ಇತ್ತೀಚಿನ ಸುದ್ದಿ
ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ 244 ಸದಸ್ಯರ ಪಟ್ಟಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು
23/05/2021, 18:53
ಮಂಗಳೂರು(reporterkarnataka news): ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ 244 ಸದಸ್ಯರ ಪಟ್ಟಿಯಲ್ಲಿ ಸೇರಿದ್ದು, ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಅವರು ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ಮೂಲಕ ಯೆನೆಪೋಯ ಆಸ್ಪತ್ರೆಗೆ 5 ಲೀಟರ್ ಸಾಮರ್ಥ್ಯದ 46 ಅಮ್ಲಜನಕ ಸಾಂದ್ರಕಗಳು, 46 ವೋಲ್ಟೆಜ್ ಅಡಾಪ್ಟರ್‌ಗಳು ಮತ್ತು 11,500 ಎನ್ 95 ಮುಖಕವಚಗಳನ್ನು ಉಚಿತವಾಗಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ನಿರ್ದೇಶಕ ಡಾ.ಆರ್.ಎ.ಬಾದ್ವ ಮತ್ತು ಮುಂಬೈನ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ಸಂಯೋಜಕ ಡಾ.ಸಿ.ಎಸ್.ಪ್ರಮೇಶ್ ಹಲವಾರು ವೆಬಿನಾರ್ ಆಯೋಜಿಸುವ ಮೂಲಕ ಕೋವಿಡ್-19
ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಸಾಕಷ್ಟು ಉಪ ಕ್ರಮಗಳನ್ನು ಕೈಗೊಂಡಿದ್ದರು. ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ನಿರ್ವಹಣೆಗಾಗಿ ಶ್ರಮಿಸಿದ್ದರು. ಸದ್ಯ ನಮ್ಮ ದೇಶ ಎದುರಿಸುತ್ತಿರುವ ಎರಡನೇ ಅಲೆಯಲ್ಲಿ ಕೋವಿಡ್ ರೋಗಿಗಳಿಗೆ ಅಮ್ಲಜನಕ ಸಾಂದ್ರಕಗಳನ್ನು ಚಿಕಿತ್ಸೆ ನೀಡುವ ಕೇಂದ್ರಗಳಿಗೆ ವಿತರಿಸುವ ಮೂಲಕ ಅಗತ್ಯ ನೆರವನ್ನು ನೀಡುತ್ತಲಿದ್ದಾರೆ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಯೆನೆಪೋಯ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.