ಇತ್ತೀಚಿನ ಸುದ್ದಿ
ರೀಲ್ ಅಲ್ಲ ರಿಯಲ್ ನಾಗವಲ್ಲಿ ನಾನು; ಅಶ್ಲೀಲವಾಗಿ ಟ್ರೋಲ್ ಮಾಡಿದವನ ಕ್ಷಮೆ ಕೇಳುವಂತೆ ಮಾಡುವೆ: ಪ್ರತಿಭಾ ಕುಳಾಯಿ
21/10/2022, 22:42

ಮಂಗಳೂರು(reporterkarnataka.com):ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಮತ್ತೆ ಸುದ್ದಿಯಲ್ಲಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆಯ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ಪ್ರತಿಭಾ ಕುಳಾಯಿ ಅವರು ತನ್ನನ್ನು ಟ್ರೋಲ್ ಮಾಡಿದ ಕುರಿತು ಗರಂ ಆಗಿದ್ದಾರೆ.ತನ್ನನ್ನು ನಾಗವಲ್ಲಿ ಅಂತ ಟ್ರೋಲ್ ಮಾಡಿದಕ್ಕೆ ನಾನು ಸಿನಿಮಾದಲ್ಲಿರುವ ನಾಗವಲ್ಲಿ ಅಲ್ಲ.ಒರಿಜಿನಲ್ ನಾಗವಲ್ಲಿ, ಈ ಟ್ರೋಲ್‌ನ್ನು ರಾಜಕೀಯ ಬೆಳವಣಿಗೆಗೆ ಪೂರಕ ಅಂತ ನಾನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಬಗ್ಗೆ ಅಶ್ಲೀಲವಾಗಿ ಟ್ರೋಲ್ ಮಾಡಿದವನ ಮನೆಗೆ ಹೋಗಿ ಅವನಲ್ಲೂ ಕ್ಷಮೆ ಕೇಳುವಂತೆ ಮಾಡಿ ಆ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಮೊನ್ನೆ ಮೊನ್ನೆ ನಡೆದ ಉಗ್ರ ಪ್ರತಿಭಟನೆ ಬಳಿಕ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಿಳಾ ಪ್ರತಿಭಟನಾಕಾರನ್ನು ಗುರಿಯಾಗಿಸಿ ಕೆಟ್ಟ ಪದಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರ ಮೇಲೆ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಜಾಲತಾಣದಲ್ಲಿ ತೇಜೋವಧೆ ಮಾಡುವುದನ್ನು ಖಂಡಿಸಿದ್ದಾರೆ. ‘ನನ್ನನ್ನು ನಾಗವಲ್ಲಿ ಅಂತ ಟ್ರೋಲ್ ಮಾಡುತ್ತಿದ್ದಾರೆ. ನಾನು ಆ ಸಿನಿಮಾದಲ್ಲಿರುವ ನಾಗವಲ್ಲಿ ಅಲ್ಲ.
ನಾನು ಒರಿಜಿನಲ್ ನಾಗವಲ್ಲಿ. ಈ ಟ್ರೋಲ್‌ನ್ನು ರಾಜಕೀಯ ಬೆಳವಣಿಗೆಗೆ ಪೂರಕ ಅಂತ ನಾನು ಧನಾತ್ಮಕವಾಗಿ ಸ್ವೀಕರಿಸುತ್ತೇವೆ. ನನ್ನ ಮಾನಭಂಗ ಮಾಡುವಂತೆ ಮಾಡಿದವನ ಮನೆಗೆ ಹೋಗಿ ಕ್ಷಮೆ ಕೇಳುವಂತೆ ಮಾಡಿ ಆ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
ನಾನು ರಾಣಿ ಅಬ್ಬಕ್ಕನ ಊರಿನಲ್ಲಿ ಹುಟ್ಟಿದವಳು. ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಧೈರ್ಯಕ್ಕೆ ಮುಖ್ಯವಾದ ಕಾರಣ ನನ್ನ ವಿದ್ಯೆ. ಮಹಿಳಾ ಸಬಲೀಕರಣ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ನಾನು, ಇಷ್ಟೆಲ್ಲಾ ಕಲಿತ್ತಿರುವ ನಾನು ಇಂತಹ ಟ್ರೋಲ್‌ಗಳಿಗೆಲ್ಲ ಜಗ್ಗುವಳಲ್ಲ ಎಂದರು.
ಟೋಲ್‌ಗೇಟ್ ವಿರೋಧಿ ಹೋರಾಟದಲ್ಲಿ ನಾನು ಇನ್ನು ಮುಂದೆ ಕೂಡಾ ಭಾಗವಹಿಸುತ್ತೇನೆ.
ಏಕೆಂದರೆ ಇದು ಲಂಚ ಮಂಚದ ವಿಷಯ ಅಲ್ಲ. ಬಿಜೆಪಿ ನಾಯಕರ ವೀಡಿಯೋ ವೈರಲ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಯಾರೋ ಟ್ರೋಲ್ ಮಾಡಿ ಇದು ಕಾಂತಾರ 2 ಅಂತ ಹೇಳಿದ್ದಾರೆ.
ನಾನು ಹೇಳೇನೆ ಇದು ಕಾಂತಾರ 2 ಅಲ್ಲ. ಕಾಂತಾರ 3. ಕಾಂತಾರ 1 ಆದದ್ದು. ಕೋಡಿಕೆರೆಯ ಗೂಂಡಾಗಳನ್ನು 8 ವರ್ಷಗಳ ಹಿಂದೆ ಮಟ್ಟ ಹಾಕಿದ್ದಾಗ. ಕಾಂತಾರ 2-ಅಬ್ದುಲ್ ಸತ್ತಾರ್ ಎನ್ನುವ ಕಾಮುಕ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾಗ ಅವನಿಗೆ ಹೊಡೆದಿದ್ದಾಗ. ಈ ಹೋರಾಟದಲ್ಲಿ ನಾನು ಭಾಗವಹಿಸಿದ್ದು ಕಾಂತಾರ 3. ಇನ್ನು ಮುಂದೆ ಕಾಂತಾರ 4 ಯಾವುದು ಕೇಳಿದ್ರೆ ಸುರತ್ಕಲ್‌ನಲ್ಲಿ ಬೆಳೆದು ಬೃಹತ್ ಕಟ್ಟಡ. ಕಾಂತಾರ 5 MRPLನಲ್ಲಿ ನಮ್ಮ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಅದರ ವಿರುದ್ಧ ಹೋರಾಟ ಎಂದರು.
ಇನ್ನೊಮ್ಮೆ ನಾನು ನಾಗವಲ್ಲಿಯ ರೂಪ ತಾಳುತ್ತೇನೆ. ಬಿಜೆಪಿಯವರು ಮಾತೆತ್ತಿದ್ರೆ ಧರ್ಮ, ಹೆಣ್ಣು ಮಕ್ಕಳು ಗೌರವ ಅಂತಾರಲ್ವಾ. ಅವರ ಸಂಸ್ಕೃತಿ ಈಗ ಸೋಷಿಯಲ್ ಹೆಣ್ಣು ಮಕ್ಕಳಿಗೆ ಕಾಳಿ ದೇವಿ ಎಂಬ ಎರಡು ರೂಪವಿದೆ. ನಾನು ಆ ಹೋರಾಟದಲ್ಲಿ ಯಾವುದೇ ಬಿಜೆಪಿ ಮುಖಂಡರಿಗೆ ಧಿಕ್ಕಾರ ಕೂಗಲಿಲ್ಲ. ಪೊಲೀಸರು ಬಂದು ನನ್ನ ಹಿಡಿದಾಗ ಮಾನಕ್ಕೆ ಹೆದರಿ ನಾನು ಕಿರುಚಿದ್ದೇನೆಯೇ ಹೊರತು ಇನ್ಯಾವುದಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಟ್ರೋಲ್ ಮಾಡಿದವನ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿದರು.
ಮುಂಬರುವ ದಿನದಲ್ಲಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಇದು ಇನ್ನೂ ವಿಕೋಪಕ್ಕೆ ಹೋದಾಗ ಬಿಜೆಪಿಯ ನಾಯಕರು ಬಂದು ‘ಇಲ್ಲ ಇಲ್ಲ, ಅದು ಬಿಜೆಪಿ ಕಾರ್ಯಕರ್ತರು ಮಾಡಿದ್ದಲ್ಲ ಯಾರೋ ಜಿಹಾದಿಗಳು ಮಾಡಿರಬೇಕು’ ಎಂದು ಹೇಳಬಹುದೇನೋ,ನಾನು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಕೊಡುತ್ತಿದ್ದೇನೆ. ಅವರೂ ನ್ಯಾಯ ಕೊಡುವಲ್ಲಿ ವಿಫಲವಾದರೆ ಮುಂದೆ ಯಾವ ಹೆಜ್ಜೆ ಇಡಬೇಕು ಎಂಬ ಅರಿವೂ ನನಗಿದೆ’ ಎಂದು ಎಚ್ಚರಿಸಿದರು.