ಇತ್ತೀಚಿನ ಸುದ್ದಿ
ಸಹಾಯಕ ಪ್ರಾಧ್ಯಾಪಕಿ ಶೈಸಿಲ್ ಮ್ಯಾಥ್ಯೂಗೆ ಯೆನೆಪೊಯ ವಿವಿಯಿಂದ ಪಿಎಚ್‌ಡಿ ಪ್ರದಾನ
16/09/2023, 16:49
ಮಂಗಳೂರು(reporterkarnataka.com): ಯೆನೆಪೊಯ ವಿವಿಯಿಂದ(ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಶೈಸಿಲ್ ಮ್ಯಾಥ್ಯೂ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿದೆ.
ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕರಾದ ಶೈಸಿಲ್ ಮ್ಯಾಥ್ಯೂ ಇವರು “ಜೀವನಶೈಲಿ ಅಭ್ಯಾಸಗಳು, ಹದಿಹರೆಯದವರ ಬಾಡಿ ಮಾಸ್ ಇಂಡೆಕ್ಸ್ನಿಂದ ಅಧಿಕ ತೂಕ ಮತ್ತು ಸ್ಥೂಲಕಾಯದ ಬಗ್ಗೆ ಪೋಷಕರನ್ನು ಒಳಗೊಂಡಿರುವ ಬಹು-ಘಟಕ ಮಧ್ಯಸ್ಥಿಕೆ ಕಾರ್ಯಕ್ರಮ” ಎಂಬುದರ ಬಗ್ಗೆ ತಮ್ಮ ತನ್ನ ಪಿಎಚ್‌ಡಿ ಪ್ರಬಂಧವನ್ನು ಸೆಪ್ಟೆಂಬರ್ 12, 2023ರಂದು ಮಂಡಿಸಿದ್ದರು. ಇದು ಜೀವನಶೈಲಿಯ ಅಭ್ಯಾಸಗಳ ಸುಧಾರಣೆ ಮತ್ತು ಬೆಳೆಯುತ್ತಿರುವ ಯುವಕರಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಕಡಿತಕ್ಕೆ ಸಂಬಂಧಿಸಿದೆ. ಹರೆಯದ ಸ್ಥೂಲಕಾಯತೆಯನ್ನು ಪೋಷಕರ ಸಹಾಯವಿಲ್ಲದೆ ತಡೆಯಲು ಸಾಧ್ಯವಿಲ್ಲ. ತಮ್ಮ ಅಧ್ಯಯನದಲ್ಲಿ, ಪೋಷಕರು, ಶಾಲೆಯ ದೈಹಿಕ ಶಿಕ್ಷಕರು ಮತ್ತು ಆರೋಗ್ಯ ವೃತ್ತಿಪರರನ್ನೂ ಒಳಗೊಂಡಿಸಿರುತ್ತಾರೆ. ಸಾಂಕ್ರಾಮಿಕವಲ್ಲದ ರೋಗಗಳಿಂದ ಆರೋಗ್ಯದ ಹೊರೆಯನ್ನು ಕಡಿಮೆ ಮಾಡುವುದು ಅವರ ಧ್ಯೇಯವಾಗಿದೆ. ನಿರಂತರ ತರಬೇತಿಯೊಂದಿಗೆ ಉತ್ತಮ ಫಲಿತಾಂಶಕ್ಕಾಗಿ ಪೋಷಕರು ಮತ್ತು ದೈಹಿಕ ಶಿಕ್ಷಣ ತಜ್ಞರನ್ನು ಒಳಗೂಡಿಸುವುದು, ತೂಕ ಮತ್ತು ಸ್ಥೂಲಕಾಯವನ್ನು ತಡೆಯಲು ಒಂದು ಮಾರ್ಗವಾಗಿದೆ. ಏಕೆಂದರೆ ವರ್ತನೆಯಲ್ಲಿನ ಬದಲಾವಣೆಗಳು ಕೇವಲ ಪ್ರೇರಣೆ ಮತ್ತು ಮೇಲ್ವಿಚಾರಣೆಯ ಮೂಲಕ ಮಾತ್ರ ಸಾಧಿಸಬಹುದು, ಪರೋಕ್ಷವಾಗಿ ವಯಸ್ಕ-ಅಂತರದ ರೋಗವನ್ನು ತಡೆಗಟ್ಟಬಹುದು. ಡಾ. ಪ್ರಕಾಶ್ ಆರ್. ಎಂ. ಸಲ್ಡಾನ್ಹಾ, ಉಪ ಪ್ರಾಂಶುಪಾಲರು/ಪ್ರೊಫೆಸರ್, ಪೀಡಿಯಾಟ್ರಿಕ್ಸ್ ವಿಭಾಗ, ಯೆನೆಪೋಯ ವೈದ್ಯಕೀಯ ಕಾಲೇಜು, ಮತ್ತು ಡಾ. ಜೆನಿಫರ್ ಡಿಸೋಜಾ, ಪ್ರೊಫೆಸರ್/ಎಚ್‌ಒಡಿ, ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗ, ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಎಜೆ ವೈದ್ಯಕೀಯ ಕಾಲೇಜು ಇವರ ಮೇಲ್ವಿಚಾರಣೆಯಲ್ಲಿ ಮ್ಯಾಥ್ಯೂ ಅವರು ಈ ಸಂಶೋಧನೆಯನ್ನು ನಡೆಸಿದರು. ಅವರು ಸಿಟಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಯೆನೆಪೋಯ ನರ್ಸಿಂಗ್ ಕಾಲೇಜಿನಲ್ಲಿ ತಲಾ ಐದು ವರ್ಷಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಆರ್‌ಜಿಯುಹೆಚ್‌ಎಸ್ ಅಡಿಯಲ್ಲಿ ಮಂಗಳೂರಿನ ಸಿಟಿ ಕಾಲೇಜ್ ಆಫ್ ನರ್ಸಿಂಗ್‌ನಿಂದ ಸಮುದಾಯ ಆರೋಗ್ಯ ನರ್ಸಿಂಗ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಮ್ಯಾಥ್ಯೂ ಸುಬಿನ್ ಅವರ ಪತ್ನಿ.