10:12 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳಗೆ ಬೀಳ್ಕೊಡುಗೆ

02/09/2024, 12:29

ಸಂತೋಷ್ ಬೆಳಗಾವಿ

info.reporterkarnataka@gmail.com

ಹಳ್ಳೂರ 01 ಸಮೀರವಾಡಿಯ ಗೋದಾವರಿ ಬೈಯೋ ರಿಪೈನರೀಜ್ ಲಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು.
ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂಧುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟುರು. ಈ ಸಂದರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ ಎಂಬುದು ಸರ್ವೇ ಸಾಮಾನ್ಯ ಸರ್ಕಾರದ ನಿಯಮದ ಪ್ರಕಾರ ವೃತ್ತಿಯಲ್ಲಿರುವ ವ್ಯಕ್ತಿಗೆ 60 ವರ್ಷ ಆಗುತ್ತಿದ್ದಂತೆ ವಯೋ ನಿವೃತ್ತಿ ಹೊಂದಲೇಬೇಕು. ಆದರೆ ವೃತ್ತಿಯಲ್ಲಿದ್ದಾಗ ನಾವೂ ಮಾಡಿದ ಒಳ್ಳೆಯ ಕೆಲಸ ಕಾರ್ಯ ಜನರ ಮದ್ಯೆ ಪ್ರೀತಿ ವಿಶ್ವಾಸ ನಂಬಿಕೆ ಗಳಿಸಿದ ವ್ಯಕ್ತಿ ನಿವೃತ್ತಿ ನಂತರವೂ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ. ವೃತ್ತಿಯಿಂದ ನಿವೃತ್ತಿಯಾದರು ಅವರ ಒಳ್ಳೆಯತನ ಕರ್ತವ್ಯ ನಿಷ್ಠೆ ಸ್ನೇಹ ಪರತೆಯಿಂದ ನಮ್ಮ ಹೃದಯದಲ್ಲಿ ಸದಾ ಕಾಲವಿರುತ್ತಾರೆಂದು ಹೇಳಿದರು. ಇಂಜಿನಿಯರ್ ಜಿ ಎಂ ವಿ ಕೆ ಕಿಲಾರಿ ಹಾಗೂ ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರಿ ಮಾತನಾಡಿ ಕಾರ್ಖಾನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಆಗುತ್ತಿಧದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು