ಇತ್ತೀಚಿನ ಸುದ್ದಿ
ಸಂಡೂರಲ್ಲಿ ಬಿಜೆಪಿಗೆ ಅವಕಾಶ ಕೊಟ್ಟರೆ ಗಣಿ ಸಂಪತ್ತು ಲೂಟಿ: ಕೆ. ಸಿ. ಕೊಂಡಯ್ಯ ಎಚ್ಚರಿಕೆ
05/11/2024, 12:54
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಸಂಡೂರಲ್ಲಿ ನಡೆಯು ವಿಧಾನ ಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಕೊಟ್ಟರೇ ದೌರ್ಜನ್ಯ, ದಬ್ಬಾಳಿಕೆ ನಡೆಯುವ ಸಾಧ್ಯತೆ ಇದೆ. ಸಂಡೂರಿನಲ್ಲಿನ ಭಾವೈಕ್ಯತೆಗೆ ಧಕ್ಕೆಯಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಸಿ. ಕೊಂಡಯ್ಯ ಹೇಳಿದರು.
ಬಳ್ಳಾರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2004-2010 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರು, ಗಣಿ ಸಂಪತ್ತನ್ನು ಲೂಟಿ ಮಾಡಿದವರೆಲ್ಲ ಬಿಜೆಪಿ ಅಭ್ಯರ್ಥಿ ಪರ ನಿಂತು ಪ್ರಚಾರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಂಡೂರು ಮತ ಕ್ಷೇತ್ರ ಅಭಿವೃದ್ದಿ ಮಾಡುವುದಾಗಿಲ್ಲ. ಅಲ್ಲಿನ ಅದಿರು ಸಂಪತ್ತು, ಮ್ಯಾಂಗನೀಸ್ ನ್ನು ಲೂಟಿ ಮಾಡುವುದಾಗಿದೆ ಎಂದು ಆರೋಪಿಸಿದರು.
ಮತ್ತೊಮ್ಮೆ ಗಣಿಗಾರಿಕೆ ಮೂಲಕ ಇಲ್ಲಿನ ಸಂಪತ್ತು ಲೂಟಿಗೆ ಸಂಡೂರಿನ ಜನ ಅವಕಾಶ ಮಾಡಿಕೊಡ ಬಾರದು. ಸಂಡೂರಿನವರೇ ಆದ ಇ.ತುಕಾರಂ ಪತ್ನಿ ಅನ್ನಪೂರ್ಣ ಅವರನ್ನೇ ಗೆಲ್ಲಿಸುವ ಮೂಲಕ ಸಂಡೂರಿನ ಅಭಿವೃದ್ದಿಗೆ ಬೆಂಬಲ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಂಪ್ರಸಾದ್, ವೆಂಕಟೇಶ್ ಹೆಗಡೆ ಇತರರು ಇದ್ದರು.