ಇತ್ತೀಚಿನ ಸುದ್ದಿ
ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ?
20/12/2024, 21:21
ಬೆಳಗಾವಿ(reporterkarnataka.com): ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸ್ ವಾಹನದಲ್ಲಿ ರಾತ್ರಿಯಿಡೀ ಸುತ್ತಾಟ ನಡೆಸಿದ ಬಗ್ಗೆ ಬೆಳಕಿಗೆ ಬಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಸಿ.ಟಿ. ರವಿ ಅವರನ್ನು ಪೊಲೀಸ್ ವಾಹನದಲ್ಲಿ ಸುತ್ತಾಟ ನಡೆಸಬೇಕಾಯಿತು ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಸಿ.ಟಿ. ರವಿ ಅವರ ಬಂಧನವಾದ ಬಳಿಕ ಬಹಳಷ್ಟು ಬೆಂಬಲಿಗರು ಗುಂಪು ಸೇರತೊಡಗಿದರು. ಅವರನ್ನು ಬೇರೆ ಬೇರೆ ಠಾಣೆಗೆ ವರ್ಗಾಯಿಸಲಾಯಿತು. ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಅವರನ್ನು ವಾಹನದಲ್ಲಿ ಸುತ್ತಾಟ ನಡೆಸಬೇಕಾಯಿತು ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.