3:14 AM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಶೌರ್ಯ ರಾವ್ ಮತ್ತು ಆಶ್ರಿತ ಪೂಜಾರಿ ಆಯ್ಕೆ

28/07/2024, 21:22

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಶೌರ್ಯ ರಾವ್ ಹಾಗೂ ಆಶ್ರಿತ ಪೂಜಾರಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಬಾಲ ಪ್ರತಿಭೆ ಶೌರ್ಯ ರಾವ್, ಶ್ರೀನಿಧಿ ರಾವ್ ಹಾಗೂ ಅಶ್ವಿನಿ ರಾವ್‌ರವರ ಏಕೈಕ ಪುತ್ರ. ಈತನಿಗೆ 7 ವರ್ಷ ವಯಸ್ಸಾಗಿದ್ದು ಮಂಗಳೂರಿನ ಎಸ್.ಡಿ.ಎಂ. ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾನೆ. ನೃತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಹಲವಾರು ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಿದ್ದಾನೆ. ನೃತ್ಯ ಮಾತ್ರವಲ್ಲದೆ ನಟನೆ, ಈಜು, ಯೋಗ, ತಾಲೀಮು, ಕೆಲಸ್ಟನಿಕ್ಸ್, ಫ್ರೀ ಸ್ಟೈಲ್ ಜಿಮ್ನಾಸ್ಟಿಕ್, ಹಾಡುಗಾರಿಕೆ, ಚಿತ್ರಕಲೆ ಹೀಗೆ ಹಲವಾರು ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಮ್ಯಾಜಿಕ್ ಹಾಗೂ ಕರಾಟೆಯನ್ನೂ ಕಲಿಯುತ್ತಿದ್ದಾನೆ. ಅಷ್ಟೇ ಅಲ್ಲದೆ ಹುಲಿ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಹಲವಾರು ವೇದಿಕೆಯಲ್ಲಿ ಪ್ರದರ್ಶಿಸಿದ್ದಾನೆ. ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾಗುವ “ಡಾನ್ಸ್ ಕುಡ್ಲ ಡಾನ್ಸ್” ರಿಯಾಲಿಟಿ ಶೋನಲ್ಲಿ ಸೆಮಿಫೈನಲ್‌ವೆರೆಗೆ ತಲುಪಿ “ಕರ್ನಾಟಕ ದಿ ಬೆಸ್ಟ್ ಡಾನ್ಸರ್” ಶೋಗೆ ನೇರವಾಗಿ ಆಯ್ಕೆಯಾಗಿಯಾಗಿದ್ದಾನೆ. ಈಗಾಗಲೇ ಹಲವು ರಿಯಾಲಿಟಿ ಶೋ, ಎರಡು ಚಲನಚಿತ್ರಗಳಲ್ಲಿ ಹಾಗೂ ಮೂರು ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದಾನೆ. ಮಂಗಳೂರಿನಲ್ಲಿ ನಡೆದ “ಲಿಟ್ಲ್ ಕಿಂಗ್ ಆಫ್ ಮಂಗಳೂರು-2023” ಫ್ಯಾಶನ್ ಶೋನಲ್ಲಿ ಭಾಗವಹಿಸಿ ಮೊದಲನೆಯ “ಲಿಟ್ಲ್ ಕಿಂಗ್ ಆಫ್ ಮಂಗಳೂರು-2023” ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ. “ಕಿಡ್ಸ್ ಫ್ಯೂಷನ್-2024ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಕನ್ನಡದ ಶ್ರೇಷ್ಠ ನಟ ಅನಂತ್ ನಾಗ್ ಅವರ 75ನೇ ವರ್ಷದ ಹುಟ್ಟುಹಬ್ಬದ ಸಮಾರಂಭದ ಸಂದರ್ಭದಲ್ಲಿ ಮಾಸ್ಟರ್ ಶೌರ್ಯರವರ ಪ್ರತಿಭೆಯನ್ನು ಪ್ರಶಂಸಿ ಆಶೀರ್ವದಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ವೇದಿಕೆಗಳಲ್ಲಿ ಭಾಗವಹಿಸಿ 60ಕ್ಕೂ ಹೆಚ್ಚು ಪ್ರಶಸ್ತಿಗೆ ಭಾಜನನಾಗಿದ್ದಾನೆ. ಕೇವಲ ಸಾಂಸ್ಕೃತಿಕ ಚಟುವಟಿಕೆ ಅಷ್ಷೆ ಅಲ್ಲದೆ ಕಲಿಕೆಯಲ್ಲೂ ಮುಂದೆ ಇದ್ದಾನೆ. ತನ್ನ ವಯಸ್ಸಿಗೂ ಮೀರಿದ ಶೌರ್ಯನ ಈ ಸಾಧನೆ ಪ್ರಶಂಸನೀಯ. ತಂದೆ ತಾಯಿಯ ಪ್ರೋತ್ಸಾಹ ಹಾಗೂ ಆತನ ಪರಿಶ್ರಮ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ.


ಹರೀಶ್ ಸುವರ್ಣ ಶೃತಿ ಎಚ್. ದಂಪತಿಯ ಎರಡನೇ ಮಗಳಾದ
ಆಶ್ರಿತ ಪೂಜಾರಿ ಆಳ್ವಾಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ ಹಲವು ವರ್ಷಗಳಿಂದ
ಮೂಡಬಿದ್ರೆಯ ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ಗುರುಗಳಾದ ನಿತಿನ್ ಅವರಲ್ಲಿ ನೃತ್ಯ ಕಲಿಯುತ್ತಿದ್ದಾಳೆ. ಭರತ್ಯನಾಟ್ಯ ಶಿಕ್ಷಕಿಯಾದ ಶ್ರೀಲತಾ ನಾಗರಾಜ್ ಅವರ ಬಳಿ ಭರತ್ಯನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ನೃತ್ಯ , ಛದ್ಮವೇಷ, ಅಭಿನಯ ಗೀತೆ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾಳೆ. ದಿವಾಕರ್ ಮೂಡಬಿದ್ರೆ ಅವರ ಬಳಿ ಈಜುವಿಕೆಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಮುಖಾಂತರ ಅಭಿಮತ ವಾಹಿನಿಯಲ್ಲಿ ಭಾಗವಹಿಸಿದ್ದಾಳೆ. ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು