9:02 PM Tuesday9 - September 2025
ಬ್ರೇಕಿಂಗ್ ನ್ಯೂಸ್
Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ…

ಇತ್ತೀಚಿನ ಸುದ್ದಿ

ಸಂಬಳದ ಹೆಂಡ್ತಿಯಾಗಲು ಪ್ರಶಸ್ತಿ ವಿಜೇತ ನಟಿಗೆ ಉದ್ಯಮಿ ಆಫರ್: ಆತ ಫಿಕ್ಸ್ ಮಾಡಿದ ತಿಂಗಳ ಸ್ಯಾಲರಿ ಎಷ್ಟು ಗೊತ್ತೆ?

15/07/2022, 08:22

ಮುಂಬೈ(reporterkarnataka.com):
ಉದ್ಯಮಿಯೊಬ್ಬರು ತಮ್ಮ ಸಂಬಳದ ಹೆಂಡತಿಯಾಗಲು ಖ್ಯಾತ ನಟಿಯೊಬ್ಬಳಿಗೆ ಆಫರ್ ನೀಡಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಂದರ್ಶನವೊಂದರಲ್ಲಿ ನಟಿ ನೀತು ಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಿಂಗಳಿಗೆ 25 ಲಕ್ಷ ನೀಡುವುದಾಗಿ ಆಫರ್ ಮಾಡಿದ್ದರು ಎಂದು  ನೀತು ಚಂದ್ರ ಹೇಳಿದ್ದಾರೆ.

ನಟಿ ನೀತು ಚಂದ್ರ, ’13 ರಾಷ್ಟ್ರೀಯ ಪ್ರಶಸ್ತಿ ವಿಜೇತರ’ ಜೊತೆ ಕೆಲಸ ಮಾಡಿದರೂ, ಈಗ ನನ್ನತ್ರ ಹಣವೂ ಇಲ್ಲ, ಕೆಲಸವೂ ಇಲ್ಲ ಎಂದು ಹೇಳಿದ್ದಾರೆ. ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರೊಬ್ಬರು ಆಡಿಷನ್ ಮಾಡಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ ಒಂದು ಗಂಟೆಯೊಳಗೆ ತಿರಸ್ಕರಿಸಿದರು ಎಂದು ನೆನಪಿಸಿಕೊಂಡ ನೀತು. ತನ್ನ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ನೀತು ಚಂದ್ರ ಅವರು ಗರಂ ಮಸಾಲಾ (2005) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಗಗನಸಖಿಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದೀಚೆಗೆ ಅವರು ಟ್ರಾಫಿಕ್ ಸಿಗ್ನಲ್, ಒನ್ ಟೂ ತ್ರೀ, ಓಯ್ ಲಕ್ಕಿ ಲಕ್ಕಿ ಓಯೆ, ಅಪಾರ್ಟ್‌ಮೆಂಟ್, 13 ಬಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆಫಾಲಿ ಶಾ, ರಾಹುಲ್ ಬೋಸ್ ಮತ್ತು ಸುಮೀತ್ ರಾಘವನ್ ಜೊತೆಗಿನ ಕುಚ್ ಲವ್ ಜೈಸಾ ನಟಿ ನೀತು ಚಂದ್ರ ಅವರ ಕೊನೆಯ ಹಿಂದಿ ಚಿತ್ರವಾಗಿದೆ.

ಇನ್ನು, ಓಯೆ ಲಕ್ಕಿ ಲಕ್ಕಿ ಓಯೆ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ನೀತೂ ಅಭಿನಯದ ಮಿಥಿಲಾ ಮಖಾನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು