ಇತ್ತೀಚಿನ ಸುದ್ದಿ
ಸರಕಾರಿ ಕಚೇರಿಯಲ್ಲಿ ಅನಧಿಕೃತ ಪೋಟೊ, ವೀಡಿಯೋ ನಿಷೇಧ: 24 ತಾಸಿನೊಳಗೆ ಸರಕಾರ ಯುಟರ್ನ್ !; ಆದೇಶ ವಾಪಸ್
16/07/2022, 09:49
ಬೆಂಗಳೂರು(reporterkarnataka.com): ರಾಜ್ಯ ಸರಕಾರ ತಾನು ಮಾಡಿದ ಆದೇಶವನ್ನು 24 ತಾಸಿನೊಳಗೆ ವಾಪಸ್ ಪಡೆದಿದೆ. ರಾಜ್ಯದ ಎಲ್ಲ ಸರಕಾರಿ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ಮಾಡಬಾರದು ಎಂದು ಹೊರಡಿಸಿದ ಆದೇಶವನ್ನು ತಡರಾತ್ರಿ ವಾಪಸ್ ಪಡೆದಿದೆ.
ರಾಜ್ಯ ಸರಕಾರದ ಅಧೀನಕ್ಕೊಳಪಟ್ಟ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡದಂತೆ ನಿಷೇಧಿಸಿ ಸರಕಾರ ಜುಲೈ 15ರಂದು ಆದೇಶ ಹೊರಡಿಸಿತ್ತು. ಸರಕಾರಿ ನೌಕರರ ಮನವಿಯ ಮೇರೆಗೆ ಸರಕಾರ ಈ ಆದೇಶ ಹೊರಡಿಸಿತ್ತು. ಆದರೆ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್ ಪಡೆದಿದೆ.
ಈ ಆದೇಶದ ಹಿಂದೆ ಭ್ರಷ್ಟಾಚಾರ ಅಡಗಿದೆ. ಕಚೇರಿಯೊಳಗೆ ವಿಡಿಯೋ ಪೋಟೊ ತೆಗೆದರೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇದರ ಹಿಂದೆ ಷಡ್ಯಂತರ ಅಡಗಿದೆ ಎಂದು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು.