ಇತ್ತೀಚಿನ ಸುದ್ದಿ
ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗಿ ಭಗವಂತನ ಸೇವೆ ಮಾಡುವುದು ನಮ್ಮಗಳ ಕರ್ತವ್ಯ: ಆದಿಚುಂಚನಗಿರಿ ಸ್ವಾಮೀಜಿ
26/02/2023, 14:09
ಮಂಡ್ಯ(reporterkarnataka.com): ಸಮಾಜದ ಮನುಷ್ಯ ಸಮಾಜದ ಕಾಯಕದಲ್ಲಿ ಬದುಕಿನ ಆತ್ಮ ಶುದ್ಧಿಯೊಂದಿಗೆ ಭಗವಂತನ ಮಾಡುವುದು ಸೇವೆ ಮಾಡುವುದು ನಮ್ಮಗಳ ಕರ್ತವ್ಯವೆಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಂದನಾಥ ಮಹಾಸ್ವಾಮೀಜಿಗಳು ಹೇಳಿದರು.
ಅವರು ನಾಗಮಂಗಲ ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಶ್ರೀ ನಾಚಾರಮ್ಮ ಬೃಂದಾವನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಾಲಗ್ರಹಾರದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಶ್ರೀ ನಾಚರಮ್ಮ ಬೃಂದಾವನ ನೂತನ ದೇವಸ್ಥಾನ ಇತಿಹಾಸ ಹೊಂದಿರುವ ಗ್ರಾಮದ ದೇವರು ಹಾಗೂ ಹಿರಿಯರು ತೋರಿಸಿದ ಹಾದಿಯು ನಮ್ಮಗಳಿಗೆ ಇಂದು ಸ್ಪೂರ್ತಿದಾಯಕವಾಗಿ ಸಮಾಜದ ಬೆಳಕಿಗೆ ನೆಲೆಯಾಗಿ ನಿಂತಿರುವುದು ಹಾಗೂ ಗ್ರಾಮದ ಇತಿಹಾಸದ ಪ್ರೇರಣಶಕ್ತಿಗಳು ಸಾಕ್ಷಿ ಬೂತವಾಗಿವೆ.
ನಮಗೆ ಸ್ಪೂರ್ತಿಯ ಅ ಲೆಯಾಗಿ ಯಾಗಿ ಹಿರಿಯರ ಆದರ್ಶದ ಬದುಕಿನಲ್ಲಿ ಆತ್ಮ ಶುದ್ಧಿಯೊಂದಿಗೆ ಬದುಕುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ದೇವರ ಕೈಕಾರ್ಯಗಳೊಂದಿಗೆ ಕಳಸ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆ ಮಾಡಿದರು. ಗ್ರಾಮಸ್ಥರು ಪೂರ್ಣ ಕುಂಭ ಕಳಸದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಪೂಜ್ಯರು ನಾಚರಮ್ಮ ಬೃಂದಾವನ ದೇವಾಲಯ ಹಾಗೂ ಗ್ರಾಮದೇವತೆ ಪಾಲುಕೇರಮ್ಮ ಮತ್ತು ರಾಮದೇವರಿಗೆ ಪೂಜೆ ಸಲ್ಲಿಸಿದರು.
ಸಮಾರಂಭದಲ್ಲಿ ಗ್ರಾಮದ ಅನೇಕ ಮುಖಂಡರು ಭಕ್ತರು ಗ್ರಾಮಸ್ಥರು ಭಾಗವಹಿಸಿದ್ದರು.