11:38 PM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

Science & Technology | ಬಂಜೆತನ ಎದುರಿಸುತ್ತಿರುವವರಿಗೆ ಫಲವತ್ತತೆ ಕುರಿತು ಮಾರ್ಗದರ್ಶನ: ಉಚಿತ ಟೋಲ್-ಫ್ರೀ ಸಂಖ್ಯೆ ಆರಂಭ

23/06/2025, 21:22

ಬೆಂಗಳೂರು(reporterkarnataka.com): ದೇಶದಲ್ಲಿ ಫಲವತ್ತತೆ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಫಲವತ್ತತೆ ಕುರಿತು ಸಲಹೆ ನೀಡಲು ಉಚಿತ ಟೋಲ್‌-ಫ್ರೀ ದೂರವಾಣಿ ವ್ಯವಸ್ಥೆ ಕಲ್ಪಿಸಿದೆ.
ಈ ಕುರಿತು ಮಾತನಾಡಿದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಅಗ್ರವಾಲ್,
1800 123 1515 ಈ ಟೋಲ್‌ಫ್ರೀ ಸಂಖ್ಯೆಯು ವಾರದ ದಿನಗಳಲ್ಲಿ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲಿದೆ, ಪ್ರಸ್ತುತ ಇಂಗ್ಲಿಷ್‌ ಹಾಗೂ ಹಿಂದೆ ಭಾಷೆಯಲ್ಲಿ ಈ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಒತ್ತಡದ ಬದುಕಿನಿಂದಾಗಿ ಸಾಕಷ್ಟು ಜನರು ಇಂದು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಫಲವತ್ತತೆ ಹೊಂದದೇ ಇರಲು ಕಾರಣವೇನು ಎಂಬುದರ ಬಗ್ಗೆಯೂ ಸಾಕಷ್ಟು ಜನರಿಗೆ ಸ್ಪಷ್ಟತೆ ಇರುವುದಿಲ್ಲ ಅಷ್ಟೇ ಅಲ್ಲದೆ, ಸಾಕಷ್ಟು ಗೊಂದಲ ಹಾಗೂ ಹತಾಶೆ ಹೊಂದಿರುತ್ತಾರೆ. ಮುಂದೆ ಏನು ಮಾಡಬೇಕು ಎಂಬ ಅರಿವಿನ ಕೊರತೆಯಲ್ಲೂ ಇರುತ್ತಾರೆ. ಇವರಿಗಾಗಿಯೇ ಬಿರ್ಲಾ ಫರ್ಟಿಲಿಟಿ ದೇಶಾದ್ಯಂತ ಈ ಟೋಲ್‌ಫ್ರೀ ಉಚಿತ ಕರೆಯನ್ನು ಪರಿಚಯಿಸಿದೆ. ಈ ಮೂಲಕ ದಂಪತಿಗಳಿಗೆ ಮಾರ್ಗದರ್ಶನ ನೀಡುವುದು, ಭಾವನಾತ್ಮಕ ಬೆಂಬಲ ಮತ್ತು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಆಂತರಿಕ ಅಧ್ಯಯನದ ಪ್ರಕಾರ, ಫಲವತ್ತತೆಯ ಸಮಸ್ಯೆ ಎದುರಿಸುತ್ತಿರುವ ಶೇ, 90ರಷ್ಟು ದಂಪತಿಗಳು ಭಾವನಾತ್ಮಕತೆಯಿಂದ ಬಳಲುತ್ತಾರೆ. ಇದರಲ್ಲಿ ಶೇ, 29ರಷ್ಟು ಜನರು ಮಾತ್ರ ವೈದ್ಯರ ಬೆಂಬಲ ಪಡೆಯುತ್ತಾರೆ. ಎರಡು ವರ್ಷಗಳವರೆಗೆ ಸಹಾಯ ಪಡೆಯಲು ಅನೇಕರು ವಿಳಂಬ ಮಾಡುತ್ತಾರೆ, ಗೊಂದಲ, ಕಳಂಕದಿಂದ ಹಿಂದೆ ಸರಿಯುತ್ತಾರೆ ಅಥವಾ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಇವರಿಗಾಗಿ ಫಲವತ್ತತೆ ವಲಯವು ತರಬೇತಿ ಪಡೆದ ಸಲಹೆಗಾರರಿಂದ ತೀರ್ಪು-ಮುಕ್ತ ಮಾರ್ಗದರ್ಶನ ನೀಡುವ ಮೂಲಕ ಈ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಯಾವುದೇ ವೆಚ್ಚ, ಒತ್ತಡ ಮತ್ತು ಸಂಪೂರ್ಣ ಗೌಪ್ಯತೆ ಕಾಪಾಡಲಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು