ಇತ್ತೀಚಿನ ಸುದ್ದಿ
ಸದ್ದಿಲ್ಲದೆ ಹೆಚ್ಚುತ್ತಿದೆ ಎಚ್ ಐವಿ ಸೋಂಕು: ಉಡುಪಿ ಜಿಲ್ಲೆಯಲ್ಲಿ 6 ತಿಂಗಳಿನಲ್ಲಿ 57 ಮಂದಿ ಸಾವು
18/07/2022, 21:48
ಉಡುಪಿ(reporterkarnataka.com): ಜಿಲ್ಲೆಯಲ್ಲಿ ಕೊರೊನಾದ ಭಯದ ನಡುವೆ ಸದ್ದಿಲ್ಲದೆ ಎಚ್ ಐವಿ ಸೋಂಕು ಏರಿಕೆಯಾಗುತ್ತಿದ್ದು, ಕಳೆದ 6 ತಿಂಗಳಲ್ಲಿ 57 ಜನ ಸಾವಿಗೀಡಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ
ವರ್ಷದ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 142 ಪ್ರಕರಣಗಳು ಕಂಡು ಬಂದಿದ್ದು, 57 ಮಂದಿ ಸಾವನ್ನಪ್ಪಿದ್ದಾರೆ. ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಸಮಾನ ರೀತಿಯಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ.
ಉಡುಪಿ ಜಿಲ್ಲಾಸ್ಪತ್ರೆ ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ನಿಟ್ಟೆಯಲ್ಲಿ ಲಿಂಕ್ ಎಆರ್‌ಟಿ ಕೇಂದ್ರಗಳಲ್ಲಿ ಹೆ ಐವಿ ಟೆಸ್ಟ್ ಮಾಡಲಾಗುತ್ತಿದೆ.