ಇತ್ತೀಚಿನ ಸುದ್ದಿ
ಸಮಾಜ ಕಲ್ಯಾಣ ಇಲಾಖೆಯ ಕಿರುಸಾಲಕ್ಕೆ 10 ಸಾವಿರ ಲಂಚ: ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ
05/10/2024, 19:53

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಮಾಜ ಕಲ್ಯಾಣ ಇಲಾಖೆಯ ಕಿರುಸಾಲಕ್ಕೆ 10 ಸಾವಿರ ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಎಸ್ ಡಿಎ
(ದ್ವಿತೀಯ ದರ್ಜೆ ಸಹಾಯಕ)ಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಎಸ್.ಡಿ.ಎ. ಕಾಂತರಾಜ್ ಲೋಕ ಬಲೆಗೆ ಬಿದ್ದವರು.
1 ಲಕ್ಷಕ್ಕೆ 50 ಸಾವಿರ ಸಬ್ಸಿಡಿ, 50 ಸಾವಿರ ಲೋನ್. ಲೋನ್ ಸ್ಯಾಂಕ್ಷನ್ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ.
ಲೋಕ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.