ಇತ್ತೀಚಿನ ಸುದ್ದಿ
ಸಾಹಿತ್ಯ ಸೇವೆ: ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ
23/02/2023, 22:42
ಕಾಸರಗೋಡು(reporterkarnataka.com): ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಇದರ ಸಹಯೋಗದೊಂದಿಗೆ ಹಂಪಿಯ ಶ್ರೀ ಶಿವರಾಮ ಅವಧೂತರ ಆಶ್ರಮ ಹೇಮಕೂಟದಲ್ಲಿ ಫೆ. 26ರಂದು ನಡೆಯಲಿರುವ ಸಾವಿರ ಕಾವ್ಯ ಗೋಷ್ಠಿಯ ಸಂಭ್ರಮದಲ್ಲಿ ಸಾಹಿತಿ ಹಾಗೂ ಕಾಸರಗೋಡಿನ ನೆಲ್ಲಿಕಟ್ಟೆ ಚೂರಿಪ್ಪಳ್ಳದ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಆಗಿರುವ
ಡಾ ವಾಣಿಶ್ರೀ ಕಾಸರಗೋಡು ಅವರನ್ನು ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಮಧು ನಾಯ್ಕ ಲಂಬಾಣಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯು ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ಅಭಿನಂದಿಸಿದೆ














