ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಡಿಸೆಂಬರ್ ತಿಂಗಳ ಟಾಪರ್ ಆಗಿ ಅಪ್ರಮೇಯ ಮತ್ತು ಶ್ರೀಸ್ತುತಿ ಆಯ್ಕೆ
09/01/2024, 12:15
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಅಪ್ರಮೇಯ ಹಾಗೂ ಶ್ರೀಸ್ತುತಿ ಆಯ್ಕೆಯಾಗಿದ್ದಾರೆ.
ಪುತ್ತೂರು ಕೆಮ್ಮಿಂಜೆ ನಿವಾಸಿ ಪ್ರವೀಣ್ ನಾಯಕ್ ಮತ್ತು
ಅಕ್ಷತಾ ದಂಪತಿಯ ಪುತ್ರ ಅಪ್ರಮೇಯ ಎರಡೂವರೆ ವರ್ಷದ ಪುಟ್ಟ ಬಾಲಕ. ಕನ್ನಡ ವರ್ಣಮಾಲೆ ಮತ್ತು ಇಂಗ್ಲಿಷ್ ವರ್ಣಮಾಲೆ, ಭಾರತದ 28 ರಾಜ್ಯಗಳು, ಮುಖ್ಯಮಂತ್ರಿಗಳ ಹೆಸರು, ಪಂಚಭೂತಗಳು, ಕಾಲಗಳು, ತಿಂಗಳುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಶಿಚಕ್ರ ಚಿಹ್ನೆಗಳು, ಕೆಲವು ಜಿಕೆ ಪ್ರಶ್ನೋತ್ತರಗಳು, 1ರಿಂದ10 ಅಂಕೆಗಳನ್ನು 4 ಭಾಷೆಗಳಲ್ಲಿ, ದೇಹದ ಭಾಗಗಳು, ಬಣ್ಣಗಳು, ಹಣ್ಣುಗಳು, ತರಕಾರಿಗಳು, ಪ್ರಾಣಿಗಳ ಗುರುತಿಸುವಿಕೆ , ಸೌರವ್ಯೂಹದ ಗ್ರಹಗಳು, ಇತ್ಯಾದಿ ಬಹುಮುಖ ವಿಷಯಗಳಲ್ಲಿ ಅತ್ಯುತ್ತಮವಾದ ಜ್ಞಾಪಕ ಶಕ್ತಿಯನ್ನು ನೋಡಿ,” ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್” ಸಂಸ್ಥೆ ಆತನನ್ನು ಹೆಮ್ಮೆಯಿಂದ ಪ್ರಶಂಸಿಸಿ ಗೌರವಿಸಿದೆ.”ವಿಜಯ ಕರ್ನಾಟಕ ಪತ್ರಿಕೆ”ಯ 2023ರ ಮುದ್ದುಕಂದ ಸ್ಪರ್ಧೆಯ ಬಹುಮಾನ ಪಡೆದಿದ್ದಾನೆ. ಏಳು ತಿಂಗಳ ಮಗುವಿದ್ದಾಗಲೇ ಕುಡಾಳ್ ದೇಶ್ಕರ್ ಗೆಳೆಯರ ಬಳಗದ ಮಕ್ಕಳ ಫೋಟೋ ಸ್ಪರ್ಧೆಯಲ್ಲಿ “ಪ್ರಥಮ”ಸ್ಥಾನ ಪಡೆದಿದ್ದು,2022ರ “ತುಳುನಾಡ ಬೇಬಿ ಮಾಡೆಲ್” ಟೈಟಲನ್ನು ಪಡೆದಿರುತ್ತಾನೆ. ಸುಗಮ ಸಂಗೀತ ಅಭ್ಯಾಸವನ್ನು ಕೂಡಾ ಅಭ್ಯಸಿಸುತ್ತಿದ್ದಾನೆ.
ಪದ್ಮಶ್ರೀ ಭಟ್ ನಿರ್ದೇಶನದ “ವಾಯ್ಸ್ ಆಫ್ ಆರಾಧನಾ” ತಂಡದ ಸಕ್ರಿಯ ಬಾಲಪ್ರತಿಭೆ ಅಪ್ರಮೇಯ ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸಿರುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ.
ಶ್ರೀಸ್ತುತಿ ಜಿ. ಕೆ. ಸಾಗರ ತಾಲೂಕಿನ ಗಿರೀಶ್ ಕೆ.ಕೆ. ಹಾಗೂ ಮಂಗಳಾ ದಂಪತಿಯ ಪುತ್ರಿ. ಈಕೆ ಶ್ರೀರಾಮಕೃಷ್ಣ ವಿದ್ಯಾಲಯ ಹೊಸನಗರದಲ್ಲಿ ಯುಕೆಜಿ ಓದುತ್ತಿದ್ದು ಸಂಗೀತ, ನೃತ್ಯ ಕತೆ ಹೇಳುವುದಾರಲ್ಲಿ ಆಸಕ್ತಿ ಹೊಂದಿರುತ್ತಾಳೆ.
ಶ್ರೀಸ್ತುತಿ ತನ್ನ 4ನೇ ವಯಸ್ಸಿನಲ್ಲಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಅವರು ಪ್ರತಿ ವಾರ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ 5 ಪ್ರಥಮ, 5 ದ್ವಿತಿಯ, 5 ತೃತೀಯ ಸ್ಥಾನ ಪಡೆದು ಜನಸ್ಪಂದನ ಕಲಾ ಸಿರಿ ರತ್ನ 2022 ಪ್ರಶಸ್ತಿ ಮತ್ತು ದಿವ್ಯ ಜ್ಯೋತಿ ಸಂಸ್ಥೆ ಬೆಂಗಳೂರು ಅವರು ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮಂಥನೋತ್ಸವ 2022 ಪ್ರಶಸ್ತಿ ಪಡೆದಿದ್ದಾಳೆ.
ವಾಯ್ಸ್ ಆಫ್ ಆರಾಧನಾ ಹಲವಾರು ತಿಂಗಳ ವಿಜೇತೆ ಯಾಗಿದ್ದಾಳೆ. ಭಗವದ್ಗೀತೆ, ಕವಿಗಳ ಹೆಸರು, ಜಿಲ್ಲೆಯ ಹೆಸರು ಹೇಳುತ್ತಾಳೆ.
ಹಲವು ವೇದಿಕೆಯಲ್ಲಿ ಕೃಷ್ಣ ವೇಷ ಸ್ಪರ್ಧೆ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.
ಶ್ರೀ ಶಾರದಾ ಕಲಾ ವೇದಿಕೆ, ನಮ್ಮ ಚಿಣ್ಣರ ಅರಮನೆ, ಕಲಾತ್ಮಕ ಜಗತ್ತು, ಎ. ಪಿ. ಎನ್. ಕ್ರಿಯೇಷನ್ ಅವರು ನಡೆಸಿದ ಸ್ಪರ್ಧೆಯಲ್ಲಿ ಬಾಗವಹಿಸಿ ಅಭಿನಂದನಾ ಪತ್ರ ಪಡೆದಿದ್ದಾಳೆ.