2:48 AM Tuesday14 - January 2025
ಬ್ರೇಕಿಂಗ್ ನ್ಯೂಸ್
ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಏಪ್ರಿಲ್ ತಿಂಗಳ ವಿಜೇತರಾಗಿ ಮನಸ್ವಿ ಭಟ್ ಹಾಗೂ ಐಶಾನಿ ಆಯ್ಕೆ

10/05/2024, 17:23

ಮೂಡುಬಿದಿರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಟಾಪರ್ ಆಗಿ ಮನಸ್ವಿ ಭಟ್ ಹಾಗೂ ಐಶಾನಿ ಅವರು ಆಯ್ಕೆಯಾಗಿದ್ದಾರೆ.
ಮನಸ್ವಿ ಭಟ್ ಸುಳ್ಯ ಎಂಬ ಈ ಬಾಲ ಪ್ರತಿಭೆ ಅತೀ ಕಿರಿಯ ವಯಸ್ಸಿನಲ್ಲೇ ಹಲವಾರು ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನ ನೀಡಿ ಮಿಂಚಿದ ಬಹುಮುಖ ಪ್ರತಿಭೆ. ತನ್ನ 6ನೇ ವಯಸ್ಸಿನಿಂದ ಶಾಸ್ತ್ರೀಯ ಸಂಗೀತವನ್ನು ಕಾಂಚನ ಈಶ್ವರ ಭಟ್ ಮತ್ತು ಶಿಲ್ಪಾ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಈಕೆ ತನ್ನ 7ನೆಯ ವಯಸ್ಸಿನಿಂದ ಸುಗಮ ಸಂಗೀತವನ್ನು ಸಹ ಗಾನಸಿರಿ ಡಾ.ಕಿರಣ್ ಕುಮಾರ್ ಹಾಗೂ ಶ್ರೀಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ.
ಈಗಾಗಲೇ ಸುಮಾರು 30ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಂಗೀತ ಸುಧೆಯನ್ನು ಪಸರಿಸಿ ಕೆಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಚಿತ್ರಕಲೆಯ ಹವ್ಯಾಸವನ್ನು ಹೊಂದಿರುವ ಈ ಪ್ರತಿಭೆ ಗೀತಗಾಯನದಂತಹ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಇದಲ್ಲದೇ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ಸಕ್ರಿಯವಾಗಿದ್ದು, ಶಾಲೆಯಲ್ಲಿ ಪ್ರತಿ ವರ್ಷ ತರಗತಿಗೆ ಪ್ರಥಮವಾಗಿ ಅತ್ಯುನ್ನತ ಶ್ರೇಣಿಯನ್ನು ದಾಖಲಿಸುತ್ತಿರುವುದು ಈಕೆಯ ಶೈಕ್ಷಣಿಕ ಸಾಧನೆ. ಜೊತೆಗೆ ಕ್ರೀಡೆಯಲ್ಲಿ ಕೂಡ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಉತ್ತಮ ಥ್ರೋಬಾಲ್ ಕ್ರೀಡಾಪಟುವಾಗಿದ್ದಾಳೆ. ಮನೆಯಲ್ಲಿ ಸಹ ತನ್ನ ಅಜ್ಜಿಯ ಮಾರ್ಗದರ್ಶನದಿಂದ ನಿರಂತರವಾಗಿ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾಳೆ.
ಐಶಾನಿ ಸುಳ್ಯ ಎಂಬ 6ರ ಹರೆಯದ ಈ ಬಾಲ ಪ್ರತಿಭೆ ತನ್ನ 3ನೇ ವಯಸ್ಸನಿಂದಲೇ ಹಲವಾರು ವೇದಿಕೆಗಳಲ್ಲಿ ಮಿಂಚಿದ ಬಹುಮುಖ ಪ್ರತಿಭೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಸಂಗೀತ ನೃತ್ಯ ಪ್ರದರ್ಶನ ನೀಡಿದ್ದಾರೆ. ಇವರು ತನ್ನ 3ನೇ ವಯಸ್ಸಿನಲ್ಲಿ ದಾಯ್ಜಿವರ್ಲ್ಡ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ನಿರ್ಣಾಯಕರ ಪ್ರಶಂಸೆಗೆ ಪಾತ್ರರಾಗಿದ್ದಾಳೆ. ಸುದ್ದಿ ಚಾನೆಲ್ ನವರು ನಡೆಸಿದ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾಳೆ. ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಮತ್ತು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ರೋಟರಿ ಕ್ಲಬ್ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರು ಶಾಲೆಯಲ್ಲಿ ನಡೆದ ಅನೇಕ ಕ್ರೀಡೆ, ಚಿತ್ರಕಲೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳನ್ನು ಪಡೆದ ಇವರು ಓದುವುದರಲ್ಲಿಯೂ ಮುಂದೆ. ಇದ್ದಾಳೆ. ಈಕೆ ಚಿತ್ರಕಲೆಯನ್ನು ಪ್ರಸನ್ನ ಐವರ್ನಾಡು ರವರ ಬಳಿ ಕಲಿಯುತ್ತಿದ್ದಾಳೆ ಮತ್ತು ಸಂಗೀತಕ್ಕೆಇವರ ತಾಯಿ ಮತ್ತು ಅಣ್ಣನ ಸಹಾಯ ದಿಂದ ಕಲಿಯುತ್ತಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು