ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜನವರಿ ತಿಂಗಳ ಟಾಪರ್ ಆಗಿ ಪಂಚಮಿ ಅಜೆಕಾರು ಹಾಗೂ ರಿಷಿತಾ ರೈ ಆಯ್ಕೆ
18/02/2025, 00:23

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ಪಂಚಮಿ ಅಜೆಕಾರು ಹಾಗೂ ರಿಷಿತಾ ರೈ ಆಯ್ಕೆಯಾಗಿದ್ದಾರೆ.
ಪಂಚಮಿ ಅಜೆಕಾರು, ಪ್ರಕಾಶ್ ಹಾಗೂ ಧೃತಿ ದಂಪತಿಯ ಪುತ್ರಿ, ಈಕೆ ಪ್ರಸ್ತುತ ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್ ಸ್ಕೂಲ್ ನ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲ್ಯದಿಂದಲೇ ನೃತ್ಯ ಹಾಗೂ ಸಂಗೀತದಲ್ಲಿ ವಿಶೇಷ ಆಸಕ್ತಿ, ಇಷ್ಟೇ ಅಲ್ಲದೇ ಯಕ್ಷಗಾನ, ಅಭಿನಯ ಗೀತೆಯಲ್ಲೂ ನಟಿಸುವ ಮೂಲಕ ಸೈ ಎಣಿಸಿ ಕೊಂಡಿದ್ದಾಳೆ. ಡಿಸೆಂಬರ್ 2024ರಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮಕ್ಕಳ ಸಮ್ಮೇಳದಲ್ಲಿ ಹಾಗೂ ಡಿಸೆಂಬರ್ 2025ರಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಾಳೆ, ಅಭಿಮತ ವಾಹಿನಿಯ ಕಾರ್ಯಕ್ರಮ ಹೀಗೆ ಅನೇಕ ವೇದಿಕೆಯಲ್ಲಿ ತನ್ನ ಪ್ರತಿಭೆ ಯನ್ನು ಪ್ರದರ್ಶಿಸಿ ಪ್ರಶಂಸೆ ಯನ್ನು ಪಡೆದಿರುತ್ತಾಳೆ.
ಪದ್ಮಶ್ರೀ ಭಟ್ ಅವರ ನೇತ್ರತ್ವ ದ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸದಸ್ಯೆ ಆಗಿರುವ ಪಂಚಮಿಗೆ ಅನೇಕ ವೇದಿಕೆ ಯನ್ನು ಕಲ್ಪಿಸಿಕೊಟ್ಟದು ಈ ಸಂಸ್ಥೆ. ಭರತನಾಟ್ಯ ಅಭ್ಯಾಸವನ್ನು ತನ್ನ ಶಾಲೆ ಯಲ್ಲಿ ಕಲಿಯುತ್ತಿದ್ದೂ, ಸಂಗೀತವನ್ನು ಸ್ವ ಪ್ರಯತ್ನ ಪಟ್ಟು ಕಲಿಯುತ್ತಿದ್ದಾಳೆ ಹಾಗೂ ಅದು ಮನೆಯಲ್ಲಿ ಭಜನೆ ಮೂಲಕವು ಸಾಗುತಿದೆ. ಆಷ್ಟೇ ಅಲ್ಲದೇ ಶಾಲೆಯಲ್ಲಿ ಓದಿನಲ್ಲೂ ಜಾಣೆ. ಈಗಾಗಲೇ 40ಕ್ಕೂ ಹೆಚ್ಚಿನ ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಪ್ರಶಸ್ತಿ ಸ್ಮರಣಿಕೆ ಗಳನ್ನು ಪಡೆದಿರುತ್ತಾಳೆ.
ಮೂಡಬಿದಿರೆ ಕೋಟೆಬಾಗಿಲಿನ ಪ್ರತಿಭಾ ಎಸ್ ರೈ ಮತ್ತು ಶಿವರಾಜ್ ರೈ ಅವರ ಮಗಳಾದ ರಿಷಿತಾ ರೈ ನೃತ್ಯ, ಕ್ರೀಡೆ, ಕುಣಿತ ಭಜನೆಯಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ಈಕೆ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಅಬಕಾಸಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ಈಕೆ ಕುಣಿತ ಭಜನೆ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾಳೆ. ಗೈಡ್ಸಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ಯಾಂಪರಿನಲ್ಲಿ ಪಾಲ್ಗೊಂಡಿದ್ದಾಳೆ. ಅದೇ ರೀತಿಯಲ್ಲಿ ವಾಯ್ಸ್ ಆ ಆರಾಧನದ ವತಿಯಿಂದ ನಡೆಯುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಅಭಿಮತ ವಾಹಿನಿಯ ಪ್ರತಿಭಾ ಲೋಕದಲ್ಲಿ ಪಾಲ್ಗೊಂಡಿದ್ದಾಳೆ.