6:05 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಂಗೀತ ವಿದ್ವಾನ್ ನಾಗನವಳಚಿಲು ಸೋಮಶೇಖರ ಮಯ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

03/10/2021, 16:39

ಬೆಂಗಳೂರು(reporterkarnataka.com):.ಸಂಗೀತ ಕ್ಷೇತ್ರದಲ್ಲಿ ವಿಷೇಶ ಸಾಧನೆಗೈದು ನಾಡಿನ ಜನಮನ ದಲ್ಲಿ ಶಾಂತಿಯನ್ನು ಸಾರುವಲ್ಲಿ ಸುಧೀರ್ಘ ಕಾಲದಿಂದಲೂ ಕಾರ್ಯಕ್ರಮ ಗಳನ್ನು ನೀಡುತ್ತಾ ಜನಮನ್ನಣೆ ಗಳಿಸಿದ ಬಂಟ್ವಾಳ ನಾಗನವಳಚಿಲು ಸೋಮಶೇಖರ ಮಯ್ಯರಿಗೆ INDIAN EMPIRE UNIVERSITY ಯು  ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಈ ಬಾರಿ ಗಾಂಧಿ ಜಯಂತಿಯಂದು ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ ಕಾರ್ಯಕ್ರಮವು ಯುನಿವರ್ಸಿಟಿಯ ಮುಖ್ಯಸ್ಥರ ಸಮ್ಮುಖದಲ್ಲಿ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ರಾಗಿರುವ ಭಾರತ ಸರಕಾರದ NITI ನೀತಿ ಆಯೋಗದಡಿ ಇಂಡಿಯನ್ ಎಂಪಾಯರ್ ಯುನಿವರ್ಸಿಟಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಕರ್ನಾಟಕದ 22 ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. 

ಸೋಮಶೇಖರ್ ಮಯ್ಯ ಅವರು ಈಗಾಗಲೇ ಹಿಂದೂಸ್ತಾನಿ ಸಂಗೀತದಲ್ಲಿ ಕರ್ನಾಟಕ ಸರ್ಕಾರ ದಿಂದ ನಡೆಸಿರುವ ಗಾಯನ ಮತ್ತು ತಾಳ ವಾದ್ಯ ವಿಷಯಗಳೆರಡರಲ್ಲಿಯೂ ವಿದ್ವತ್ ಪದವಿ , ಅಖಿಲ ಗಂಧರ್ವ ಮಹಾವಿದ್ಯಾಲಯ ಮುಂಬಯಿ ಸಂಸ್ಥೆ ಯಿಂದ  ಗಾಯನ ಸಂಗೀತದಲ್ಲಿ ವಿಶಾರದ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಂಗೀತ ಪರೀಕ್ಷೆ ಗಳಿಗೆ ಪ್ರಾಯೋಗಿಕ ಪರೀಕ್ಷಕರಾಗಿ 1991 ರಿಂದಲೂ ನಿರಂತರವಾಗಿ  ಸೇವೆ ಸಲ್ಲಿಸುತ್ತಿದ್ದುದಲ್ಲದೇ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಜನಮನ್ನಣೆಗೆ ಪಾತ್ರರಾಗಿದ್ದಾರೆ.  ಜಿಲ್ಲಾ ಹಾಗೂ  ರಾಜ್ಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಗೆಲ್ಲುತ್ತಾ ಬಂದಿರುತ್ತಾರೆ.

ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಇವರಿಗೆ ಕಲಾಭಿಮಾನಿ ನಾಗರಿಕ ಪುರ ಜನರು  ‘ ಗಾನಕೇಸರಿ ‘ ಬಿರುದು ನೀಡಿ ಗೌರವಿಸಿರುತ್ತಾರೆ. ಮೂಡಬಿದ್ರೆ ಯಲ್ಲಿ ಕಂದಾಯ ಅಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಮೂಡಬಿದ್ರೆ ಯಲ್ಲಿ ನೆಲೆಸಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು