ಉಪಾಧ್ಯಕ್ಷರಾದ Snr.PPF. ಸಂಪತ್ ಕುಮಾರ್,  ಕಾರ್ಯದರ್ಶಿ Snr.PPF.ರಾಜೇಶ್ ವೈಭವ್,ಜನರಲ್ ಲೀಗಲ್ ಕೌನ್ಸಿಲ್ Snr.Csl.ವರ್ಗೀಸ್  ವೈದ್ಯನ್, ಕೋಶಾಧಿಕಾರಿ Snr.PPF ಉದಯಭಾನು, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನಿನ ನಿಕಟಪೂರ್ವ ಅಧ್ಯಕ್ಷರಾದ Snr.PPF.ಜಿ.ಕೆ. ಹರಿಪ್ರಸಾದ ರೈ, ಕಾರ್ಯದರ್ಶಿ Snr.PPF. ಫ್ಲೇವಿ ಡಿಮೆಲ್ಲೊ ಉಪಸ್ಥಿತರಿದ್ದರು. 


ತರಬೇತಿ ಕಮ್ಮಟವನ್ನು ರಾಜೇಶ್ ವೈಭವ್ ಸಂಯೋಜಿಸಿದರು. ತರಬೇತುದಾರರಾಗಿ Snr.PPF. ನಾಗೇಶ್, ವರ್ಗೀಸ್ ವೈದ್ಯನ್, ಎಂ.ಆರ್.ಜಯೇಶ್, ಸಂಪತ್ ಕುಮಾರ್, ಉದಯಭಾನು, ಕೇದಿಗೆ ಅರವಿಂದ ರಾವ್  ಅವರು ಆಗಮಿಸಿ ತರಬೇತಿ ನಡೆಸಿಕೊಟ್ಟರು. ಕರ್ನಾಟಕ ರಾಜ್ಯದ  27 ಲೀಜನ್ ಗಳಿಂದ ಸುಮಾರು 100 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಮುಖಪತ್ರಿಕೆ ‘ಇನ್ಸ್ಕ್ರೋಲ್’ಮತ್ತು ಮಂಗಳೂರು ಲೀಜನಿನ ಮುಖ ಪತ್ರಿಕೆ ‘ಸುಮಂಗಲಾ’ ವನ್ನು ಅಂತಾರಾಷ್ಟ್ರೀಯ ಅಧ್ಯಕ್ಷರು ಅನಾವರಣಗೊಳಿಸಿದರು. ಲೀಜನ್ ಅಧ್ಯಕ್ಷ  Snr.PPF. ಕಿಶೋರ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ Snr ದತ್ತಾತ್ರೇಯ ವಂದಿಸಿದರು. Snr.PPF.ಶಾಲಿನಿ ಸುವರ್ಣ ಸೀನಿಯರ್ ವಾಣಿ ಪಠಿಸಿದರು. ಜೇಸಿ ಚೇತನಾ ದತ್ತಾತ್ರೇಯ ಕಾರ್ಯಕ್ರಮ  ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು