10:54 PM Wednesday11 - December 2024
ಬ್ರೇಕಿಂಗ್ ನ್ಯೂಸ್
ಸಮುದ್ರಪಾಲಾಗಿದ್ದ ನಾಲ್ವರು ವಿದ್ಯಾರ್ಥಿನಿಯ ಶವ ಪತ್ತೆ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಕ್ರಿಸ್ತ ಜನನ ಸುವಾರ್ತೆ: ಕೊಟ್ಟಿಗೆಹಾರದಲ್ಲಿ ಕ್ರೈಸ್ತರಿಂದ ಕ್ರಿಸ್ ಮಸ್ ಗಾಯನ . 30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ; ವಿಶ್ವವನ್ನೇ ಹೃದಯದಲ್ಲಿ… ಅರಂತೋಡು: ಗೋಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು; 7 ದನಗಳು ಪೊಲೀಸರ ವಶಕ್ಕೆ ಬೆಳಗಾವಿ ಸುವರ್ಣ ಸೌಧಕ್ಕೆ ಪಂಚಮಸಾಲಿ ಪ್ರತಿಭಟನಾಕಾರರಿಂದ ಮುತ್ತಿಗೆ ಯತ್ನ: ಪೊಲೀಸ್ ಲಾಠಿಚಾರ್ಜ್ ಗೆ… ಪಂಚಮಸಾಲಿ 2ಎ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಸದನದ ಮುಂದೆ ಮಂಡಿಸುವೆ:… ಮುರುಡೇಶ್ವರ: ಬಾಲಕಿಯರ ರಕ್ಷಿಸಲಾಗದೆ ಅಸಹಾಯಕರಾದ ಲೈಫ್ ಗಾರ್ಡ್; ಸಚಿವ ವೈದ್ಯರೇ ಏನು ಮಾಡುತ್ತಿದ್ದೀರಿ? ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ: ಉರಗ ಸಂತತಿಯಲ್ಲೇ ಮೋಸ್ಟ್ ಡೇಂಜರಸ್… ಮಹಿಳೆಯರ, ಯುವತಿಯರ ಬಗ್ಗೆ ಅಸಭ್ಯ ಪದ, ಅಶ್ಲೀಲ ಚಿತ್ರ: ಕೊನೆಗೂ ಸೆರೆ ಸಿಕ್ಕ… ಬೆಳ್ತಂಗಡಿ: ಗೃಹಿಣಿಯ ಬೆದರಿಸಿ ಕತ್ತಿನಿಂದ ಕರಿಮಣಿ ಸರ ಎಳೆದು ಆರೋಪಿ ಪರಾರಿ

ಇತ್ತೀಚಿನ ಸುದ್ದಿ

ಸಮುದ್ರಪಾಲಾಗಿದ್ದ ನಾಲ್ವರು ವಿದ್ಯಾರ್ಥಿನಿಯ ಶವ ಪತ್ತೆ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

11/12/2024, 20:44

ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ ಸಿಎಂ

ಭಟ್ಕಳ(reporterkarnataka.com):
ಮುರುಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರಪಾಲಾಗಿದ್ದ ಎಲ್ಲ ನಾಲ್ವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ಈ ನಡುವೆ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಪೊಲೀಸರು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಾರೆ. ಮುರುಡೇಶ್ವರ ಸಮುದ್ರ ತೀರದಲ್ಲಿ ಮಂಗಳವಾರ ಸಂಜೆ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎಲ್ಲಾ ಶವಗಳನ್ನು ಹೊರತೆಗೆಯಲಾಗಿದೆ. ಶವಗಳನ್ನು ಗ್ರಾಮಗಳಿಗೆ ಕಳಿಸಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಸೂಚನೆಯನ್ನು ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.
ಮಂಗಳವಾರ ಸಂಜೆ ಓರ್ವ ವಿದ್ಯಾರ್ಥಿನಿ ಶ್ರಾವಂತಿ (15) ಶವವಾಗಿ ಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಶವಗಳನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಬುಧವಾರ ಪತ್ತೆ ಮಾಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕೋಲಾರಕ್ಕೆ ವಿಶೇಷ ಬಸ್ ಮೂಲಕ ವಾಪಸ್ ಕಳಿಸಲಾಗಿದೆ.
*ಪ್ರವಾಸಿಗರಿಗೆ ಬೀಚ್‌ಗೆ ನಿಷೇಧ:* ಈ ಘಟನೆ ಬಳಿಕ ಮುರುಡೇಶ್ವರ ಬೀಚ್‌ನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ಬೀಚ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು