ಇತ್ತೀಚಿನ ಸುದ್ದಿ
ರೆಡ್ ಕ್ರಾಸ್ ದ.ಕ.ಜಿಲ್ಲಾ ಆಡಳಿತ ಮಂಡಳಿ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡಕ್ಕೆ ಜಯ
23/02/2026, 19:57
ಮಂಗಳೂರು(reporterkarnataka.com): ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ
ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.
ಸಿಎ ಶಾಂತಾರಾಮ ಶೆಟ್ಟಿ -1005, ಡಾ.ಸುಮನ.ಬಿ.-876,
ಡಾ.ಸತೀಶ್ ರಾವ್-870,ಡಾ. ಬಿ.ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844,ಪುಷ್ಪರಾಜ್ ಜೈನ್-835, ಪಿ.ಬಿ.ಹರಿಪ್ರಸಾದ್ ರೈ-810,ಯತೀಶ್ ಬೈಕಂಪಾಡಿ-797, ಸಚೇತ್ ಸುವರ್ಣ- 762, ಗುರುದತ್ .ಎಂ.ನಾಯಕ್-762. ಮತ ಗಳಿಸಿ ಜಯಶಾಲಿಗಳಾದರು.
ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ.22 ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.
ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ .ಯು. ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ .ಬಿ. ಕಾರ್ಯ ನಿರ್ವಹಿಸಿದ್ದರು.












