ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಫೆಬ್ರವರಿ ತಿಂಗಳ ಟಾಪರ್ ಆಗಿ ಮೌರ್ಯ ನಾರ್ಕೋಡು, ಭುವಿ ಸಜೀಪ ಹಾಗೂ ಸುಭಿಕ್ಷಾ ಅನಿಲ್ ಆಯ್ಕೆ
14/03/2025, 21:37

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ ಮೌರ್ಯ ನಾರ್ಕೋಡು,ಭುವಿ ಸಜೀಪ ಹಾಗೂ ಸುಭಿಕ್ಷ ಅನಿಲ್ ಅವರು ಆಯ್ಕೆಯಾಗಿದ್ದಾರೆ.
ಮಾಸ್ಟರ್ ಮೌರ್ಯ ನಾರ್ಕೋಡು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ಮನೆಯ ಮುಕುಂದ ಮತ್ತು ಮಮತಾ ಅವರ ಪುತ್ರ. ಈತ ತನ್ನ ಚಿಕ್ಕ ವಯಸ್ಸಿನಿಂದಲೇ ಸಂಗೀತ, ಡ್ಯಾನ್ಸ್, ಕಥೆ ಹೇಳುವುದು, ಚೆಸ್, ಓದು ಮತ್ತು ಆಟೋಟ ಗಳಲ್ಲಿ ಮುಂಚೂಣಿಯಲ್ಲಿದ್ದಾನೆ. ಮೌರ್ಯ ತನ್ನ 5ನೇ ವಯಸ್ಸಿನಲ್ಲಿ ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಅವರಲ್ಲಿ ಆರಂಭಿಸಿ ನಂತರ ಸುಮನಾ ರಾವ್ ಪುತ್ತೂರು ಅವರಲ್ಲಿ ಪ್ರಸ್ತುತ ಸಂಗೀತ ಅಭ್ಯಾಸ ಮಾಡುತ್ತಿದ್ದಾನೆ.
ಶಾಸ್ತ್ರಿಯ ಸಂಗೀತವನ್ನು ಮಹಾಬಲೇಶ್ವರ ಬಿರ್ಮೂಕಜೆ ಅವರಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾನೆ.
ಡ್ಯಾನ್ಸ್ ತರಬೇತಿಯನ್ನು ಪಡಿದಿದ್ದು, ಹಲವಾರು ವೇದಿಕೆ ಗಳಲ್ಲಿ, ರಾಜ್ಯಮಟ್ಟದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾನೆ. ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರ ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಯಲ್ಲಿ ಬಹುಮಾನಗಳಿಸಿದ ಹೆಗ್ಗಳಿಕೆ ಈತನದ್ದು. ಬಾಲ್ಯ ಎಂಬ ಆಲ್ಬಂ ಸಾಂಗ್ ಲ್ಲಿ ಅಭಿನಯಿಸಿ, ಬೇಸಿಗೆ ಶಿಬಿರಗಳಲ್ಲಿ ನಾಟಕ ದಲ್ಲಿ ಅಭಿನಯಿಸಿದ್ದಾನೆ.
ಹಲವಾರು ವೇದಿಕೆಗಳಲ್ಲಿ ಹಾಡುಗಳನ್ನು ಹಾಡಿ ಜನರ ಮೆಚ್ಚುಗೆ ಗಳಿಸಿದ್ದಾನೆ.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ, ದೇಶ ಭಕ್ತಿ ಗೀತೆ, ಕಥೆ ಹೇಳುವ ಸ್ಪರ್ಧೆ ಯಲ್ಲಿ ಬಹುಮಾನ ಗಳಿಸಿದ್ದಾನೆ. ಹಾಗೆಯೇ ಚೆಸ್ ತರಬೇತಿಯನ್ನು ಹರಿಪ್ರಸಾದ್ ಕೊಯಿಂಗಾಜೆ ಅವರಲ್ಲಿ ಪಡೆಯುತ್ತಿದ್ದು, ಚೆಸ್ ಸ್ಪರ್ಧೆ ಯಲ್ಲಿ ಬಹುಮಾನ ಪಡೆದಿದ್ದಾನೆ. 2024ರ ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ ಹೆಗ್ಗಳಿಕೆ ಈತನದ್ದು.
ಸ್ಕೌಟ್ ಗೈಡ್ಸ್ ವತಿಯಿಂದ ನಡೆದ ಗೀತಗಾಯನ ಸ್ಪರ್ಧೆಯಲ್ಲಿ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದಾನೆ. ರಂಜಿನಿ ಅವರ ಮಾರ್ಗದರ್ಶನದಲ್ಲಿ ಗುರು ರಾಘವೇಂದ್ರ ಮಕ್ಕಳ ಕಲಾ ತಂಡದಲ್ಲಿ ಹಲವಾರು ವೇದಿಕೆಗಳಲ್ಲಿ ಹಾಡು, ಭಜನೆ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈತನದ್ದು. ಪ್ರಸ್ತುತ ಮೌರ್ಯ ನಾರ್ಕೋಡು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆ 4ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಉದಯ ಕುಮಾರ್ ಮತ್ತು ಪವಿತ್ರಾ ದಂಪತಿ ಪುತ್ರಿ ಭುವಿ ಸಜೀಪ. ಈಕೆ ಪ್ರಸ್ತುತ ಪಾಣೆಮಂಗಳೂರು ಎಸ್.ಎಲ್.ಎನ್.ಪಿ ವಿದ್ಯಾಲಯದಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ತನ್ನ ಸಣ್ಣ ವಯಸ್ಸಿನಲ್ಲಿಯೇ ಚಿತ್ರಕಲೆ, ಸಂಗೀತ, ಭರತನಾಟ್ಯವನ್ನು ಮೈಗೂಡಿಸಿಕೊಂಡಿರುವ ಭುವಿ ಚಿಣ್ಣರ ಬಣ್ಣ, ಮುಳಿಯ ಜ್ಯುವೆಲ್ಲರ್ಸ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಈಕೆ
ಚಿತ್ರಕಲೆಯನ್ನು ಮುಡಿಪು ಮಂದಾರ ಟ್ರಸ್ಟ್ ನ ಗುರುಗಳಾದ ಅರುಣ್ ಪ್ರಸಾದ್ ಹಾಗೂ ಶಾಲೆಯಲ್ಲಿ ಯಶವಂತ್ ನಾಯನಾಡು ಅವರಲ್ಲಿ, ಸಂಗೀತವನ್ನು ಗುರುಗಳಾದ ಶಶಿಕಲಾ, ಭರತನಾಟ್ಯವನ್ನು ಉಮಾ ಹೆಬ್ಬಾರ್ ಅವರಲ್ಲಿ ಕಲಿಯುತ್ತಿದ್ದಾಳೆ.
ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮುಖ್ಯಸ್ಥರಾದ ಪದ್ಮಶ್ರೀ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಗೂ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಭುವಿ ಅನೇಕ ಪ್ರತಿಭಾ ಕಾರಂಜಿ, ಹಾಗೂ 40 ಬೇರೆ ಬೇರೆ ಕಡೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾಳೆ.
6 ವರ್ಷದ ಸುಭಿಕ್ಷಾ ಅನಿಲ್ ಮುಂಡುಗೋಡ ಬ್ಲೂಮಿಂಗ್ ಬರ್ಡ್ಸ್ ಇಂಗ್ಲಿಷ್ ಮೀಡಿಯಂ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆ ಅನಿಲ್ ಕುಮಾರ್ ಹಾಗೂ ಶೈಲಜಾ ದಂಪತಿ ಪುತ್ರಿ.
ಹವ್ಯಾಸ: ಭರತನಾಟ್ಯ ಡ್ರಾಯಿಂಗ್ , ಕೂಚುಪುಡಿ ನೃತ್ಯ, ರಿಂಗ್ ಡ್ಯಾನ್ಸ್, ಹಾಡೋದು, ಕರಾಟೆ, ಭರತನಾಟ್ಯವನ್ನು ತನ್ನ 3ನೇ ವಯಸ್ಸಿನಿಂದ ನಾಟ್ಯಮಯೂರಿ ನೃತ್ಯ ಕಲಾಕೇಂದ್ರ ಮುಂಡಗೋಡ ಗುರುಗಳಾದ ಶಶಿರೇಖಾ ಬೈಜು ಅವರಲ್ಲಿ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಕರಾಟೆಯನ್ನು ಸುರೇಂದ್ರ ನಾಸರ್ಗಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಸಂಗೀತವನ್ನು ರೇಖಾ ಮರಾಠೆ ಅವರಲ್ಲಿ ಕಲಿಯುತ್ತಿದ್ದಾಳೆ. ಡ್ರಾಯಿಂಗ್ , ರಿಂಗ್ ಡಾನ್ಸ್ ಯೂಟ್ಯೂಬ್ ನೋಡ್ಕೊಂಡು ತಾನೇ ಅಭ್ಯಾಸ ಮಾಡುತ್ತಿದ್ದಾಳೆ. ಹಲವಾರು ಕಡೆ ಭರತನಾಟ್ಯ, ಕೂಚುಪುಡಿ ನೃತ್ಯ ಪ್ರದರ್ಶನ ನೀಡಿರುತ್ತಾಳೆ. ಗೀಸಾ ಅವಾರ್ಡ್ ರೆಕಾರ್ಡ ಭುಜಂಗಾಶನ ಮತ್ತು ಪರ್ವತಾಸನದಲ್ಲಿ ಮಾಡಿರುತ್ತಾಳೆ. ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಪ್ರತಿದಿನ ಭಾಗವಹಿಸಿ ಹಲವಾರು ಪ್ರಶಸ್ತಿಗಳು ಬಂದಿರುತ್ತದೆ.