ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ನವೆಂಬರ್ ತಿಂಗಳ ಟಾಪರ್ ಆಗಿ ರಿಷಿಕಾ ಮತ್ತು ನಿಶಿತಾ ಆಯ್ಕೆ
27/12/2024, 12:49
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ರಿಷಿಕಾ ಕೊಡಿಪಾಡಿ ಹಾಗೂ ನಿಶಿತಾ ವಿ.
ಆಯ್ಕೆಯಾಗಿದ್ದಾರೆ.
ಪುತ್ತೂರಿನ ಕೊಡಿಪಾಡಿ ನಿವಾಸಿಯಾದ ರಮೇಶ್ ಮತ್ತು ರೇಷ್ಮಾ ದಂಪತಿ ಪುತ್ರಿಯಾದ ರಿಷಿಕಾ ಕೊಡಿಪಾಡಿ 7ನೇ ತರಗತಿಯ ವಿದ್ಯಾರ್ಥಿನಿ.
ನೃತ್ಯ ಹಾಗೂ ಹಾಡಿನಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭೆ. ಈಕೆ ಸಣ್ಣ ವಯಸ್ಸಿನಿಂದಲೇ ಅರ್ಕ ಶ್ರೀ ಮಹಾದೇವಿ ಭಜನಾ ತಂಡದಲ್ಲಿ ಗುರುತಿಸಿಕೊಂಡಿದ್ದಾಳೆ. ಪ್ರಸ್ತುತ ಸುಗಮ ಸಂಗೀತ ವನ್ನು ಡಾ. ಕಿರಣ್ ಕುಮಾರ್ ನೇತೃತ್ವದ ಪುತ್ತೂರಿನ ಗಾನಸಿರಿ ಕಲಾಕೇಂದ್ರದಲ್ಲಿ ಕಲಿಯುತ್ತಿದ್ದಾಳೆ. ನೃತ್ಯ ಅಭ್ಯಾಸವನ್ನು ವಿಟ್ಲದ ಶಿವಂ ಡಾನ್ಸ್ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಳೆ.
ಪ್ರಸ್ತುತ ದರ್ಬೆಯ ಸ್ಟೆಪ್ ಮೇಕರ್ಸ್ ಡಾನ್ಸ್ ಕ್ಲಾಸ್ ನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದಾಳೆ.
ಈಕೆ ವಾಯ್ಸ್ ಆಫ್ ಆರಾಧನ ತಂಡದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾಳೆ. ಅತೀ ಸಣ್ಣ ವಯಸ್ಸಿನಲ್ಲಿ ಹಲವು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಪ್ರಶಸ್ತಿ ಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ನಿಶಿತಾ ವಿ. ಶಿಕ್ಷಕರಾದ ವೆಂಕಟಾಚಲ ಮತ್ತು ವಿನುತಾ ರವರ ಪುತ್ರಿ. ನಿಶಿತಾ ಬೆಂಗಳೂರಿನ ವಿದ್ಯಾಮಂದಿರ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ನಿಶಿತಾ ಚಿಕ್ಕ ವಯಸ್ಸಿನಲ್ಲೇ ಕನ್ನಡವನ್ನು ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡುತ್ತಿದ್ದಳು. 2 ವರ್ಷವಿದ್ದಾಗ, ಸಮಾರಂಭಗಳಲ್ಲಿ, ಡ್ರಾಮಾ ಜೂನಿಯರ್ಸ್ ಸೀಸನ್ 1ರಲ್ಲಿ ಬಬ್ರುವಾಹನ ಡೈಲಾಗ್ ಹೇಳಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಳು.
ಈಕೆಗೆ ರಂಗೋಲಿ ಹಾಕುವುದರಲ್ಲಿ, ಚಿತ್ರ ಬಿಡಿಸುವುದರಲ್ಲಿ, ಮೆಹಂದಿ ಹಾಕುವಲ್ಲಿ, ನೃತ್ಯ ಮಾಡುವುದರಲ್ಲಿ ಹಾಗೂ ಹಾಡು ಹೇಳುವುದರಲ್ಲಿ ಪ್ರವೀಣೆ. ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಓದುವುದರಲ್ಲೂ ಸಹ ಮುಂದಿದ್ದಾಳೆ. ಪ್ರಿ ನರ್ಸರಿಯಿಂದ 7ನೇ ತರಗತಿಯವರೆಗೂ ಮೊದಲನೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾಳೆ.
ಜೀ ಕನ್ನಡದ ಡ್ರಾಮಾ ಜೂನಿಯರ್ಸ್, ಜೀ ಸರಿಗಮಪ,ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಡಿಶನಲ್ಲಿ, ಅಕ್ಟೋಬರ್ ತಿಂಗಳಿನಲ್ಲಿ ಸಿರಿ ಕನ್ನಡ ಟಿವಿ ಚಾನಲ್ ಹಮ್ಮಿಕೊಂಡಿದ್ದ ಚಿತ್ರ ಕಲಾಸ್ಪರ್ಧೆಯಲ್ಲೂ ಭಾಗವಹಿಸಿದ್ದಾಳೆ. ಈ ರೀತಿಯ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು ಇವಳಿಗಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಕಲಾಮಂದಿರದಲ್ಲಿ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದಾಳೆ.