ಇತ್ತೀಚಿನ ಸುದ್ದಿ
ಸರಕಾರದಿಂದ ಇನ್ನೂ ಸಿಕ್ಕಿಲ್ಲ ವಿಶೇಷ ಪ್ಯಾಕೇಜ್: ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವರ್ಯಾರು?
29/05/2021, 08:18
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡಿ ರಾಜ್ಯವೇ ತಲ್ಲಣಗೊಂಡಿದೆ. ಇಂಥ ಪರಿಸ್ಥಿತಿಯ ಖಾಸಗಿ ಶಾಲಾ ಶಿಕ್ಷಕ ಬದುಕು ಬೀದಿಗೆ ಬಂದಿದೆ. ನಾವು ಗುರುವೇ ದೇವರು ಎಂದು ನಂಬುತ್ತೇವೆ. ಅಂತಹ ಗುರುಗಳು ಕಳೆದ ಎರಡು ವರ್ಷಗಳಿಂದ ಯಾವುದೇ ಸಂಬಳವಿಲ್ಲದೆ ಕುಟುಂಬ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.
ಖಾಸಗಿ ಶಾಲೆ ಶಿಕ್ಷಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿರುವುದು ಎದ್ದುಕಾಣುತ್ತದೆ. ಜಿಲ್ಲೆ ಎಲ್ಲ ಅತಿಥಿ ಶಿಕ್ಷಕರು, ಖಾಸಗಿ ಶಾಲಾ ಶಿಕ್ಷಕರು ನೋವು ಅನುಭವಿಸುತ್ತಿದ್ದಾರೆ. ಖಾಸಗಿ ಆಡಳಿತ ಮಂಡಳಿ ಕೆಲವರಿಗೆ ಸಂಬಳ ಕೊಟ್ಟಿದ್ದಾರೆ. ಕೆಲವರಿಗೆ ಕೊಟ್ಟಿಲ್ಲ. ಯಾವುದೇ ಹಣ ನೀಡದೆ ಸಂಸ್ಥೆ ಕೈತೊಳೆದುಕೊಂಡಿದೆ. ಸರಕಾರ ವಿಶೇಷ ಪ್ಯಾಕೇಜ್ ಮಾಡುತ್ತದೆ ಎಂದು ಭರವಸೆ ನೀಡಿ ಇಲ್ಲಿವರೆಗೂ ಯಾವುದೇ ಜಾರಿಗೊಳಿಸದೆ ಮತ್ತಷ್ಟು ಶಿಕ್ಷಣ ಕ್ಷೇತ್ರದಲ್ಲಿ ನೋವು ಉಂಟುಮಾಡಿದೆ. ಮನಸ್ಸಿಗೆ ನಿರಾಶೆ ತಂದಿದೆ. ಉನ್ನತ ಕೋರ್ಸ್ ಮುಗಿಸಿ ಪರಿಣತಿ ಪಡೆದವರಿಗೆ ಕೂಡ ನಿರುದ್ಯೋಗ ತಪ್ಪಿಲ್ಲ. ಎರಡು ವರ್ಷ ಕೊರೊನಾ ಲಾಕ್ ಡೌನ್ ಆಗಿ ಶಾಲಾ ಕಾಲೇಜು ಸರಕಾರ ರಜೆ ಘೋಷಣೆ ಮಾಡಿರುವುದರಿಂದ ಒಂದು ದಿನದ ಆಹಾರ ಪಡೆದುಕೊಳ್ಳಲು ಸಹ ಕಣ್ಣೀರು ಹಾಕುವ ಪರಿಸ್ಥಿತಿ ಉದ್ಬವಿಸಿದೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಶಾಸಕರು ಎಲ್ಲಾ ಭರವಸೆಗಳನ್ನು ನೀಡಿ, ಮನವಿ ಪತ್ರ ಸ್ವೀಕರಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳೀಯ ಪ್ರತಿನಿಧಿ ಆದರೂ ಸಹಾಯ ಮಾಡಬಹುದು ಎಂಬ ಭರವಸೆಯ ಮೇಲೆ ನಂಬಿ ಕುಂತಿರುವ ಖಾಸಗಿ ಶಿಕ್ಷಕರ ಗೋಳು ಕೇಳುವವರೇ ಇಲ್ಲವಾಗಿದೆ. ಸರಕಾರ ಎಚ್ಚೆತ್ತುಕೊಂಡು ವಿದ್ಯೆ ಕಲಿಸುವ ಗುರುಗಳಿಗೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಿ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಕುರಿತು ಖಾಸಗಿ ಶಾಲಾ ಶಿಕ್ಷಕಿ ಕೆ. ಸರಸ್ವತಿ ನಾಗರಾಜ್ ಗಂಗಾಮತ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರಿಗೆ, ಖಾಸಗಿ ಶಿಕ್ಷಕರಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕು. ಖಾಸಗಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಕಳೆದ 2 ವರ್ಷಗಳು ಕಷ್ಟಗಳು ಎದುರಿಸುವಂತಾಗಿದೆ ಎಂದು ತಮ್ಮ ನೋವನ್ನು ರಿಪೋರ್ಟರ್ ಕರ್ನಾಟಕ ಮುಂದೆ ತೋಡಿಕೊಂಡಿದ್ದಾರೆ.