7:34 PM Sunday6 - October 2024
ಬ್ರೇಕಿಂಗ್ ನ್ಯೂಸ್
ರಡ್ಡೇರಹಟ್ಟಿಯಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್: 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ…

ಇತ್ತೀಚಿನ ಸುದ್ದಿ

ಸಮಾಜಘಾತಕರಿಗೆ ಸಿಂಹಸ್ವಪ್ನವಾಗಿದ್ದ ಠಾಣೆ ಇದೀಗ ಕೇಳುವವರಿಲ್ಲ!: ಗೃಹ ಸಚಿವರೇ, ಮುಚ್ಚಿಹೋದ ಬದನವಾಳು ಉಪ ಪೊಲೀಸ್ ಠಾಣೆಗೆ ಕಾಯಕಲ್ಪ ಎಂದು?

08/07/2024, 16:19

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ದಿ.ಶ್ರೀನಿವಾಸ್ ಪ್ರಸಾದ್ ಹಾಗೂ ದಿ.ಧೃವನಾರಾಯಣ್ ರವರ ನಿರಂತರ ಒತ್ತಡಕ್ಕೆ ಮಣಿದ ಸರ್ಕಾರ ಸ್ಥಾಪಿಸಿದ ಬದನವಾಳು ಉಪ ಪೊಲೀಸ್ ಠಾಣೆ ಅವಸಾನದ ಅಂಚಿಗೆ ತಲುಪಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ನಿರಪಯುಕ್ತವಾಗಿ ಪಾಳು ಬಿದ್ದಿದೆ. ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿದ ಸುಸಜ್ಜಿತ ಕಟ್ಟಡ ಬಳಕೆಗೆ ಬಾರದೆ ಮೂಕ ರೋಧನೆ ಅನುಭವಿಸುತ್ತಿದೆ.
ಕಿಡಿಗೇಡಿಗಳು ಸಮಾಜ ಘಾತಕರಿಗೆ ಸಿಂಹಸ್ವಪ್ನವಾಗಿದ್ದ ಠಾಣೆ ಇದೀಗ ಕೇಳುವವರಿಲ್ಲದೆ ಅಸ್ತಿತ್ವಕ್ಕಾಗಿ ಎದುರು ನೋಡುತ್ತಿದೆ.
ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಹಿಂದೆ ನಡೆದ ಮತೀಯ ಸಂಘರ್ಷ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಂಚಲನ ಮೂಡಿಸಿತ್ತು. ಕಿಡಿಗೇಡಿಗಳ ಅಟ್ಟಹಾಸಕ್ಕೆ ಬದನವಾಳು ಗ್ರಾಮ ನಲುಗಿತ್ತು. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಖದೀಮರ ಹೆಡೆಮುರಿ ಕಟ್ಟುವ ಉದ್ದೇಶದಿಂದಲೇ ಇಲ್ಲೊಂದು ಉಪಠಾಣೆ ಸ್ಥಾಪನೆ ಆಗಲೇಬೇಕೆಂದು ಪಟ್ಟುಹಿಡಿದ ಶ್ರೀನಿವಾಸ್ ಪ್ರಸಾದ್ ಹಾಗೂ ಧೃವನಾರಾಯಣ್ ಸರ್ಕಾರದ ಕಣ್ಣು ತೆರೆಸಿ ಯಶಸ್ವಿಯಾಗಿ 1992-93ನೇ ಸಾಲಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಠಾಣೆ ಚಾಲನೆಗೆ ಬಂತು. ಹತ್ತಾರು ವರ್ಷಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಹಿತರಕ್ಷಣೆಗಾಗಿ ಸ್ಪಂದಿಸಿದ ಪೊಲೀಸ್ ಠಾಣೆ ಇದೀಗ ಸಾಕಷ್ಟು ಅನುಕೂಲಗಳಿದ್ದ ಸುಸಜ್ಜಿತ ಕಟ್ಟಡ ಕ್ರಮೇಣ ಅವಸಾನದ ಅಂಚಿಗೆ ತಲುಪಿದೆ. ಲಕ್ಷಾಂತರ ರೂ ವೆಚ್ಚ ಮಾಡಿದ ಕಟ್ಟಡಕ್ಕೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಇಲ್ಲಿ ನಡೆಯಬೇಕಿದ್ದ ಕಾರ್ಯಚಟುವಟಿಕೆಗಳು ದೊಡ್ಡ ಕವಲಂದೆ ಪೊಲೀಸ್ ಠಾಣೆಗೆ ಶಿಫ್ಟ್ ಆಗಿದೆ. ಬದನವಾಳು ಗ್ರಾಮದಲ್ಲಿ ಮುಚ್ಚಿ ಹೋಗಿರುವ ಸುಸಜ್ಜಿತ ಕೊಠಡಿಯಲ್ಲಿ ಎರಡು ಸೆಲ್ ಗಳಿವೆ. ಪೀಠೋಪಕರಣಗಳು ಸಧ್ಯ ಗೆದ್ದಲು ಹಿಡಿದಿದೆ. ಕೇಳುವವರಿಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನಲಾಗಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿದ್ದರೂ ಇದನ್ನ ಕಡೆಗಣಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.


ನಂಜನಗೂಡು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಉಪ ಪೊಲೀಸ್ ಠಾಣೆಗೆ ಜೀವ ತುಂಬಲು
ಗೃಹ ಸಚಿವರೇ ಮನಸ್ಸು ಮಾಡಬೇಕಿದೆ. ಸ್ಥಳೀಯರ ಪಾಲಿಗೆ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ವರದಾನವಾಗಿದ್ದ ಈ ಉಪಠಾಣೆಗೆ ಕಾಯಕಲ್ಪ ನೀಡಿ ಮರುಬಳಕೆ ಮಾಡುವರೇ ಕಾದುನೋಡಬೇಕಿದೆ…?
..l

ಇತ್ತೀಚಿನ ಸುದ್ದಿ

ಜಾಹೀರಾತು