ಇತ್ತೀಚಿನ ಸುದ್ದಿ
ಸಂಸತ್ ಸದಸ್ಯತ್ವ ಅನರ್ಹತೆ: ಸರಕಾರಿ ಬಂಗ್ಲೆ ತೆರವುಗೊಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗೆ ನೋಟಿಸ್
27/03/2023, 22:10
ಹೊಸದಿಲ್ಲಿ(reporterkarnataka.com): ಸಂಸತ್ ಸದಸ್ಯತ್ವ ಅನರ್ಹಗೊಂಡ ಹಿನ್ನೆಲೆಯಲ್ಲಿ ಸರಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲಾಗಿದೆ.
ರಾಹುಲ್ ಗಾಂಧಿ ಅವರು 2005ರಿಂದ ವಾಸ್ತವ್ಯ ಹೊಂದಿರುವ ತುಘಲಕ್ ಲೇನ್ ಬಂಗಲೆಯನ್ನು ತೆರವು ಮಾಡುವಂತೆ ತಿಳಿಸಲಾಗಿದೆ. ಎರಡು ವರ್ಷಗಳ ಜೈಲು ಶಿಕ್ಷೆಯ ನಂತರ ಸಂಸತ್ತಿನಿಂದ ಅನರ್ಹಗೊಳಿಸಿದ ಎರಡು ದಿನಗಳ ನಂತರ ಲೋಕಸಭೆಯ ವಸತಿ ಸಮಿತಿಯಿಂದ ತೆರವು ನೋಟಿಸ್ ಬಂದಿದೆ. ಗುಜರಾತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿಕೆಯ ಮಧ್ಯೆ ನೋಟಿಸ್ ನೀಡಲಾಗಿದೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಬಿಜೆಪಿಯಿಂದ ಇದನ್ನು ನಿರೀಕ್ಷಿಸಲಾಗಿತ್ತು ಎಂದು ಕಾಂಗ್ರೆಸ್ ಸಂಸದ ಮತ್ತು ಅದರ ರಾಷ್ಟ್ರೀಯ ವಕ್ತಾರ ಡಾ.ನಾಸೀರ್ ಹುಸೇನ್ ಹೇಳಿದ್ದಾರೆ.
ಅವರು ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನಗೊಳಿಸಲು ಎಲ್ಲಾ ರೀತಿಯ ತಂತ್ರಗಳನ್ನು ಬಳಸುತ್ತಾರೆ. ಅವರು ನಮ್ಮ ಪ್ರಮುಖ ನಾಯಕರೊಬ್ಬರನ್ನು ವಂಚಕ ವಿಧಾನಗಳಿಂದ ಸಂಸತ್ತಿನಿಂದ ಹೊರಹಾಕಿದ್ದಾರೆ ಮತ್ತು ಇದು ಹೊಸದೇನಲ್ಲ” ಎಂದು ತಿಳಿಸಿದ್ದಾರೆ.














