10:36 PM Thursday3 - October 2024
ಬ್ರೇಕಿಂಗ್ ನ್ಯೂಸ್
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ ಶ್ರೀನಿವಾಸಪುರ ವಿದ್ಯಾರ್ಥಿಗಳ ವಸತಿ ನಿಲಯ ದುರವಸ್ಥೆ: ಉಪ ಲೋಕಾಯುಕ್ತರು ಗರಂ; ಸರಕಾರಿ ಆಸ್ಪತ್ರೆಗೂ… ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ; 23 ಮಂದಿ ವಿದ್ಯಾರ್ಥಿಗಳಿಗೆ… ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜುಲೈ ತಿಂಗಳ ವಿಜೇತರಾಗಿ ಮಾನ್ವಿ ಎಸ್. ಪೂಜಾರಿ ಹಾಗೂ ಮನಸ್ವಿ

07/08/2024, 18:28

 

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ
ಮಾನ್ವಿ ಎಸ್. ಪೂಜಾರಿ ಹಾಗೂ ಮನಸ್ವಿ ಅವರು ಆಯ್ಕೆಯಾಗಿದ್ದಾರೆ.
ಮಂಗಳೂರಿನ ಆಕಾಶಭವನ ನಿವಾಸಿಗಳಾದ ಭಾರತಿ ಮತ್ತು ಶ್ರೀನಿವಾಸ್ ಪೂಜಾರಿ ದಂಪತಿಯ ಪುತ್ರಿಯಾದ ಮಾನ್ವಿ ಎಸ್. ಪೂಜಾರಿ ಕೆನರಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ತನ್ನ 6ನೇ ವಯಸ್ಸಿನಲ್ಲಿಯೇ ಯೋಗದಲ್ಲಿ ಆಸಕ್ತಿ ಹೊಂದಿ ಕುಶಾಲಪ್ಪ ಗೌಡ ಅವರ “ಆವಿಷ್ಕಾರ್ ಯೋಗ ಕೇಂದ್ರ”ದಲ್ಲಿ ಕಿಶನ್ ಅವರಿಂದ ತರಬೇತಿ ಪಡೆದು, ಕಠಿಣ ಯೋಗಾಸನ ಅಭ್ಯಾಸವನ್ನು ರಂಗಪ್ಪ ಅವರು ನಡೆಸುತ್ತಿರುವ ‘ತಪಸ್ವಿ ಯೋಗ ಕೇಂದ್ರ’ದಲ್ಲಿ ಪ್ರತ್ಯಕ್ಷ್ ಅವರ ಬಳಿ ಕಲಿಯುತ್ತಿದ್ದಾಳೆ. ತನ್ನ 6ನೇ ವಯಸ್ಸಿನಲ್ಲಿ ವಿ4 ಚಾನೆಲ್‌ನಲ್ಲಿ ‘ಮಕ್ಕಳಿಗಾಗಿ ಯೋಗ’ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. 2022ರಲ್ಲಿ ಮಂಗಳೂರಿನ
ಅಲೋಶಿಯಸ್ ಕಾಲೇಜು ಹಾಗೂ ಉಳ್ಳಾಲದ
ಪಾಂಡಿರಾಜ ಬಲ್ಲಾಳ್ ಮೆಡಿಕಲ್ ಕಾಲೇಜಿನಲ್ಲಿ ಕುಶಾಲಪ್ಪ ಗೌಡರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಈ ಮೂಲಕ ಯೋಗದ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ಯೋಗಾಸನ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾಳೆ. ಅಲ್ಲಿಯೂ ಎಲ್ಲರಿಂದಲೂ ಪ್ರಸಂಶೆಗೆ ಪಾತ್ರರಾಗಿ ಧನರೂಪದ ಬಹುಮಾನ ಹಾಗೂ ಮೊಮೆಂಟೋ ಪಡೆದಿದ್ದಾಳೆ. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಳೆ. 2022ರಲ್ಲಿ ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರ ಹಾಗೂ ಪಿ.ಎನ್.ಆರ್. ಯೋಗ ಕೇಂದ್ರದವರು ನಡೆಸಿದ ನ್ಯಾಶನಲ್ ಲೆವೆಲ್ ಯೋಗ ಚಾಂಪಿಯನ್‌ಶಿಪ್-2022ರಲ್ಲಿ ದ್ವಿತೀಯ ಬಹುಮಾನ ಹಾಗೂ 2023ರಲ್ಲಿ ಬೆಂಗಳೂರಿನ
ಬಿ.ಕೆ.ಎಸ್. ಅಯ್ಯಂಗಾರ್ ಸ್ಮರಣಾರ್ಥ ನ್ಯಾಶನಲ್ ಲೆವೆಲ್ ಓಪನ್ ಯೋಗ ಚಾಂಪಿಯನ್ ಶಿಪ್‌ನಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ತಪಸ್ವಿ ಯೋಗ ಕೇಂದ್ರದವರು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಯೋಗಾಸನ ಮಾತ್ರವಲ್ಲದೇ ಯಕ್ಷಗಾನ ರಂಗದಲ್ಲೂ ಮಿಂಚುತ್ತಿದ್ದು, ಪ್ರಸ್ತುತ ಕಲಾ ಸಾರಥಿ ಕುಮಾರ್ ಮಾಲೆಮಾರ್ ಸಾರಥ್ಯದ ‘ಮಹಿಮೆದ ಮಂತ್ರದೇವತೆ ಖ್ಯಾತಿಯ ಗುರುಗಳಾದ ವಿಜಿತ್ ಶೆಟ್ಟಿ, ಆಕಾಶಭವನ ಅವರಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದು, “ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್” ಇದರ ವಿದ್ಯಾರ್ಥಿನಿಯಾಗಿರುತ್ತಾರೆ. ಗೆಜ್ಜೆಪೂಜೆಯೊಂದಿಗೆ ರಂಗಪ್ರವೇಶ ಮಾಡಿ “ಕದಂಬ ಕೌಶಿಕೆ”, “ಶಿವಭಕ್ತ ಸಿರಿಯಾಲ”, “ಶ್ರೀದೇವಿ ಲಲಿತಾಮೃತ”, ‘ಮಲೆತ ಬೊಲ್ಪು’ “ಶ್ರೀ ರಾಮ ದರ್ಶನಂ” ಮುಂತಾದ ಯಕ್ಷಗಾನಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾಳೆ. ಪ್ರಸ್ತುತ ವಿದುಷಿ ಗೌರಿ ಶೈಲೇಶ್ ಅವರ ಬಳಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿ4 ಟಿವಿ ಚಾನೆಲ್, ಅಭಿಮತ ಟಿವಿ ಚಾನೆಲ್‌ನಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ವತಿಯಿಂದ ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ಸಾಳೆ. ಅಷ್ಟೇ ಅಲ್ಲದೆ ಶಾಲಾ ಚಟುವಟಿಕೆ, ಆಟ-ಪಾಠ, ನೃತ್ಯದ ಜೊತೆಗೆ ಛದ್ಮವೇಷ, ಕೃಷ್ಣವೇಷ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು ಹಾಗೂ ಹಲವಾರು ಕಡೆಗಳಲ್ಲಿ ನೆನಪಿನ ಕಾಣಿಕೆಗಳನ್ನು ಹಾಗೂ ಧನರೂಪದ ಬಹುಮಾನವನ್ನು ಪಡೆದಿದ್ದಾಳೆ. ಕಾರ್ಕಳದಲ್ಲಿ ನಡೆಸಿದ ಶಾರದಾ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ನಗದು ಹಾಗೂ ಚಿನ್ನದ ಪದಕ ಪಡೆದಿರುತ್ತಾಳೆ. ಸಂಗೀತ ಕಲಿಯುವುದು, ಡ್ಯಾನ್ಸ್ ಮಾಡುವುದು, ಡ್ರಾಯಿಂಗ್, ಅಭಿನಯ ಮಾಡುವುದು ಇವರ ಹವ್ಯಾಸಗಳು. ಎಲ್ಲರೊಂದಿಗೂ ಬೆರೆತು, ಎಲ್ಲರನ್ನೂ ನಗಿಸುತ್ತಾ, ಹೋದಲ್ಲೆಲ್ಲಾ ತನ್ನ ತುಂಟಾಟದಿಂದ ಗಮನ ಸೆಳೆಯುವ ಈ ಪುಟ್ಟ ಪೋರಿ ಎಲ್ಲರ ಅಚ್ಚುಮೆಚ್ಚಿನ ಉತ್ಸಾಹದ ಚಿಲುಮೆಯಾಗಿರುತ್ತಾಳೆ.
ಪ್ರಸ್ತುತ ಪದ್ಮಶ್ರೀ ಭಟ್ ಅವರ ಸಾರಥ್ಯದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಹಲವು ಬಾರಿ ವಿನ್ನರ್ ಆಗಿ ಆಯ್ಕೆಯಾಗಿದ್ದು, ತಂಡದ ಸಕ್ರಿಯ ಬಾಲ ಕಲಾವಿದೆಯಾಗಿದ್ದಾಳೆ.
ಮನಸ್ವಿ 5 ವರ್ಷದ ಪುಟ್ಟ ಬಾಲೆ. ಹಲವು ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನ ನೀಡಿದ್ದಾಳೆ. ಅತ್ಯಂತ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಈಕೆ ತನ್ನ 4ನೇ ವಯಸ್ಸಿನಿಂದ ನೃತ್ಯ ಅಭ್ಯಾಸದಲ್ಲಿ ತೊಡಗಿ ಹಲವು ಪ್ರದರ್ಶನ ನೀಡಿ ಪ್ರತಿಭಾ ಪುರಸ್ಕಾರಗಳನ್ನು ಪಡೆದಿದ್ಸಾಳೆ.
ಮೂಲತಃ ಕರ್ನಾಟಕದವಳಾದ ಈಕೆ ಸದ್ಯ ಹೈದರಾಬಾದ್ ನಲ್ಲಿ ವಾಸ ಮಾಡುತ್ತಿದ್ದಾಳೆ. ಈಕೆ ಅಲ್ಲಿನ ಭಾಷೆ, ಸಂಸ್ಕೃತಿಗೆ ಹೊಂದಿಕೊಂಡು ಅಲ್ಲಿನ ಜನಪದ ಸಂಗೀತಕ್ಕೂ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ. ಅಲ್ಲದೆ ಒಂದು ತೆಲುಗು ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡಿದ್ದಾಳೆ. ಇದಲ್ಲದೆ ಅಮೆಜಾನ್ ಕಂಪನಿಯ ಒಂದು ಜಾಹೀರಾತಿನಲ್ಲಿ ಮಿಂಚಿದ್ದಾಳೆ. ಶಾಲೆಯಲ್ಲಿಯೂ ಓದಿನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಈಕೆ ಸಂಗೀತ ಮತ್ತು ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿದ್ದಾಳೆ. ಮನೆಯಲ್ಲಿ ತಂದೆ ತಾಯಿಯ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿರುವ ಈಕೆ ವಾಯ್ಸ್ ಆಪ್ ಆರಾಧನ ತಂಡದ ಸಕ್ರೀಯ ಸದಸ್ಯೆ.

ಇತ್ತೀಚಿನ ಸುದ್ದಿ

ಜಾಹೀರಾತು