ಇತ್ತೀಚಿನ ಸುದ್ದಿ
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್- ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಡಾ. ಆನಂದ್ ಬಂಜನ್ ಆಯ್ಕೆ
21/06/2023, 10:25

ಬಂಟ್ವಾಳ(reporterkarnataka.com): ಸೀನಿಯರ್ ಛೇಂಬರ್ ಇಂಟರ್ ನೇಶನಲ್- ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಇಂಜಿನಿಯರ್ ಡಾ. ಆನಂದ್ ಬಂಜನ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಕಿತ್ತೂರ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತೆ ಅಡ್ವೊಕೇಟ್ ಶೈಲಜಾ ರಾಜೇಶ್ ಮತ್ತು ಖಜಾಂಜಿಯಾಗಿ ಸತ್ಯನಾರಾಯಣ ರಾವ್ ಆಯ್ಕೆಯಾಗಿದ್ದಾರೆ.
ಡಾ. ಆನಂದ್ ಬಂಜನ್ ಅವರು ಇಂಜಿನಿಯರ್ಸ್ ಅಸೋಸಿಯೇಶನ್, ಜೂನಿಯರ್ ಛೇಂಬರ್, ಸರಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಸರಕಾರಿ ನೌಕರರಿಗೆ ಕರ್ನಾಟಕ ಸರಕಾರದಿಂದ ಗಣರಾಜ್ಯೋತ್ಸವದಂದು ಗೌರವಿಸಲ್ಪಡುವ ಸರ್ವೋತ್ತಮ ಸೇವಾ ಪ್ರಶಸ್ತಿ 2020 ರಲ್ಲಿ ಭಾಜನರಾಗಿದ್ದರು.
ಇವರು ಪ್ರಕಟಿಸಿದ ಕೃತಿ ಮತ್ತೆ ಹುಟ್ಟಿ ಬಾ ಸರ್ವಜ್ಞ ಮಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು ಹಾಗೂ ವ್ಯಾಪಕ ಜನಮನ್ನಣೆ ಗಳಿಸಿತ್ತು.
ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡ ಕೃತಿ ತುಳುನಾಡ ವೈಭವ ತುಳುವರ ಆಚಾರ ವಿಚಾರ, ಹಬ್ಬ ಹರಿದಿನಗಳ ಕುರಿತಾದ ವಿಸ್ತೃತ ಲೇಖನ ಇದಾಗಿದೆ.
ನಿಕಟ ಪೂರ್ವ ಖಜಾಂಜಿ ಬಿ.ರಾಮಚಂದ್ರ ರಾವ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು
ಉಪಾಧ್ಯಕ್ಷರುಗಳಾಗಿ ಆದಿರಾಜ ಜೈನ್, ಡಾ.ಎ ಮನೋಹರ್ ರೈ, ನಾಗೇಶ್ ಬಾಳೆಹಿತ್ಲು, ಅಹಮದ್ ಮುಸ್ತಾಫ, ಸಂದೇಶ್ ಕುಮಾರ್ ಡಿ, ವಸಂತ್ ಪಿ,
ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕಾ ಆಳ್ವ,
ನಿರ್ದೇಶಕರುಗಳಾಗಿ ಬಿ.ರಾಮಚಂದ್ರ ರಾವ್(ಟ್ರೈನಿಂಗ್ ಏರಿಯ), ಡಾ.ರಾಜೇಶ್ ಪೂಜಾರಿ(ಹೆಲ್ತ್ ಕೇರ್), ಕೃಷ್ಣರಾಜ ಭಟ್( ಕಲ್ಚರಲ್ ಎಂಟರ್ಟೈನ್ಮೆಂಟ್), ರವೀಂದ್ರ ಕುಕ್ಕಾಜೆ(ಲೀಗಲ್ ಅಡ್ವಯಿಸರ್), ಲೊಕೇಶ್ ಕುಲಾಲ್(ಮೊರಲ್ ಎಡುಕೇಶನ್), ತಾರಾನಾಥ ಕೊಠ್ಠಾರಿ( ಇಂಜಿನಿಯರಿಂಗ್ ಎಡ್ವಯಿಸರ್), ಸಂದೀಪ್ ಸಾಲಿಯಾನ್( ಮೀಡಿಯ & ಕಮ್ಯುನಿಕೇಶನ್), ಪಿ.ಮಹಮ್ಮದ್ ( ಸೆಲ್ಫ್ ಎಂಪ್ಲಾಯ್ಮೆಂಟ್), ಸಚ್ಚಿದಾನಂದ ಸಾಲಿಯಾನ್( ಎಲೆಕ್ಟ್ರಿಕಲ್ ಎನರ್ಜಿ), ನಾಗೇಶ್ ಮಾರ್ತಾಜೆ( ರೂರಲ್ ಡೆವಲಪ್ ಮೆಂಟ್), ಸುಜಾತ(ಪಬ್ಲಿಕ್ ರಿಲೇಶನ್), ಹರಿಶ್ಚಂದ್ರ ಆಳ್ವ( ಎಗ್ರಿಕಲ್ಚರಲ್ ಕನ್ಸಲ್ಟೆಂಟ್), ಯೊಗಿಶ್ ಬಂಗೆರ( ಬಿಸಿನೆಸ್ ಎರಿಯ), ಸತಿಷ್ ಕುಲಾಲ್ ಮದ್ವ( ಹ್ಯೂಮನ್ ರಿಲೇಶನ್), ಶುಭ ಬಂಜನ್ ( ವುಮನ್ ವೆಲ್ ಫೇರ್), ಭವ್ಯ ರೂಪೇಶ್( ಸೋಶಿಯಲ್ ವರ್ಕ್), ಮನೊಜ್ ಕನಪಾಡಿ( ಆರ್ಟ್ & ಕಲ್ಚರ್), ಜಯಗಣೇಶ್ ಬಂಗೇರ( ಲಿಟರೇಚರ್), ಪ್ರಶಾಂತ ಕುಲಾಲ್ ಕನಪಾಡಿ( ಆರ್ಕಿಟೆಕ್ಚರ್), ತೋಮಸ್ ಡಿ.ಕೊಸ್ಟ( ಫೋಟೊಗ್ರಾಫಿ), ಅಶೋಕ್ ಕೆ( ಆರ್ಗಾನಿಕ್ ಫಾರ್ಮಿಂಗ್), ಸದಾನಂದ ಬಿ ಬಂಗೇರ( ಫುಡ್ & ನ್ಯುಟ್ರಿಷನ್, ರಾಘವೇಂದ್ರ ಶೆಟ್ಟಿ( ಹ್ಯೂಮನ್ ರಿಲೇಶನ್, ಆಶಿಕ್ ಕುಕ್ಕಾಜೆ( ಸರ್ವಿಸ್), ಅಕ್ಬರ್ ಆಲಿ( ಸ್ಪೋರ್ಟ್ಸ್ & ಗೇಮ್ಸ್,), ಮಹೇಶ್ ಚಂದ್ರಿಗೆ(ಹ್ಯುಮಾನಿಟಿ), ಸುಧೀರ್ ಕುಮಾರ್( ಪಬ್ಲಿಕ್ ರಿಲೇಶನ್), ವೇಣುಗೋಪಾಲ್ ( ನೇಶನಾಲಿಟಿ)