12:47 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ರೋಹಿಣಿ ಸಿಂಧೂರಿ ವರ್ಗಾವಣೆ: ಮುಮ್ಮೇಳದಲ್ಲಿ ಸಚಿವರು, ಸಂಸದರು, ಶಾಸಕರು; ಹಿಮ್ಮೇಳದಲ್ಲಿ ಸರಕಾರಿ ಅಧಿಕಾರಿಗಳು !!

06/06/2021, 18:05

ಶ್ರದ್ಧಾ ಎಸ್. ಪಾಟೀಲ್ ಮೈಸೂರು

info.reporterkarnataka@gmail.com

ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲು ಅವರು ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದಕ್ಕೆ ಓರ್ವ ಸಂಸದ, ಉಸ್ತುವಾರಿ ಸಚಿವರು, ಅರ್ಧ ಡಜನಿಗೂ ಅಧಿಕ ಶಾಸಕರು, 5 ಡಜನಿಗೂ ಹೆಚ್ಚು ಕಾರ್ಪೊರೇಟರ್ ಗಳು ಸರಕಾರದ ಮೇಲೆ ಸದಾ ಒತ್ತಡ ಹೇರಿದ್ದರು. ಇದರ ಜತೆಗೆ ಜಿಲ್ಲೆಯ ಹಲವು ಮಂದಿ ಅಧಿಕಾರಿಗಳು ಕೂಡ ಹಿಮ್ಮೇಳದಲ್ಲಿ ಸಾಥ್ ನೀಡಿದ್ದರು !

ಇದೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಗೆ ಹೊಸ ಆಯುಕ್ತರಾಗಿ ಅವರನ್ನು ನೇಮಿಸಲಾಗಿದೆ. ಆದರೆ ವಿಶೇಷವೆಂದರೆ ರೋಹಿಣಿ ಸಿಂಧೂರಿ ಅವರು ಎಲ್ಲಿ ಹೋದರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಮಂಗಳೂರಿನಲ್ಲಿ ಪ್ರೊಬೇಷನರಿ ಎಸಿಯಾಗಿದ್ದಾಗಲೇ ಕಟೀಲು ದೇವಳ ವಿಷಯದಲ್ಲಿ ಸದ್ದು ಮಾಡಿದ್ದರು. ಮೌನವಾಗಿ ಕೆಲಸ ಮಾಡುವ ಛಾತಿಯೇ ಅವರಲಿಲ್ಲ. ಒಂದು ರೀತಿಯಲ್ಲಿ ವಿವಾದವನ್ನು ಮೈಗೆ ಎಳೆದುಕೊಳ್ಳುತ್ತಿದ್ದ ಅಧಿಕಾರಿ ಅವರು.

ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗಲೂ ಅಲ್ಲಿನ ಸ್ಥಳೀಯ ಮಾಂಡಲಿಕರು ಜತೆ ಕಾದಾಡಿದ್ದರು. ಎಚ್.ಡಿ. ರೇವಣ್ಣ ಮತ್ತು ಸಿಂಧೂರಿ ನಡುವೆ ಸದಾ ಜಟಾಪಟಿ ನಡೆಯುತ್ತಲೇ ಇತ್ತು. ಶಾಸಕ ಎ. ಮಂಜು ಅವರು ರೋಹಿಣಿ ಸಿಂಧೂರಿ ಕಾಲ ಮೇಲೆ ಕಾಲು ಹಾಕಿ ಕೂರುತ್ತಾರೆ ಎಂದು ಆಗಾಗ ದೂರುತ್ತಿದ್ದರು.

ಓರ್ವ ಮಹಿಳಾ ಐಎಎಸ್ ಅಧಿಕಾರಿ ಕಾಲ ಮೇಲೆ ಕಾಲು ಹಾಕಿ ಕೂರುವುದನ್ನು ಒಪ್ಪದ ಮನಸ್ಥಿತಿ, ಒಬ್ಬ ಸಾಮಾನ್ಯ ಮಹಿಳೆ ಕಾಲ ಮೇಲೆ ಕಾಲಿಕ್ಕಿದರೆ ಸಹಿಸಿತೇ ಎಂಬ ಪ್ರಶ್ನೆ ಉದ್ಬವಿಸುತ್ತದೆ

ರಾಜಕಾರಣಿಗಳದ್ದು ಸದಾ ದೂರು. ಮಾಸ್ಕ್ ತೆಗೆದು ಮಾತನಾಡಿ ಎಂದು ಶಾಸಕ ಎನ್. ಮಹೇಶ್ ಅಜ್ಞಾಪಿಸುತ್ತಾರೆ. ಸಂಸದ ಪ್ರತಾಪ ಸಿಂಹ ಅವರು ಸ್ವಿಮ್ಮಿಂಗ್ ಫೂಲ್ ತಕರಾರು ಎತ್ತುತಾರೆ. ಇನ್ನು ಮೈಸೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ದೂರು ಪ್ರತಿದಿನ ಬೆಳಗಾದರೆ ಇರುತ್ತಿತ್ತು. ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ವರ್ಗಾಣೆ ಹಿಂದೆ ಬಹಳಷ್ಟು ಪುರುಷ ಶಕ್ತಿಗಳು ಹೋರಾಟ ನಡೆಸಿದ್ದಾರೆ. ಏನಿದ್ದರೂ ಆಕೆ ಗಟ್ಟಿಗಿತ್ತಿ ಎಂದು ರೋಹಿಣಿ ಸಿಂಧೂರಿ ವರ್ಗಾವಣೆಗೆ ವಿರೋಧಿಸಿದ ಮೈಸೂರಿನ ಜನತೆ ಹೇಳಿಕೊಳ್ಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು