8:18 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವ ಶ್ರೀದೇವಿ ನಾಯಕ್ ಬಗ್ಗೆ ಚಲನಚಿತ್ರ ನಟ, ನಿರ್ದೇಶಕರಿಂದ ಮೆಚ್ಚುಗೆ

27/05/2021, 18:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ರಾಯಚೂರು ಜಿಲ್ಲೆಯಲ್ಲಿ ಸಂಕಷ್ಟ ಸಿಲುಕಿರುವ ಮಂಗಳ ಮುಖಿಯರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಅನ್ನದಾನ, ಒಂದು ದಿನದ ಕೂಲಿ, 

ಜತೆಗೆ ಸ್ಯಾನಿಟೈಸರ್, ಮಾಸ್ಕ್ ನೀಡುವ ಶ್ರೀದೇವಿ ನಾಯಕ್ ಅವರ ಕಾಳಜಿ ಬಗ್ಗೆ ಬೆಂಗಳೂರಿನ ಚಲನಚಿತ್ರ ನಟ, ನಿರ್ದೇಶಕ ಡಿಂಗ್ರೀ ನರೇಶ್ ಮೆಚ್ಚುಗೆ ಪಡಿಸಿದ್ದಾರೆ.

ಸರಕಾರ ಮಾಡಲಾರದಂಥ ಕೆಲಸವನ್ನು ಒಬ್ಬ ಮಹಿಳಾ ಸಮಾಜ ಸೇವಕಿ ಮಾಡುತ್ತಿದ್ದಾರೆ. ಬಡ ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ ಸ್ಪಂದಿಸುವುದು ಒಂದು ಉತ್ತಮವಾದ ಜನರ ಸೇವೆ. ಅವರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಇಂಥ ಸಮಾಜಸೇವೆ ಮಾಡುವ ನಿಮ್ಮನ್ನು ದಿನಾ ಸ್ಮರಿಸುವ ಕಾಲ ಬರುತ್ತದೆ ಎಂದು ಹೇಳಿದ್ದಾರೆ.

 ಶ್ರೀದೇವಿ ನಾಯಕ್ ಅವರು ಬಾಲ್ಯದಿಂದಲೂ ಸಮಾಜಸೇವೆ ಮಾಡುತ್ತಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ವೆಂಕಟೇಶ್ ನಾಯಕ್ ಫೌಂಡೇಶನ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಿದ್ದಾರೆ. ಅವರ ಸೇವೆ ಸಮಾಜಕ್ಕೆ ಅದ್ಭುತವಾದ ಕೊಡುಗೆ ಎಂದು ಚಲನಚಿತ್ರ ನಟ ಡಿಂಗ್ರೀ ನರೇಶ್ ಹೊಗಳಿದ್ದಾರೆ.

ಡಿಂಗ್ರೀ ನರೇಶ್ ಅವರು ರಾಯಚೂರಿನ ಆಶಾಪುರ್ ಗ್ರಾಮದವರು. ಬೆಂಗಳೂರಿನಲ್ಲಿ ಅವರು ಮಾಡಿದ ಚಲನಚಿತ್ರಗಳು ಕೇರಾಫ್ ಪುಟ್ಟಣ್ಣ ಪಾರ್ಟ್ ಟು, ಪುಟ್ಟರಾಜ್ ಲವರ್ ಶಶಿಕಲಾ, ಬೆಲ್ ಬಟನ್, ಪೂರ್ಣ ಸತ್ಯ , ದೇವಗಿರಿ ರಹಸ್ಯ, ಭಜರಂಗಿ 2,

ಅವಳು ಲೈಫ್ ಸತ್ಯ ಸೇರಿದಂತೆ ಹಲವರು ಚಲನಚಿತ್ರಗಳ ನಟಿಸಿ, ನಿರ್ದೇಶಕ ನೀಡಿದ್ದಾರೆ. ಜನಬಲ ಪತ್ರಿಕೆಯ ಸಂಪಾದಕ ಅಂಬಣ್ಣ,   ಚಿಕ್ಕಂದಿನಿಂದಲೇ ಡಿಂಗ್ರೀ ನರೇಶ್ ಅವರು ಹೋರಾಟ ಮಾಡುವುದರ ಮುಖಾಂತರ ಸಮಾಜದ ಒಳ್ಳೆಯ ಹೆಸರು ಮಾಡಿದ್ದಾರೆ. ಅಲ್ಲದೆ ಸತ್ಯ ಧ್ವನಿ ಪತ್ರಿಕೆ ಸಂಪಾದಕ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಆತ್ಮೀಯ ಸ್ನೇಹಿತರು. ನಮ್ಮ ಭಾಗದ ಸಮಾಜ ಸೇವೆ ಮಾಡುವ ಶ್ರೀದೇವಿ ನಾಯಕ್ ಅವರ ಸೇವೆಯನ್ನು ಗುರುತಿಸಿ ಚಲನಚಿತ್ರ ನಟರು ಅವರಿಗೆ ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು