11:26 PM Friday6 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಿಂದ 24 ಗಂಟೆಗಳ ಯಶಸ್ವಿ ಐಟಿ ಹ್ಯಾಕಥಾನ್ – ‘ಟೆಕ್ ಕ್ವೆಸ್ಟ್’

09/04/2024, 21:18

ಬೆಂಗಳೂರು(reporterkarnataka.com):
ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯವು 2024ರ ಏಪ್ರಿಲ್ 5 ಮತ್ತು 6 ರಂದು “ಟೆಕ್ ಕ್ವೆಸ್ಟ್” ಎಂಬ 24 ಗಂಟೆಗಳ ಐಟಿ ಹ್ಯಾಕಥಾನ್ ಅನ್ನು ಯಶಸ್ವಿಯಾಗಿ ನಡೆಸಿತು. ಸಂಸ್ಥೆಯ ಡೀನ್ ಫಾ. ಡೆನ್ಜಿಲ್ ಲೋಬೊ ಎಸ್‌ಜೆ, ಡಾ. ಬಿ.ಜಿ. ಪ್ರಶಾಂತಿ ಮತ್ತು ಪ್ರೇಮ್ ಸಾಗರ್ ಇವರ ನೇತೃತ್ವದಲ್ಲಿ, ಪ್ರಸಿದ್ಧ ಬ್ರ್ಯಾಂಡ್‌ಗಳಾದ ಯುನಿಬಿಕ್, ವಂಡರ್’ಲಾ, ಡ್ಯಾನಿಲ್ ವಿಲೋವ್ ಮತ್ತು ಎಸ್‌ಎಸ್ ಫ್ಯಾಶನ್ಸ್’ಗಳ ಬ್ರಾಂಡ್ ಸರಕುಗಳ ಪ್ರಾಯೋಜಕತ್ವದಿಂದ 24 ಗಂಟೆಗಳ ಸವಾಲಿನ ಈ ಕಾರ್ಯಕ್ರಮವು ದೇಶಾದ್ಯಂತದ ವಿದ್ಯಾರ್ಥಿಗಳ ಮತ್ತು ವೃತ್ತಿಪರರ 24 ತಂಡಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.
ತಂಡಗಳು ಫಿನ್‌ಟೆಕ್ ಮತ್ತು ಹೆಲ್ತ್’ಕೇರ್‌ ಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಿದವು. ವಿಜೇತ ತಂಡಕ್ಕೆ 20,000/- ಮೊತ್ತದ ಬಹುಮಾನವನ್ನು ಘೋಷಿಸಲಾಗಿತ್ತು.
ಫಾ. ಡೆನ್ಜಿಲ್ ಲೋಬೊ ಎಸ್‌ಜೆ, ಅಭ್ಯರ್ಥಿಗಳ ಹೇರಳವಾದ ಪ್ರತಿಭೆ ಮತ್ತು ಸಾಧನೆಗಳಿಗಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉತ್ತಮ ಕೋಡಿಂಗ್ ಕೆಲಸಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬಲವಾದ ಕೋಡಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ ಉತ್ತಮ ಸಾಫ್ಟ್’ವೇರನ್ನು ವಿನ್ಯಾಸಗೊಳಿಸಲು ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿಸಿದರು.
ಭಾಗವಹಿಸಿದ, ಕೊಡುಗೆ ಮತ್ತು ಸಹಾಯಹಸ್ತ ನೀಡಿದ ಎಲ್ಲರಿಗೂ ಡಾ ಬಿ.ಜಿ. ಪ್ರಶಾಂತಿ ಕೃತಜ್ಞತೆಯನ್ನು ಸಲ್ಲಿಸಿದರು. ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಮತ್ತು ಅದರ ಕಂಪ್ಯೂಟರ್ ಸೈನ್ಸ್ ವಿಭಾಗದ ಕುರಿತು ಹೆಚ್ಚಿನ ಮಾಹಿತಿಗಾಗಿ, www.sju.edu.in ಸಂಪರ್ಕಿಸಬಹುದಾಗಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಯೂನಿವರ್ಸಿಟಿಯ ಡೀನ್ ಫಾ. ಡೆನ್ಜಿಲ್ ಲೋಬೊ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು