6:34 PM Wednesday16 - July 2025
ಬ್ರೇಕಿಂಗ್ ನ್ಯೂಸ್
Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ…

ಇತ್ತೀಚಿನ ಸುದ್ದಿ

ಸಂತ ಕನಕದಾಸರು ಸರ್ವರಲ್ಲಿ ಆದ್ಯಾತ್ಮಿಕ ನೆಮ್ಮದಿ ಮೂಡಿಸಿದ ಮಾನವತಾವಾದಿ: ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ

19/11/2024, 11:23

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕನಕದಾಸರು ಮಾನವರ ಹಿತಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟವರು. ನಾನಾ ಅಪಮಾನಗಳಿಗೆ ಗುರಿಯಾಗಿ ಜೀವನ ಸವಿಸಿದವರು. ಅಂತಹವರು ಕೊಟ್ಟಿಗೊಬ್ಬರು ಅವರಲ್ಲಿ, ಸಂತ ಶ್ರೇಷ್ಠ ಕನಕದಾಸರೊಬ್ಬರು. ದಾಸ ಶ್ರೇಷ್ಠ ಗುರುಗಳು ಹೊಂದಿರುವ ಈ ಸಮಾಜವೆ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ದಾಸರ ಬಗ್ಗೆ ಆಧ್ಯಾಯನ ಮಾಡಿ ಜೀವನ ವಿಧಾನ, ಬದ್ದತೆ, ಲಕ್ಷ್ಯ ಬೆಳೆಸಿಕೊಂಡು ಜ್ಞಾನವಂತರಾಗಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ಪಟ್ಟಣದ ಹೊರವಲಯದ ಕನಕ ಸಮುದಾಯ ಭವನದಲ್ಲಿ ಸೋಮವಾರ ರಾಷ್ಟಿಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಆಡಳಿತ ಹಾಗೂ ಕುರುಬ ಸಂಘದ ವತಿಯಿಂದ ಏರ್ಪಡಿಸಿದ್ದ ಕನಕದಾಸರ ೫೩೭ ನೇ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತ ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಸಮಾಜದಲ್ಲಿನ ಮೇಲು ಕೀಳನ್ನು ತೊರೆದು ಸರ್ವರಲ್ಲಿ ಆದ್ಯಾತ್ಮಿಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತಾವಾದಿ. ಜಯಂತಿ ಕಾರ್ಯಕ್ರಮಕ್ಕೆ ಬಾರದ ಪೊಲೀಸ್, ಅಬಕಾರಿ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಇಷ್ಟ ಇದ್ದರೆ ಇರಿ ಇಲ್ಲವಾದರೆ ತಾಲೂಕಿಂದ ತೊಲಗಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಕುರುಬ ಸಂಘದ ಅಧ್ಯಕ್ಷ ಎಂ.ವೇಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾಸರ ಸಮಾಜದ ಸರ್ವಜನಾಂಗದ ಹಿತ ಚಿಂತಕರಾಗಿದ್ದರು. ಅವರು ಕೀರ್ತನೆ ಮತ್ತು ವಚನ ಸಾಹಿತ್ಯದ ಮೂಲಕ ಭೌಧಿಕವಾಗಿ ಸಮಾಜಕ್ಕೆ ಸಾಹಿತ್ಯ ದೃಷ್ಟಿ ನೀಡಿದ ವiಹಾತ್ಮರು. ಅವರ ಪುಸ್ತಕಗಳು ಪ್ರತಿಯೊಬ್ಬರು ಓದುವ ಮೂಲಕ ಅವರ ಜೀವನ ಚರಿತ್ರೆ ಆದ್ಯಾಯನ ಮಾಡಿ ಆದರ್ಶಗಳು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ತಹಸಿಲ್ದಾರ್ ಜಿ.ಎನ್.ಸುದೀಂಧ್ರ ಮಾತನಾಡಿ ಬೀರಪ್ಪ ನಾಯಕನ ಕುಟುಂಬದಲ್ಲಿ ಜನಿಸಿದ ಕನಕದಾಸರು ಸಮಾಜೋದ್ದಾರ ಕಾರ್ಯಗಳಿಗೆ ಜೀವನ ಮುಡಿಪಿಟ್ಟು ಅಸೃಶ್ಯತೆ ತೊಲಗಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಸ್ಕೃತಿ ಉಳಿಸಿದ ದಾಸರನ್ನು ಮೀರಿಸುವ ಕನಕದಾಸರಾದರು ಎಂದು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಕೆ.ಬಾಗ್ಯಲಕ್ಷ್ಮೀ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷ ಎಂ ವೇಮಣ್ಣ, ಪ್ರಧಾನ ಕಾರ್ಯದರ್ಶಿ ಕೆ. ವಿ. ಮಂಜುನಾಥ್, ಕರ್ನಾಟಕ ಕನಕ ಸಮುದಾಯ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ. ಚೌಡಪ್ಪ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ, ಆರ್. ಟಿ.ಮಂಜುನಾಥ್, ದೇವರಾಜ್, ಸೀನಪ್ಪ, ಶಿವಭಕ್ತಿ, ವೆಂಕಟರವಣಪ್ಪ, ಬಿಇಒ ಮುನಿಲಕ್ತ್ತಯ್ಯ, ಕೃಷಿ ಹಿರಿಯ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ತೋಟಗಾರಿಕೆ ಹಿರಿಯ ಅಧಿಕಾರಿ ಬೈರಾರೆಡ್ಡಿ, ತಾಪಂ ಇಒ ಶಿವಕುಮಾರಿ, ಹಾಜರಿದ್ದರು. ಆರ್.ಸುಬ್ರಮಣಿ ನಿರೂಪಿಸಿದರು, ಮುರಳಿಬಾಬು ವಂದಿಸಿದರು.
*ತರಾಟೆ:* ಕುರುಬ ಸಂಘದ ಅಧ್ಯಕ್ಷರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ, ಮೆರವಣಿಗೆಗೆ ಮುನ್ನ ವೇದಿಕೆ ಕಾರ್ಯಕ್ರಮ ತಹಸಿಲ್ದಾರ್ ನಿಗದಿ ಮಾಡಿದ್ದಕ್ಕೆ ಕುರುಬ ಸಮಾಜದ ಮುಖಂಡರು ಸಮಾರಂಭಕ್ಕೆ ಬಾರದೆ ಮೆರವಣಿಗೆಗೆ ತೆರಳಿಸದರು. ಮುಖಂಡರು ತಹಸಿಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
*ಪ್ರತಿಭಾ ಪುರಸ್ಕಾರ:* ಎಸೆಸೆಲ್ಸಿ ಮತ್ತು ಪಿಯುಸಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮೆತರವಣಿಗೆ: ತಾಲೂಕಿನ ವಿವಿದ ಗ್ರಾಮಗಳಿಂದ ಬಂದಿದ್ದ ೧೨ ಬೆಳ್ಳಿ ಪಲ್ಲಕ್ಕಿಗಳಲ್ಲಿ ಕನಕದಾಸರ ಭಾವಚಿತ್ರ ಸ್ಥಾಪಿಸಿ ಕನಕದಾಸರ ಭವನದಿಂದ ಎಂಜಿ ರಸ್ತೆ ಮೂಲಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಡೊಳ್ಳು ಕುಣಿತ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು